AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರ ಹಾಸ್ಟೆಲ್​ ಟಾಯ್ಲೆಟ್​​​ ಕಮೋಡ್​​ನೊಳಗೆ ನಾಗರಹಾವು!

ವೈದ್ಯರ ಹಾಸ್ಟೆಲ್​ ಟಾಯ್ಲೆಟ್​​​ ಕಮೋಡ್​​ನೊಳಗೆ ನಾಗರಹಾವು!

ಸುಷ್ಮಾ ಚಕ್ರೆ
|

Updated on: Sep 15, 2025 | 10:38 PM

Share

ಕೋಟಾದ ಜೆಕೆ ಲೋನ್ ಆಸ್ಪತ್ರೆ ಹಾಸ್ಟೆಲ್‌ನಲ್ಲಿ ಶೌಚಾಲಯದ ಸೀಟಿನಲ್ಲಿ ನಾಗರಹಾವು ಪತ್ತೆಯಾಗಿದೆ. ಭಯದಿಂದ ವೈದ್ಯರು ಜೆಟ್‌ನಿಂದ ಹಾವಿಗೆ ನೀರನ್ನು ಹಾರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ವೈದ್ಯರ ಹಾಸ್ಟೆಲ್​​ನಲ್ಲಿ ರಾತ್ರಿ ವೇಳೆ ವಿಷಪೂರಿತ ನಾಗರಹಾವೊಂದು ಕಾಣಿಸಿಕೊಂಡಿದೆ. ಕಮೋಡ್​​ನಲ್ಲಿದ್ದ ಹಾವನ್ನು ನೋಡಿ ಕಿರುಚಿದ್ದಾರೆ. ವಿಷಯ ತಿಳಿದ ವೈದ್ಯರು ಭಯಭೀತರಾಗಿ ತಮ್ಮ ರೂಂನಿಂದ ಹೊರಗೆ ಧಾವಿಸಿದ್ದಾರೆ. ವಿಷಪೂರಿತ ಕಪ್ಪು ನಾಗರಹಾವು ಶೌಚಾಲಯದ ಕಮೋಡ್ ಮೂಲಕ ಸ್ನಾನಗೃಹಕ್ಕೆ ಹೋಯಿತು. ಈ ವೇಳೆ ಅಲ್ಲಿದ್ದವರು ಹಾವಿಗೆ ಜೆಟ್​​ನಿಂದ ನೀರು ಹಾರಿಸಿದ್ದಾರೆ.

ಕೋಟಾ, ಸೆಪ್ಟೆಂಬರ್ 15: ಕೋಟಾ ನಗರದ ನಯಾಪುರ ಪ್ರದೇಶದ ಜೆಕೆ ಲೋನ್ ಆಸ್ಪತ್ರೆಯ ಆವರಣದಲ್ಲಿರುವ ವೈದ್ಯರ ಹಾಸ್ಟೆಲ್​​ನಲ್ಲಿ ರಾತ್ರಿ ವೇಳೆ ವಿಷಪೂರಿತ ನಾಗರಹಾವೊಂದು (Snake) ಕಾಣಿಸಿಕೊಂಡಿದೆ. ಕಮೋಡ್​​ನಲ್ಲಿದ್ದ ಹಾವನ್ನು ನೋಡಿ ಕಿರುಚಿದ್ದಾರೆ. ವಿಷಯ ತಿಳಿದ ವೈದ್ಯರು ಭಯಭೀತರಾಗಿ ತಮ್ಮ ರೂಂನಿಂದ ಹೊರಗೆ ಧಾವಿಸಿದ್ದಾರೆ. ವಿಷಪೂರಿತ ನಾಗರಹಾವು ಶೌಚಾಲಯದ ಕಮೋಡ್ ಮೂಲಕ ಸ್ನಾನಗೃಹಕ್ಕೆ ಹೋಯಿತು. ಈ ವೇಳೆ ಅಲ್ಲಿದ್ದವರು ಹಾವಿಗೆ ಜೆಟ್​​ನಿಂದ ನೀರು ಹಾರಿಸಿದ್ದಾರೆ. ಆಗ ನಾಗರಹಾವು ಶೌಚಾಲಯದ ಪೈಪ್ ಮೂಲಕ ಕಮೋಡ್‌ಗೆ ಪ್ರವೇಶಿಸಿ ನಂತರ ಹಾಸ್ಟೆಲ್ ಕೋಣೆಗೆ ನುಸುಳಿತು. ಈ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ