Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡಗಳನ್ನು ಗುರುತಿಸಿ
ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣು ಹಾಗೂ ಮೆದುಳಿಗೆ ಸವಾಲೊಡ್ದುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಆದರೆ ಇಂತಹ ಒಗಟಿನ ಆಟಗಳನ್ನು ಬಿಡಿಸಲು ನೀವು ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಅಡಗಿರುವ ಒಟ್ಟು ಪಾಂಡಗಳು ಎಷ್ಟು ಎನ್ನುವುದನ್ನು ನೀವು ಹೇಳಬೇಕು.

ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಈ ಒಗಟಿನ ಚಿತ್ರಗಳು ಭ್ರಮೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಈ ಒಗಟನ್ನು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿ ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸುವಲ್ಲಿ ಸೋಲುತ್ತಾರೆ. ಆದರೆ ಈ ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಸುಲಭವಾಗಿ ತಿಳಿಯಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಸರಳವಾಗಿ ಕಂಡರೂ ಟ್ರಿಕ್ಕಿಯಾಗಿದೆ. ಎಐ ರಚಿಸಿದ ಆಪ್ಟಿಕಲ್ ಭ್ರಮೆಯುಳ್ಳ ಕಾಡಿನ ಚಿತ್ರದಲ್ಲಿ ಪಾಂಡಗಳು ಅಡಗಿ ಕುಳಿತಿದ್ದು, ಒಟ್ಟು ಎಷ್ಟು ಪಾಂಡಗಳಿವೆ ಎಂದು ಹೇಳುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ ಅಂತಾದ್ರೆ ಕೂಡಲೇ ಈ ಚಿತ್ರದತ್ತ ಕಣ್ಣು ಹಾಯಿಸಿ.
ಈ ಚಿತ್ರದಲ್ಲಿ ಏನಿದೆ?
ಚಿತ್ರವನ್ನು ಕೈಯಿಂದ ಬಿಡಿಸಿದ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅರಣ್ಯದ ಮಧ್ಯದಲ್ಲಿ ಶಾಂತವಾಗಿ ಕುಳಿತಿರುವ ದೊಡ್ಡ ಪಾಂಡವು ನಿಮ್ಮ ಕಣ್ಣಿಗೆ ಬೀಳುತ್ತದೆ. ಮೊದಲ ನೋಟದಲ್ಲಿ, ಚಿತ್ರವು ಪ್ರಕೃತಿಯ ಸರಳ ರೇಖಾಚಿತ್ರದಂತೆ ಕಂಡರೂ ಇಲ್ಲಿ ಪಾಂಡಗಳ ಮುಖಗಳಿವೆ. ಮರಗಳು, ಪೊದೆಗಳು ಹಾಗೂ ಬಂಡೆಗಳ ಹಿನ್ನೆಲೆಯಲ್ಲಿ ಹಲವಾರು ಪಾಂಡಗಳು ಅಡಗಿ ಕುಳಿತಿದೆ. ಈ ಚಿತ್ರದಲ್ಲಿ ಎಷ್ಟು ಪಾಂಡಗಳು ನಿಜವಾಗಿ ಇವೆ ಎಂದು ಎಣಿಸಿ. ಒಟ್ಟು ಪಾಂಡಗಳನ್ನು ಗುರುತಿಸಲು ತಾಳ್ಮೆ, ತೀಕ್ಷ್ಣವಾದ ಕಣ್ಣುಗಳೊಂದಿಗೆ ಚಿತ್ರದ ಪ್ರತಿಯೊಂದು ಮೂಲೆಯನ್ನು ಪರೀಕ್ಷಿಸುವುದು ಬಹಳ ಮುಖ್ಯವಾಗುತ್ತದೆ.
ಇದನ್ನೂ ಓದಿ:Optical Illusion: ಜಸ್ಟ್ 12 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಿರಿ
ನಿಮ್ಮ ಕಣ್ಣಿಗೆ ಕಂಡ ಪಾಂಡಗಳೆಷ್ಟು?
ಪ್ರತಿಯೊಂದು ಭ್ರಮೆ ಚಿತ್ರವು ತನ್ನೊಂದಿಗೆ ಒಂದು ನಿಗೂಢ ಅಂಶವನ್ನು ಒಳಗೊಂಡಿರುತ್ತದೆ. ನೋಡುಗರ ತಮ್ಮ ತಾಳ್ಮೆ ಹಾಗೂ ದೃಷ್ಟಿಯನ್ನು ಕೇಂದ್ರೀಕರಿಸಿ ಪಾಂಡಗಳೆಷ್ಟು ಎಂದು ಹೇಳಿ. ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಪಾಂಡಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದೀರಾ?. ಇಲ್ಲಿ ಅಡಗಿರುವ ಒಟ್ಟು ಪಾಂಡಗಳು ಎಷ್ಟು ಎನ್ನುವುದನ್ನು ನಿಖರವಾಗಿ ಹೇಳಿದರೆ ನಿಮ್ಮದು ಹದ್ದಿನ ಕಣ್ಣು ಎಂದರ್ಥ. ನೀವು ನಿಖರ ಉತ್ತರ ಹುಡುಕಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಒಟ್ಟು ಪಾಂಡಗಳೆಷ್ಟು ಎನ್ನುವುದನ್ನು ಹೇಳುತ್ತೇವೆ. ಈ ಚಿತ್ರದಲ್ಲಿ ಒಟ್ಟು ಇರುವ ಪಾಂಡಗಳ ಸಂಖ್ಯೆ 16. ಚಿತ್ರವನ್ನು ಗಮನಿಸಿ ಸೂಕ್ಷ್ಮವಾಗಿ ಎಣಿಸಿ ಉತ್ತರ ಸರಿ ಇದೆಯೇ ಎಂದು ನೋಡಿ
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








