Optical Illusion: ನಿಮ್ಮ ಕಣ್ಣಿಗೆ ಕಪ್ಪೆ ಕಾಣಿಸಿತೇ? 10 ಸೆಕೆಂಡುಗಳಲ್ಲಿ ಗುರುತಿಸಿ
ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಎಂದು ತಿಳಿದುಕೊಳ್ಳಲು ಈ ಆಪ್ಟಿಕಲ್ ಇಲ್ಯೂಷನ್ ಸಹಾಯ ಮಾಡುತ್ತದೆ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತದೆ. ಇಲ್ಲೊಂದು ಅಂತಹದ್ದೇ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಕಪ್ಪೆಯನ್ನುಹತ್ತು ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.

ಈಗಂತೂ ಬುದ್ಧಿವಂತಿಕೆ, ಕಣ್ಣಿನ ಚುರುಕುತನ ಎಷ್ಟಿದೆ ಎಂದು ಪರೀಕ್ಷಿಸಬಹುದಾದ ಒಗಟಿನ ಚಿತ್ರಗಳನ್ನು ಬಿಡಿಸುವ ಮಜಾನೇ ಬೇರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು (Optical Illusion) ವೈರಲ್ ಆಗುತ್ತಿರುತ್ತವೆ. ಯೋಚನಾ ಶಕ್ತಿಗೆ ಸವಾಲು ನೀಡುವ ಇಂತಹ ಸವಾಲಿನ ಒಗಟನ್ನು ನೀವು ಈ ಹಿಂದೆ ಬಿಡಿಸಲು ಹೋಗಿ ವಿಫಲರಾಗಿರುತ್ತೀರಿ. ಇದೀಗ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವ ಮತ್ತೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಒಣಗಿದ ಎಲೆಗಳ ನಡುವೆ ಅಡಗಿರುವ ಕಪ್ಪೆಯನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ಈ ಒಗಟನ್ನು ಬಿಡಿಸಲು ರೆಡಿ ಇದ್ರೆ ಈಗಲೇ ಈ ಚಿತ್ರದತ್ತ ಕಣ್ಣು ಹಾಯಿಸಿ.
ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡುಹಿಡಿಯಬಲ್ಲಿರೇ?
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಒಣಗಿದ ಮರದ ಎಲೆಗಳು ಹಾಗೂ ಮುರಿದು ಬಿದ್ದ ಕೊಂಬೆಗಳಿಂದ ಆವೃತವಾದ ನೆಲವನ್ನು ಕಾಣಬಹುದು. ಇನ್ನು ರಂಧ್ರವಿರುವ ಮ್ಯಾನ್ ಹೋಲ್ ಮುಚ್ಚಳದಂತೆ ಕಾಣುತ್ತಿದೆ. ಇದರ ನಡುವೆ ಕಪ್ಪೆಯೊಂದು ಅಡಗಿದೆ, ಬಹಳ ಎಚ್ಚರಿಕೆ ಈ ಕಪ್ಪೆಯನ್ನು ಗುರುತಿಸಬೇಕು, ಇದಕ್ಕಿರುವ ಸಮಯ ಅವಕಾಶ ಹತ್ತು ಸೆಕೆಂಡುಗಳು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಮರೆಮಾಡಿರುವ ಗಜರಾಜನನ್ನು ಹುಡುಕಬಲ್ಲಿರಾ?
ಕಪ್ಪೆ ನಿಮ್ಮ ಕಣ್ಣಿಗೆ ಬಿದ್ದಿತೇ?
ಈ ಒಗಟಿನ ಚಿತ್ರಗಳು ನಿಮ್ಮ ಕಣ್ಣನು ಮೋಸಗೊಳಿಸುತ್ತವೆ, ನಿಮ್ಮನ್ನು ಭ್ರಮೆಯಲ್ಲಿ ಸಿಲುಕುವಂತೆ ಮಾಡುತ್ತವೆ, ಇದು ಸಹಜ ಕೂಡ. ನಿಮಗೆ ಒಬ್ಬರಿಗೆ ಮಾತ್ರವಲ್ಲ ಎಷ್ಟೇ ಬುದ್ಧಿವಂತರಾಗಿರುವ ವ್ಯಕ್ತಿಗಳಿಗೂ ಇದೇ ರೀತಿ ಆಗುತ್ತದೆ. ಉಭಯಚರ ಜೀವಿ ಕಪ್ಪೆಯ ಮೈ ಬಣ್ಣವು ಈ ಒಣಗಿದ ಎಲೆಗಳ ನಡುವೆ ಬೆರೆತು ಹೋಗಿದೆ. ಹೀಗಾಗಿ ಚಿತ್ರವನ್ನು ವಿಭಾಗಗಳಾಗಿ ವಿಂಗಡಿಸಿ ಸೂಕ್ಷ್ಮವಾಗಿ ನೋಡಿ. ಒಂದು ವೇಳೆ ಕಪ್ಪೆ ನಿಮ್ಮ ಕಣ್ಣಿಗೆ ಕಾಣಿಸಿಲ್ಲ ಎಂದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಕಪ್ಪೆಯೂ ಚಿತ್ರದ ಬಲಭಾಗದಲ್ಲಿ ಇದೆ. ರಂಧ್ರದ ಸ್ವಲ್ಪ ಕೆಳಗೆ ಇದ್ದು ನಿಮ್ಮ ಕಣ್ಣಿಗೆ ಬಿತ್ತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








