Video: ಒಂದಲ್ಲ ಎರಡಲ್ಲ 28 ಗೋಲ್ಡನ್ ರಿಟ್ರೈವರ್ ಶ್ವಾನಗಳ ಜತೆ ಬೆಂಗಳೂರಿನ ಮಹಿಳೆಯ ವಾಕಿಂಗ್
ವಾಕಿಂಗ್ ವೇಳೆ ತಮ್ಮ ಮನೆಯ ಮುದ್ದಿನ ಶ್ವಾನಗಳನ್ನು ತಮ್ಮೊಂದಿಗೆ ಕರೆದುಕೊಂಡು ಬರುವವರನ್ನು ನೀವು ನೋಡಿರುತ್ತೀರಿ. ಆದರೆ ಬೆಂಗಳೂರಿನ ಈ ಮಹಿಳೆಯ ಶ್ವಾನ ಪ್ರೀತಿ ಕಂಡರೆ ನಿಮಗೆ ಅಚ್ಚರಿಯಾಗೋದು ಖಂಡಿತ. ಒಂದಲ್ಲ ಎರಡಲ್ಲ ಬರೋಬ್ಬರಿ 28 ಗೋಲ್ಡನ್ ರಿಟ್ರೈವರ್ ಶ್ವಾನಗಳು ಈಕೆಯ ಒಡನಾಡಿಗಳು. ಈ ಕುರಿತಾದ ಅಪರೂಪದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು, ಸೆಪ್ಟೆಂಬರ್ 23: ಕೆಲವರಿಗೆ ಶ್ವಾನಗಳೆಂದರೆ (Dogs) ಎಲ್ಲಿಲ್ಲದ ಪ್ರೀತಿ, ಹೀಗಾಗಿ ಮನೆಯ ಶ್ವಾನಗಳನ್ನು ಮನೆಯ ಸದಸ್ಯರಂತೆ ನೋಡಿಕೊಳ್ತಾರೆ. ಎಲ್ಲಾದ್ರೂ ಹೊರಗಡೆ ಹೊರಟರೆ ಅವುಗಳನ್ನು ಕೂಡ ತಮ್ಮ ಜೊತೆಗೆ ಕರೆದುಕೊಂಡು ಹೋಗ್ತಾರೆ. ಈ ದೃಶ್ಯಗಳನ್ನು ನೋಡುವಾಗ ನಿಜಕ್ಕೂ ಖುಷಿಯಾಗುತ್ತದೆ. ಆದರೆ ಬೆಂಗಳೂರಿನ ಆರ್ ಟಿ ನಗರದಲ್ಲಿ (RT Nagar of Bengaluru) ಮಹಿಳೆಯೊಬ್ಬರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ, ಕಾರಣ ಈ ಶ್ವಾನಗಳು. 28 ಗೋಲ್ಡನ್ ರಿಟ್ರೈವರ್ ಶ್ವಾನಗಳ ಜೊತೆ ಬೆಂಗಳೂರಿನ ಮಹಿಳೆ ವಾಕ್ ಬರುವ ದೃಶ್ಯವಿದಾಗಿದೆ. ಯಾವುದೇ ಬೆಲ್ಟ್ ಹಾಕದೇ ಮುದ್ದಿನ ಶ್ವಾನಗಳನ್ನು ಬೆಂಗಳೂರಿನ ರಸ್ತೆಯಲ್ಲಿ ವಾಕಿಂಗ್‌ಗೆ ಕರೆದುಕೊಂಡು ಬರುವ ಈ ವಿಡಿಯೋ ಕ್ಲಿಪಿಂಗ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಎಕ್ಸ್ ಫ್ಲೋರೇರಾ (xploreraa) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ 28 ನಾಯಿಗಳು, ಒಂದು ವಿಶಾಲ ಹೃದಯ, ಬೆಂಗಳೂರಿನ ಆರ್‌ಟಿ ನಗರದ ನಾಯಿ ಪ್ರಿಯ ಆಂಟಿಯನ್ನು ಭೇಟಿ ಮಾಡಿ ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು 28 ಗೋಲ್ಡನ್ ರಿಟ್ರೈವರ್ ಶ್ವಾನಗಳ ಜೊತೆ ಬೆಂಗಳೂರಿನ ಮಹಿಳೆ ವಾಕಿಂಗ್ ಬಂದಿದ್ದು ಯಾವುದೇ ಬೆಲ್ಟ್ ಹಾಕದೇ ಇದ್ರೂ ಸಾರ್ವಜನಿಕರಿಗೆ ತೊಂದರೆ ಕೊಡದೇ ಈ ಶ್ವಾನಗಳು ಶಾಂತ ಸ್ಥಿತಿಯಲ್ಲಿ ವರ್ತಿಸಿರುವುದು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋಗೆ ಹಿನ್ನಲೆ ಧ್ವನಿಯನ್ನು ನೀಡಲಾಗಿದ್ದು, ಬೆಂಗಳೂರಿನ ಆರ್‌ಟಿ ನಗರದಲ್ಲಿ ಮಹಿಳೆಯೊಬ್ಬರು 28 ಗೋಲ್ಡನ್ ರಿಟ್ರೈವರ್‌ಗಳೊಂದಿಗೆ ನಡೆದುಕೊಂಡು ಹೋಗುವುದನ್ನು ನಾವು ನೋಡಿದೆವು. ಎಲ್ಲಾ ಶ್ವಾನಗಳು ಈ ಮಹಿಳೆಗೆ ಹೊಂದಿಕೊಂಡು, ಸಂತೋಷವಾಗಿರುವಂತೆ ಕಾಣುತ್ತಿದೆ. ಮಹಿಳೆಯೂ ಕೂಡ ಶಾಂತವಾಗಿರುವಂತೆ ಕಾಣುತ್ತಿದ್ದು, ಶ್ವಾನಗಳೊಂದಿಗೆ ನಗುತ್ತಿದ್ದಳು. ಈಗಿನ ಕಾಲದಲ್ಲಿ ನಿಷ್ಠಾವಂತ ಸ್ನೇಹಿತರು ಕಾಣಸಿಗುವುದೇ ಅಪರೂಪ. ಆದರೆ ಪ್ರೀತಿ ಮತ್ತು ನಿಷ್ಠೆ ಈ ನಾಲ್ಕು ಕಾಲುಗಳಿರುವ ಶ್ವಾನಗಳಲ್ಲಿಯೂ ಇರುತ್ತದೆ ಎಂದು ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ:Video: ಜಸ್ಟ್ ಮಿಸ್, ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ಶ್ವಾನ
ಈ ವಿಡಿಯೋವನ್ನು ಏಳು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರ ನಾನು ಈಕೆಯಂತೆ ಶ್ರೀಮಂತೆಯಾಗಬೇಕು ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಆಕೆಯನ್ನು ನೋಡಿದರೆ ನಿಜಕ್ಕೂ ಹೊಟ್ಟೆ ಕಿಚ್ಚಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅತ್ಯದ್ಭುತ ಮಹಿಳೆ ಎಂದರೆ ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 am, Tue, 23 September 25








