AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಟಿವಿಯೊಳಗೆ ಅವಿತು ಕುಳಿತಿದ್ದ ವಿಷಕಾರಿ ಹಾವು, ಈ ವಿಷಜಂತುವಿನ ರಕ್ಷಣಾ ಕಾರ್ಯ ಹೇಗಿತ್ತು ನೋಡಿ

ಮಳೆಗಾಲದಲ್ಲಿ ವಿಷಕಾರಿ ಹಾವುಗಳ ಉಪಟಳ ಹೆಚ್ಚು, ಈ ಋತುವಿನಲ್ಲಿ ಬೆಚ್ಚಗಿರುವ ತಾಣಗಳಲ್ಲಿ ಇರಲು ಬಯಸುವ ಈ ಹಾವುಗಳು ಮನೆಯೊಳಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯ ಮೂಲೆ, ಶೂ ಹಾಗೂ ಬೈಕ್ ಸೇರಿದಂತೆ ಇನ್ನಿತ್ತರ ಸ್ಥಳಗಳಲ್ಲಿ ಕೈ ಹಾಕುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಆದರೆ ಇದೀಗ ವಿಷಕಾರಿ ಹಾವೊಂದು ಎಲ್ಇಡಿ ಟಿವಿಯೊಳಗೆ ಸೇರಿಕೊಂಡಿದೆ. ಈ ಹಾವಿನ ರಕ್ಷಣೆ ಮಾಡಿದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Video: ಟಿವಿಯೊಳಗೆ ಅವಿತು ಕುಳಿತಿದ್ದ ವಿಷಕಾರಿ ಹಾವು, ಈ ವಿಷಜಂತುವಿನ ರಕ್ಷಣಾ ಕಾರ್ಯ ಹೇಗಿತ್ತು ನೋಡಿ
ಟಿವಿಯೊಳಗೆ ಅವಿತು ಕುಳಿತಿದ್ದ ಹಾವಿನ ರಕ್ಷಣೆImage Credit source: Facebook
ಸಾಯಿನಂದಾ
|

Updated on: Sep 07, 2025 | 4:36 PM

Share

ಹಾವುಗಳನ್ನು (Snakes) ಕಂಡ್ರೆ ಯಾರಿಗೆ ಭಯವಿಲ್ಲ ಹೇಳಿ. ಬಹುತೇಕ ಜನರು ಈ ಹಾವುಗಳ ಹೆಸರನ್ನು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಇನ್ನು ಹಾವುಗಳು ಮನೆಯೊಳಗೆ ಎಂಟ್ರಿ ಕೊಟ್ಟರೆ ಅಲ್ಲಿ ನಿಲ್ಲುವ ಧೈರ್ಯವಂತೂ ಯಾರು ಮಾಡಲ್ಲ. ಈ ವಿಷಕಾರಿ ಹಾವುಗಳು ಮನೆಯ ಮೂಲೆಯಲ್ಲಿ ಅವಿತುಕೊಳ್ಳುವುದನ್ನು ನೀವು ನೋಡಿರುತ್ತೀರಿ. ಆದರೆ ಈ ವಿಡಿಯೋದಲ್ಲಿ ಎಲ್‌ಇಡಿ ಟಿವಿಯೊಳಗೆ (LED Tv) ತೋಳದ ಹಾವೊಂದು ಅವಿತುಕೊಂಡಿದ್ದು, ಉರಗ ತಜ್ಞರು ಟಿವಿಯೊಳಗಿದ್ದ ಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ಟಿಯಾಗಿದ್ದಾರೆ. ಈ ತೋಳದ ಹಾವಿನ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಿವಿಯೊಳಗೆ ಅವಿತು ಕುಳಿತಿದ್ದ ಹಾವು

Nagendra ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಉರಗ ತಜ್ಞರು ಎಲ್ ಇಡಿ ಟಿವಿಯೊಳಗೆ ಸೇರಿಕೊಂಡಿದ್ದ ತೋಳದ ಹಾವನ್ನು ರಕ್ಷಣೆ ಮಾಡಿರುವುದನ್ನು ನೀವಿಲ್ಲಿ ನೋಡಬಹುದು. ಹಾವೊಂದು ಟಿವಿಯೊಳಗೆ ಹೋಗಿರುವುದನ್ನು ಮನೆ ಮಂದಿ ನೋಡಿದ್ದು, ಹೀಗಾಗಿ ಉರಗ ತಜ್ಞರಿಗೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರು ಮನೆಗೆ ಬಂದಿದ್ದಾರೆ. ಎಲ್ ಇಡಿ ಟಿವಿಯೊಳಗೆ ಹಾವು ಸೇರಿಕೊಂಡಿದ್ದ ಹಾವನ್ನು ರಕ್ಷಣೆ ಮಾಡಲು ಟಿವಿಯ ಭಾಗಗಳನ್ನು ಬಿಡಿಸಿದ್ದಾರೆ. ಈ ವೇಳೆಯಲ್ಲಿ ಟಿವಿ ಒಳಗೆ ಬೆಚ್ಚಗೆ ಅವಿತು ಕುಳಿತಿರುವುದನ್ನು ನೋಡಬಹುದು. ಈ ಹಾವನ್ನು ರಕ್ಷಣೆ ಮಾಡಿದ್ದು, ಇದು ತೋಳದ ಹಾವು, ಇದು ಮನೆಯಲ್ಲಿ ಹಲ್ಲಿಯನ್ನು ತಿನ್ನಲು ಬರುತ್ತದೆ ಎಂದು ಉರಗ ತಜ್ಞರು ಹೇಳುವುದನ್ನು ನೋಡಬಹುದು.

ಇದನ್ನೂ ಓದಿ
Image
ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
Image
ಮನೆ ಹತ್ರ ಹಾವು ಬಂದ್ರೆ ಓಡಿಸೋಕೆ ನಾನೊಬ್ಬನೇ ಸಾಕು; ಈ ಬೆಕ್ಕಿನ ಧೈರ್ಯ ನೋಡಿ
Image
ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ
Image
ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಭಯ ಅನ್ನೋ ಮಾತೇ ಇಲ್ಲ; ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ

ಈ ವಿಡಿಯೋವನ್ನು ಹಲವಾರು ವೀಕ್ಷಿಸಿದ್ದು, ಬಳಕೆದಾರರು ಟಿವಿಯೊಳಗೆ ಹಾವು ಹೇಗೆ ಹೋಯ್ತು. ಬೋರ್ ಆಗಿರ್ಬೇಕು ಅದಕ್ಕೆ ಟಿವಿ ನೋಡೋಕೆ ಹೋಗಿರ್ಬೇಕು ಎಂದಿದ್ದಾರೆ. ಇನ್ನೊಬ್ಬರು ಮನೆಯಲ್ಲಿ ಬೆಕ್ಕು ಸಾಕಿ. ಹೊರಗಿಂದ ಏನೇ ಬಂದ್ರು ಸೂಚನೆ ಕೊಡುತ್ತದೆ. ಮನೆ ಹೊರಗೆ ನಾಯಿ, ಒಳಗೆ ಬೆಕ್ಕು ನಮಗೆ ರಕ್ಷಣೆ ಕೊಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಹೇಳೋದು ಮನೆಯನ್ನು ಸ್ವಚ್ಛವಾಗಿ ಇಡಬೇಕು ಅಂತ. ಈ ತರ ಗಲೀಜಾಗಿ ಇಟ್ಕೊಂಡ್ರೆ ಹಾವು ಚೇಳು ಬಾರದೆ ಇನ್ನೇನು ಮಾಡುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ