Video: ಜಸ್ಟ್ ಮಿಸ್, ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ಶ್ವಾನ
ನಿಯತ್ತು, ನಿಷ್ಠೆ, ನಿಸ್ವಾರ್ಥಗೆ ಇನ್ನೊಂದು ಹೆಸರೇ ಈ ಶ್ವಾನ. ಒಂದು ಹೊತ್ತು ಹಾಕಿದರೆ ಸಾಕು ಬದುಕಿರುವರೆಗೂ ಮನೆಯನ್ನು ಕಾಯುತ್ತಾ ಋಣವನ್ನು ತೀರಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಶ್ವಾನವು ಅಪಾಯದ ವೇಳೆ ತನ್ನವರನ್ನು ಕಾಪಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಸ್ಟ್ರಾಲರ್ ಸೇರಿದಂತೆ ಅದರಲ್ಲಿ ಕುಳಿತಿರುವ ಮಗುವು ನೀರಿಗೆ ಬೀಳುವುದನ್ನು ಶ್ವಾನವೊಂದು ತಡೆದಿದೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶ್ವಾನಗಳ (Dogs) ನಿಶ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ತಮ್ಮ ಮನೆ ಮಕ್ಕಳು ಯಾವುದಾದ್ರೂ ಅಪಾಯಕ್ಕೆ ಸಿಲುಕಿಕೊಂಡ್ರೆ ರಕ್ಷಿಸುವುದರಲ್ಲಿ ಈ ಶ್ವಾನಗಳು ಎತ್ತಿದ ಕೈ. ಮುದ್ದು ಮುದ್ದಾದ ಕಂದಮ್ಮದೊಂದಿಗೆ ಆಡುವ ಹಾಗೂ ಅವುಗಳ ರಕ್ಷಣೆ ಮಾಡುವ ವಿಡಿಯೋ ಗಳನ್ನು ನೀವು ಈ ಹಿಂದೆ ನೋಡಿರುತ್ತೀರಿ. ಆದರೆ ಇದೀಗ ಸ್ಟ್ರಾಲರ್ ನಲ್ಲಿ ಕುಳಿತಿದ್ದ ಮಗುವು ಕೆಳಗೆ ಬೀಳುವುದನ್ನು ಶ್ವಾನವು ತಡೆದು ಮಗುವನ್ನು ದೊಡ್ಡ ಅಪಘಾತದಿಂದ ರಕ್ಷಿಸಿದೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಇದು ಎಐ ರಚಿತ ವಿಡಿಯೋ ಎನ್ನುತ್ತಿದ್ದಾರೆ.
ಮಗುವಿನ ಪಾಲಿಗೆ ದೇವರಾದ ಶ್ವಾನ
therealdog ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಟ್ಟೆ ಒಗೆಯುವ ಕೆಲಸದಲ್ಲಿ ನಿರತಳಾಗಿದ್ದಾಳೆ. ಆಕೆಯ ಮಗು ಪಕ್ಕದಲ್ಲಿ ಸ್ಟ್ರಾಲರ್‌ನಲ್ಲಿ ಕುಳಿತಿದೆ. ಎದುರಿಗೆ ಕೊಳವನ್ನು ಕಾಣಬಹುದು. ಹೀಗಿರುವಾಗ ಸ್ಟ್ರಾಲರ್ ಮುಂದೆ ಸಾಗಲು ಪ್ರಾರಂಭಿಸುತ್ತದೆ. ಇದು ದೊಡ್ಡ ಅಪಾಯವೇನೋ ಸಂಭವಿಸುತ್ತದೆ ಎನ್ನುವುದರ ಮುನ್ಸೂಚನೆಯಾಂತಿದೆ. ಇದನ್ನು ನೋಡಿದ ಶ್ವಾನವುಮಗುವು ಸ್ಟ್ರಾಲರ್ ಸಮೇತ ನೀರಿಗೆ ಬೀಳುವುದನ್ನು ತಡೆದಿದೆ. ಹೌದು ಶ್ವಾನವು ಹಾರಿ ಸ್ಟ್ರಾಲರ್ ಮುಂದೆ ಸಾಗುವುದನ್ನು ತಡೆದು ಮಗುವನ್ನು ರಕ್ಷಿಸುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: Video: ಕಾಡಿನಿಂದ ನಾಡಿಗೆ ಬಂದ ಕರಡಿಗೆ ಕೂಲ್ ಡ್ರಿಂಕ್ಸ್ ಕುಡಿಸಿದ ಯುವಕ; ವಿಡಿಯೋ ವೈರಲ್
ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಒಬ್ಬ ಬಳಕೆದಾರರು ಇದು ನೈಜವಲ್ಲ, ಎಐ ಆಧಾರಿತ ವಿಡಿಯೋ ಎಂದಿದ್ದಾರೆ. ಇನ್ನೊಬ್ಬರು ಅಪಾಯದ ಸಂದರ್ಭದಲ್ಲಿ ಡಾಂಗೇಶ್ ಭಾಯ್ ಸದಾ ಇರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಕಾರಣದಿಂದಲೇ ನಾನು ಡಾಗೇಶ್ ಭಾಯ್ ಅವರನ್ನು ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಈ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








