AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ನೋಡೋಣ

ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರ ವೈರಲ್‌ ಆಗಿದ್ದು, ಕಾಡಿನಂತಿರುವ ಪ್ರದೇಶದಲ್ಲಿ ಗೂಬೆಯೊಂದು ಅಡಗಿದೆ. ನೀವು ನಿಮ್ಮ ಗಮನವನ್ನು ಸಂಪೂರ್ಣವಾಗಿ ಈ ಚಿತ್ರದ ಮೇಲೆ ಕೇಂದ್ರೀಕರಿಸಿ ಈ ಪಕ್ಷಿಯನ್ನು ಕಂಡುಹಿಡಿಯಿರಿ.

Optical Illusion: ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ನೋಡೋಣ
ಆಪ್ಟಿಕಲ್‌ ಇಲ್ಯೂಷನ್‌Image Credit source: Social Media
ಸಾಯಿನಂದಾ
|

Updated on:Oct 13, 2025 | 10:45 AM

Share

ಒಗಟು (puzzles) ಬಿಡಿಸುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಒಗಟಿನ ಚಿತ್ರಗಳು ಮೆದುಳು ಹಾಗೂ ಬುದ್ಧಿಗೆ ಕೆಲಸ ನೀಡುತ್ತದೆ. ಕೆಲವೊಮ್ಮೆ ಆಪ್ಟಿಕಲ್‌ ಇಲ್ಯೂಷನ್‌ (optical illusion) ಸ್ವಲ್ಪ ಟ್ರಿಕ್ಕಿ ಆಗಿ ಕಾಣಿಸುತ್ತದೆಯಾದರೂ ಈ ಸವಾಲುಗಳು ನಿಜಕ್ಕೂ ಖುಷಿಯನ್ನು ನೀಡುತ್ತದೆ. ಆದರೆ ರೆಡ್ಡಿಟ್ ಖಾತೆಯಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಹೀಗಾಗಿ ನೀವು ನಿರ್ದಿಷ್ಟ ಸಮಯದೊಳಗೆ ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು ಕಂಡುಹಿಡಿಯಬಹುದೇ? ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧವಿದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ.

ವೈರಲ್‌ ಚಿತ್ರದಲ್ಲಿ ಏನಿದೆ?

ಈ ಆಪ್ಟಿಕಲ್ ಭ್ರಮೆಯನ್ನು AbsolutZer0_v2 ಎಂಬ ಬಳಕೆದಾರರು ಸಬ್‌ರೆಡಿಟ್ (FindTheSniper)  ಫೈಂಡ್ ದಿ ಸ್ನೈಪರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ನೋಟದಲ್ಲಿ, ನಾವು ಎರಡು ಎತ್ತರದ ಮರದ ಕಾಂಡಗಳನ್ನು ರಚನೆಯನ್ನೊಳಗೊಂಡ ಒರಟಾದ ತೊಗಟೆಯನ್ನು ನೋಡಬಹುದು. ದಟ್ಟವಾದ ಹಸಿರು ಸಸ್ಯವರ್ಗದಿಂದ ಆವೃತವಾಗಿದ್ದು, ಸೌಮ್ಯವಾದ ಬೆಳಕು ಶಾಂತ ಮತ್ತು ನೈಸರ್ಗಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಚಿತ್ರದಲ್ಲಿ ಗೂಬೆಯೊಂದು ಅಡಗಿದೆ. ನೀವು ಕೇವಲ 10 ಸೆಕೆಂಡುಗಳಲ್ಲಿ ಈ ಪಕ್ಷಿಯನ್ನು ಪತ್ತೆ ಹಚ್ಚಬೇಕು.

ಈ ಸವಾಲನ್ನು ನೀವು ಸ್ವೀಕರಿಸಲು ಸಿದ್ಧವಿದ್ದೀರಾ?

ಮೊದಲಿಗೆ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೋಡಿದಾಗ ನೀವು ಗೊಂದಲಕ್ಕೆ ಒಳಗಾಗಬಹುದು. ಈ ಚಿತ್ರವು ಭ್ರಮೆಯನ್ನು ಉಂಟು ಮಾಡಬಹುದು. ಕಾಡಿನ ಪ್ರದೇಶದಲ್ಲಿ ಮರೆ ಮಾಡಲಾದ ಗೂಬೆಯನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೀವು ಸರಿಯಾಗಿ ಗಮನಿಸಿ ಉತ್ತರ ಕಂಡು ಹಿಡಿಯಲು ಪ್ರಯತ್ನಿಸಿ, ಈ ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಿ ಎಂದು ಭಾವಿಸುತ್ತೇವೆ.

ಇದನ್ನೂ ಓದಿ
Image
ಈ ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಕಂಡುಹಿಡಿಯಿರಿ
Image
ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಗುರುತಿಸಿ
Image
ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
Image
ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು ಕಂಡು ಹಿಡಿದ್ರೆ ನೀವು ಜಾಣರು ಎಂದರ್ಥ

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಕಂಡುಹಿಡಿಯಿರಿ

ನಿಮ್ಮ ಕಣ್ಣಿಗೆ ಗೂಬೆಯೂ ಕಾಣಿಸಿತೇ?

ಕಾಡಿನ ಪ್ರದೇಶದಲ್ಲಿ ಮರೆ ಮಾಡಿರುವ ಗೂಬೆಯನ್ನು ಕಂಡುಹಿಡಿಯುವುದು ಸ್ವಲ್ಪ ಕಷ್ಟಕರ. ಇಲ್ಲಿ ಗೂಬೆ ತನ್ನನ್ನು ತಾನು ಎಷ್ಟು ಚೆನ್ನಾಗಿ ಮರೆಮಾಡಿಕೊಂಡಿತ್ತೆಂದರೆ, ವೀಕ್ಷಣಾ ಕೌಶಲ್ಯ ಹೊಂದಿದವರು ಗೂಬೆಯನ್ನು ಕಂಡುಹಿಡಿಯಲು ಸಾಧ್ಯವಾಗದು. ಗೂಬೆ ಎಲ್ಲಿದೆ ಎಂದು ಹುಡುಕುವುದು ನಿಮಗೆ ಕಷ್ಟವಾದರೆ ಸಣ್ಣ ಸುಳಿವನ್ನು ನಾವು ನಿಮಗೆ ನೀಡುತ್ತೇವೆ. ಎಡ ಮರದಲ್ಲಿ ಗೂಬೆಯನ್ನು ಮರೆ ಮಾಡಲಾಗಿದೆ. ಗೂಬೆ ಎಡ ಮರದೊಳಗೆ ಅಡಗಿಕೊಂಡಿದ್ದು ಪಕ್ಷಿಯ ಕಣ್ಣುಗಳು ಗೋಚರಿಸುವುದಿಲ್ಲ. ಗೂಬೆಯ ಗರಿಗಳು ಮಾತ್ರ ಗೋಚರಿಸುತ್ತವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Mon, 13 October 25

Follow Us
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ