AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದ ಚಕ್ರದ ಬಳಿ ಕುಳಿತು ಪವಾಡದಂತೆ ಕಾಬೂಲ್​ನಿಂದ ದೆಹಲಿಗೆ ಬಂದ 13 ವರ್ಷದ ಅಫ್ಘಾನ್ ಬಾಲಕ!

ಕಾಬೂಲ್ ನಿಂದ ದೆಹಲಿಗೆ 94 ನಿಮಿಷಗಳ ವಿಮಾನದಲ್ಲಿ ಹಿಂಬದಿ ಚಕ್ರದ ಸಂದಿಯಲ್ಲಿ ಕುಳಿತುಕೊಂಡು ಅಫ್ಘಾನ್ ದೇಶದ 13 ವರ್ಷದ ಬಾಲಕನೊಬ್ಬ ದೆಹಲಿಗೆ ತಲುಪಿದ್ದಾನೆ. ಅಫ್ಘಾನಿಸ್ತಾನದ 13 ವರ್ಷದ ಬಾಲಕನೊಬ್ಬ ಭಾನುವಾರ (ಸೆಪ್ಟೆಂಬರ್ 21) ವಿಮಾನದ ಹಿಂದಿನ ಚಕ್ರದ ಅಡಿ ಅಡಗಿಕೊಂಡು ಭಾರತಕ್ಕೆ ರಹಸ್ಯವಾಗಿ ವಿಮಾನ ಹತ್ತಿದ್ದಾನೆ. ವಿಮಾನದ ಹೊರಗೆ ಅಡಗಿ ಕುಳಿತು ಜೀವಕ್ಕೆ ಅಪಾಯವಿದ್ದರೂ ಆ ಬಾಲಕ 94 ನಿಮಿಷಗಳ ಕಾಲ ವಿಮಾನದಲ್ಲೇ ಇದ್ದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿರುವುದು ಅಚ್ಚರಿ ಮೂಡಿಸಿದೆ.

ವಿಮಾನದ ಚಕ್ರದ ಬಳಿ ಕುಳಿತು ಪವಾಡದಂತೆ ಕಾಬೂಲ್​ನಿಂದ ದೆಹಲಿಗೆ ಬಂದ 13 ವರ್ಷದ ಅಫ್ಘಾನ್ ಬಾಲಕ!
Kam Air Flight
ಸುಷ್ಮಾ ಚಕ್ರೆ
|

Updated on:Sep 22, 2025 | 10:30 PM

Share

ನವದೆಹಲಿ:, ಸೆಪ್ಟೆಂಬರ್ 22: ಕಾಬೂಲ್ ನಿಂದ ದೆಹಲಿಗೆ ಬಂದ ವಿಮಾನದಲ್ಲಿ ಅಫ್ಘಾನಿಸ್ತಾನದ 13 ವರ್ಷದ ಬಾಲಕನೊಬ್ಬ ಪ್ರಾಣಾಪಾಯದಿಂದ ಪಾರಾಗಲು ತನ್ನ ಜೀವಕ್ಕೆ ಅಪಾಯಕಾರಿಯಾದ ನಿರ್ಧಾರ ತೆಗೆದುಕೊಂಡಡಿದ್ದಾನೆ. 13 ವರ್ಷದ ಬಾಲಕ ಇರಾನ್‌ಗೆ ನುಸುಳಲು ಬಯಸಿದ್ದ. ಆದರೆ ಗೊಂದಲದಿಂದ ಅವನು KAM ಏರ್ ನಿರ್ವಹಿಸುವ ತಪ್ಪಾದ ವಿಮಾನವನ್ನು ಹತ್ತಿದನು. ಆ ಹುಡುಗ ಏರ್‌ಬಸ್ A340ನ ಹಿಂಬದಿ ಚಕ್ರದ ಹಿಂಭಾಗದಲ್ಲಿ ಅಡಗಿಕೊಂಡು 94 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾನೆ!

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವಿಶೇಷ ಸುದ್ದಿ ವರದಿಯ ಪ್ರಕಾರ, ಆ ವಿಮಾನವು ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8.46ಕ್ಕೆ ಭಾರತೀಯ ಕಾಲಮಾನಕ್ಕೆ ಹೊರಟು ಬೆಳಿಗ್ಗೆ 10.20ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ವಿಮಾನ ಇಳಿದ ನಂತರ, ಆ ಬಾಲಕ ವಿಮಾನದ ಬಳಿಯ ನಿರ್ಬಂಧಿತ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತು. ಆಗ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಕ್ಷಣವೇ ಎಚ್ಚರಿಕೆ ನೀಡಲಾಯಿತು.

ಇದನ್ನೂ ಓದಿ: ಬೆಂಗಳೂರಿನಿಂದ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದ ಕಾಕ್​ಪಿಟ್ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ

ವಿಮಾನದ ಚಕ್ರದ ಹಿಂಬದಿಯ ಜಾಗ ಅತ್ಯಂತ ಅಪಾಯಕಾರಿ. ಅಲ್ಲಿ ಆಮ್ಲಜನಕದ ಕೊರತೆ, ಘನೀಕರಿಸುವ ತಾಪಮಾನ ಮತ್ತು ಚಕ್ರಗಳಿಂದ ಪುಡಿಪುಡಿಯಾಗುವ ಅಪಾಯಗಳಿರುತ್ತವೆ. ಒಂದುವೇಳೆ ಅಲ್ಲಿ ಕುಳಿತರೂ 30,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗ ಹೊರಬದಿಯಲ್ಲಿ ಕುಳಿತು ಬದುಕುಳಿಯುವುದು ಕಷ್ಟ. ಇದು ಬಹುತೇಕ ಅಸಾಧ್ಯವೆಂದೇ ಹೇಳಬಹುದು. ಆದರೆ, ಈ ಹುಡುಗ ಪವಾಡಸದೃಶವಾಗಿ ಬದುಕುಳಿದಿರುವುದು ಅಚ್ಚರಿ ಮೂಡಿಸಿದೆ.

ವಾಯುಯಾನ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಈ ಬಗ್ಗೆ ವಿವರಿಸುತ್ತಾ, ಆ ಹುಡುಗನು ಚಕ್ರದ ಬೇಯಲ್ಲಿ ಸುತ್ತುವರಿದ, ಒತ್ತಡದ ಜಾಗದಲ್ಲಿ ಹೋಗಿ ಕುಳಿತಿರಬಹುದು ಎಂದಿದ್ದಾರೆ. “ಚಕ್ರದ ಸಂದಿಯ ಬಾಗಿಲು ಟೇಕ್ ಆಫ್ ಆದ ನಂತರ ಮುಚ್ಚುತ್ತದೆ. ಆಗ ಅಲ್ಲಿ ಒಳಗೆ ತಾಪಮಾನವು ಆ ಹುಡುಗನಿಗೆ ಉತ್ತಮವಾಗಿರಬಹುದು, ಅದು ಪ್ರಯಾಣಿಕರ ಕ್ಯಾಬಿನ್ ತಾಪಮಾನಕ್ಕೆ ಹತ್ತಿರವಾಗಿರಬಹುದು. ಇದು ಅವನಿಗೆ ಹಾರಾಟದ ಬದುಕುಳಿಯಲು ಸಹಾಯ ಮಾಡಿರಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 pm, Mon, 22 September 25