AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮನೆ ಹತ್ರ ಹಾವು ಬಂದ್ರೆ ಓಡಿಸೋಕೆ ನಾನೊಬ್ಬನೇ ಸಾಕು; ಈ ಬೆಕ್ಕಿನ ಧೈರ್ಯ ನೋಡಿ

ನೀವು ಹಾವು ಮುಂಗುಸಿಯ ಕಾದಾಟವನ್ನು ನೋಡಿರುತ್ತೀರಿ. ಇಲ್ಲೊಂದು ಬೆಕ್ಕು ಹಾವಿನೊಂದಿಗಗೆ ಕಾದಾಟಕ್ಕೆ ಇಳಿದಿದೆ. ಈ ಬಿಗ್ ಫೈಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೊನೆಗೆ ಈ ಕಾದಾಟವು ತಿರುವು ಪಡೆದುಕೊಂಡಿದ್ದು, ಇಲ್ಲಿ ಗೆದ್ದದ್ದು ಯಾರು ಗೊತ್ತೇ? ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ

Video: ಮನೆ ಹತ್ರ ಹಾವು ಬಂದ್ರೆ ಓಡಿಸೋಕೆ ನಾನೊಬ್ಬನೇ ಸಾಕು; ಈ ಬೆಕ್ಕಿನ ಧೈರ್ಯ ನೋಡಿ
ಹಾವು ಬೆಕ್ಕಿನ ರೋಚಕ ಕಾದಾಟImage Credit source: Facebook
ಸಾಯಿನಂದಾ
|

Updated on: Aug 20, 2025 | 1:38 PM

Share

ಮನೆಯಲ್ಲಿ ಬೆಕ್ಕು ಸಾಕಿದ್ದರೆ, ಕಪ್ಪೆ, ಹಾವು ಹೀಗೆ ಕೀಟಗಳನ್ನು ಸಾಯಿಸಿ ಮನೆಯೊಳಗೆ ತಂದು ತನ್ನ ಮರಿಗಳಿಗೆ ನೀಡುತ್ತವೆ. ಹೀಗಾಗಿ ಈ ಬೆಕ್ಕಿನ ಸಹವಾಸವಲ್ಲ ಎಂದು ಗೊಣಗುವವರೇ ಹೆಚ್ಚು. ಇನ್ನು, ಇಲಿ ಕಂಡರೆ ಸಾಕು, ಅದನ್ನು ಬೆಕ್ಕು ಅಟ್ಟಾಡಿಸಿಕೊಂಡು ಹೋಗಿ ಹಿಡಿದು, ಹೊಟ್ಟೆ ತುಂಬಿಸಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಈ ಬೆಕ್ಕುಗಳು ಮನೆಯತ್ರ ಹಾವುಗಳು (snakes) ಕಾಣಿಸಿಕೊಂಡ್ರೆ ಅವುಗಳ ಜತೆಗೆ ಕಾದಾಟಕ್ಕೆ ಇಳಿಯುತ್ತವೆ. ಆದರೆ ಇಲ್ಲೊಂದು ಬೆಕ್ಕು ಮನೆಯ ಹತ್ರ ಬಂದ ಹಾವಿನ ಜೊತೆಗೆ ಜಗಳಕ್ಕೆ ಇಳಿದಿದೆ. ಈ ಬೆಕ್ಕು ಹಾಗೂ ಹಾವಿನ ನಡುವಿನ ಬಿಗ್ ಫೈಟ್‌ನ ವಿಡಿಯೋ ವೈರಲ್ ಆಗುತ್ತಿದೆ.

Muttanna Yaragoppa ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಮನೆಯಲ್ಲಿ ಬೆಕ್ಕು ಏಕೆ ಸಾಕಬೇಕು? ಒಂದು ಬಾರಿ ಈ ವಿಡಿಯೋ ಕೊನೆತನಕ ನೋಡಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಮನೆಯತ್ರ ತೆವಳುತ್ತಾ ಬಂದ ಹಾವನ್ನು ನೋಡಿದ ಬೆಕ್ಕು, ಅದರ ಹತ್ರ ಹೋಗಿ ಬೇಕಂತಲೇ ಹಾವನ್ನು ಕೆಣಕಿದೆ. ಬೆಕ್ಕು ತನ್ನನ್ನು ಕೆಣಕುತ್ತಿದ್ದಂತೆ ಹಾವು ಬೆಕ್ಕಿಗೆ ಹೆದರಿ ಜೀವ ರಕ್ಷಣೆಗಾಗಿ ಕಾದಾಟಕ್ಕೆ ಇಳಿದಿದೆ. ಆಗ ಬೆಕ್ಕು ಪ್ರತಿದಾಳಿ ನಡೆಸುತ್ತಿದ್ದಂತೆ ಕಾದಾಟವು ಹೆಚ್ಚಾಗಿದೆ. ಕೊನೆಗೆ ಸುಸ್ತಾದ ಹಾವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಹೊರಡಲು ಮುಂದಾಗಿದ್ದು, ಆದರೆ ಬೆಕ್ಕು ಮಾತ್ರ ಮತ್ತೆ ಹಾವನ್ನು ಕೆಣಕುವುದನ್ನು ನಿಲ್ಲಿಸಿಲ್ಲ. ಮತ್ತೆ ತನ್ನ ಮುಂಭಾಗದ ಕಾಲಿನಿಂದ ಹಾವನ್ನು ಎಳೆಯುತ್ತಾ ಕೆಣಕಲು ಪ್ರಯತ್ನಿಸಿದೆ. ಆದರೆ ಈ ವಿಡಿಯೋದ ಕೊನೆಗೆ ಬೆಕ್ಕು ಮತ್ತು ಹಾವು ಜಗಳವಾಡುವುದನ್ನು ನಿಲ್ಲಿಸಿದ್ದು, ಪರಸ್ಪರ ಪಕ್ಕದಲ್ಲಿ ಕುಳಿತು ವಿಶ್ರಾಂತಿ ಪಡೆದಿವೆ. ಇತ್ತ ಬೆಕ್ಕು ಹಾವನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಂಡಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ
Image
ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ
Image
ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ
Image
ಹೂವು ಹಿಡಿದಷ್ಟು ಸಲೀಸಾಗಿ ನಾಗರಹಾವು ಹಿಡಿದ ವ್ಯಕ್ತಿ
Image
ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ

ಈ ವಿಡಿಯೋವನ್ನು ಹಲವರು ವೀಕ್ಷಿಸಿದ್ದು ಈ ಬೆಕ್ಕು ಹಾಗೂ ಹಾವಿನ ಕಾದಾಟ ನೋಡಿ ಶಾಕ್ ಆಗಿದ್ದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ನನ್ನ ಸ್ವಂತ ಅನುಭವ ಮಧ್ಯಾಹ್ನ ಊಟ ಮಾಡಿಕೊಂಡು ಕೋಣೆಯಲ್ಲಿ ಮಲಗಿದ್ದೆ. ಒಂದು ಸಣ್ಣ ಹಾವು ನನ್ನ ಹಾಸಿಗೆಯತ್ರ ಬಂತು. ನಮ್ಮ ಮನೆಯ ಬೆಕ್ಕಿಗೆ ಹೇಗೆ ಗೊತ್ತಾಯ್ತು ಏನೋ ಗೊತ್ತಿಲ್ಲ ಏಕ್ದಮ್ ಬಂದು ನನ್ನ ಹೊದಿಕೆಯ ಮೇಲೆ ತನ್ನ ಮುಂದಿನ ಕಾಲಲ್ಲಿ ಬಡಿತು. ಪದೇ ಪದೇ ಅದಕ್ಕೆ ಬಡಿತು. ಎದ್ದು ನೋಡಿದ್ರೆ ಬೆಕ್ಕು, ಲೈಟ್ ಹಾಕಿ ನೋಡಿದ್ರೆ ಹಾವು. ಅವತ್ತು ನನ್ನ ಬದುಕಿಸಿದ್ದು ನನ್ನ ಮುದ್ದಿನ ಬೆಕ್ಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ, ಮುಂದೇನಾಯ್ತು ನೋಡಿ

ಇನ್ನೊಬ್ಬರು ನಾಗರಹಾವು ಹತ್ತಿರ ಕಚ್ಚಿಸಿಕೊಂಡು ಬೆಕ್ಕು ಸತ್ತರೂ ಪರವಾಗಿಲ್ಲ, ನೀವು ಖುಷಿಯಾಗಿ ವಿಡಿಯೋ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ. ಒಂದು ವಿಷಯ ಗೊತ್ತಿರಲಿ, ಬೆಕ್ಕು ಜಗತ್ತಿನ ಅತೀ ಚುರುಕಾದ ಜೀವಿ. ಹಾವಿನ ಒಂದೇ ಒಂದು ಕಡಿತ ಬೆಕ್ಕಿಗೆ ತಾಗುವುದಿಲ್ಲ. ಬೆಕ್ಕು ಯಾವತ್ತಿಗೂ ಶ್ರೇಷ್ಟ ಫೈಟರ್ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ