Video: ಕಿಲಾಡಿ ಜೋಡಿ; ತಾನ್ ಕುಡಿಯೋದಲ್ದೆ ನಾಯಿಗೂ ಎಣ್ಣೆ ಕುಡಿಸಿ ತೂರಾಡುತ್ತಾ ಹೋದ ವ್ಯಕ್ತಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯಲ್ಲ. ಈ ವಿಡಿಯೋ ನೋಡಿದ ಮೇಲೆ ಎಂತೆಂತ ಮನುಷ್ಯರು ಇರ್ತಾರೆ ಎಂದು ಅನಿಸಿದ್ರು ತಪ್ಪಿಲ್ಲ. ವ್ಯಕ್ತಿಯೊಬ್ಬನು ತಾನು ಕುಡಿದು ನಾಯಿಗೂ ಎಣ್ಣೆ ಕುಡಿಸಿದ್ದು, ಮುಂದೆ ಆಗಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ವಿಡಿಯೋ ನೋಡಿದ ನೆಟ್ಟಿಗರು ಈ ವ್ಯಕ್ತಿಯ ವಿರುದ್ಧ ಗರಂ ಆಗಿದ್ದಾರೆ.

ಕೋತಿ (Monkey) ತಾನು ಕೆಡೋದಲ್ಲದೇ ವನನೆಲ್ಲಾ ಕೆಡಿಸ್ತು ಎನ್ನುವ ಮಾತಿದೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಈ ಮಾತು ನಿಜವೆನಿಸುತ್ತದೆ. ಕನಿಷ್ಠ ಪ್ರಜ್ಞೆಯಿಲ್ಲದೇ ವರ್ತಿಸುವ ಜನರನ್ನು ಕಂಡಾಗ ಏನಪ್ಪಾ ಕಾಲ ಬಂತು ಎಂದು ಅನಿಸುವುದು ನಿಜ. ಇಲ್ಲೊಬ್ಬ ಕುಡುಕಮಹಾಶಯ ತಾನು ಕುಡಿದದ್ದಲ್ಲದೇ ಶ್ವಾನಕ್ಕೂ (Dog) ಎಣ್ಣೆ ಕುಡಿಸಿದ್ದಾನೆ. ತನ್ನ ಎಣ್ಣೆ ಪಾರ್ಟರ್ ಜೊತೆಗೆ ತೂರಾಡುತ್ತಾ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಕ್ಲಿಪಿಂಗ್ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.
ರಘುಮೂರ್ತಿ (@raghumurthy77) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಇವನ್ಯಾರ್ ಗುರು ತಾನ್ ಕುಡಿಯೋದಲ್ದೆ ನಾಯಿಗೂ ಕುಡುಸ್ಕೊಂಡು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ನಾಯಿಗೂ ಎಣ್ಣೆ ಕುಡಿಸಿದ್ದಾನೆ. ವ್ಯಕ್ತಿಯ ಕೈಯಲ್ಲಿನ ಎಣ್ಣೆ ತುಂಬಿದ ಕವರ್‌ನ್ನು ಕಾಣಬಹುದು. ಎಣ್ಣೆಯ ಮತ್ತಿನಲ್ಲಿ ವ್ಯಕ್ತಿ ಹಾಗೂ ಶ್ವಾನವು ತೂರಾಡುತ್ತಾ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇವನ್ಯಾರ್ ಗುರು ತಾನ್ ಕುಡಿಯೋದಲ್ದೆ ನಾಯಿಗೂ ಕುಡುಸ್ಕೊಂಡು 😂😂😂 pic.twitter.com/npG2wP4qjV
— wHatNext 🚩 (@raghunmurthy77) October 13, 2025
ಇದನ್ನೂ ಓದಿ:Video: ಪುಟ್ಟ ಮಗುವಿಗೆ ತಾಯಿ ಕಥೆ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ಅಕ್ಟೋಬರ್ 13 ರಂದು ಶೇರ್ ಮಾಡಲಾದ ಈ ವಿಡಿಯೋವು ಇದುವರೆಗೂ ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ನಿಯತ್ತು ಅಂದ್ರೆ ಇದೇ ಬ್ರದರ್ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಹೌದು ನೋಡೋರಿಗೆ ಏನೋ ಚೇಷ್ಟೆ ಆಗಿರಬಹುದು, ಆದರೂ ಇದರಲ್ಲಿ ಏನೋ ಒಂಥರಾ ಗಿಮಿಕು ಇದೆ ಅಲ್ವಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೋತಿ ತಾನು ಕೆಡುವುದಲ್ಲದೇ ವನನ್ನೆಲ್ಲಾ ಕೆಡಿಸ್ತು ಅಂತಾರೆ ಹಂಗೆ ಆಯ್ತು ಎಂದು ಹೇಳಿದ್ದಾರೆ. ಇನ್ನು ಕೆಲವರು ನಗುವ ಇಮೋಜಿ ಕಳುಹಿಸಿ ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Wed, 15 October 25








