Optical Illusion: ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹೇಳಬಲ್ಲಿರಾ?
ಆಪ್ಟಿಕಲ್ ಇಲ್ಯೂಷನ್ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಹೆಚ್ಚಿನ ವರಿಗೆ ಇಂತಹ ಒಗಟಿನ ಆಟಗಳನ್ನು ಬಿಡಿಸುವುದೆಂದರೆ ಇಷ್ಟ. ಸೋಶಿಯಲ್ ಮೀಡಿಯಾದತ್ತ ಕಣ್ಣುಹಾಯಿಸಿದಾಗಲೆಲ್ಲಾ ಒಗ ಟಿನ ಚಿತ್ರಗಳೇ ಕಾಣಸಿಗುತ್ತವೆ. ಇದೀಗ ಅಂತಹದ್ದೇ ಸವಾಲಿನ ಚಿತ್ರವೊಂದು ಹರಿದಾಡುತ್ತಿದ್ದು, ಕಪ್ಪು ಬಿಳುಪಿನ ಭ್ರಮೆಯನ್ನುಂಟು ಮಾಡುವ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡು ಹಿಡಿಯಬೇಕು. ಈ ಸಂಖ್ಯೆಯನ್ನು ಕಂಡು ಹಿಡಿಯಲು ಇರುವ ಸಮಯಾವಕಾಶ ಹನ್ನೆರಡು ಸೆಕೆಂಡುಗಳು ಮಾತ್ರ. ನೀವು ರೆಡಿ ಇದ್ದೀರಾ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳನ್ನು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಕಠಿಣ ಸವಾಲಿನ ಈ ಒಗಟಿನ ಚಿತ್ರಗಳು ಕಷ್ಟವೆನಿಸಿದರೂ ಉತ್ತರ ಸಿಕ್ಕರಂತೂ ಆಗುವ ಖುಷಿಯೇ ಬೇರೆ. ಆದರೆ ಇಂತಹ ಚಿತ್ರಗಳನ್ನು ಕಣ್ಣನ್ನು ಮೋಸ ಗೊಳಿಸಿ ಭ್ರಮೆಯಲ್ಲಿ ಸಿಲುಕಿಸುತ್ತದೆ. ದೃಷ್ಟಿ ಸಾಮರ್ಥ್ಯ ಹಾಗೂ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತವೆ. ವೈರಲ್ ಆಗಿರುವ ಈ ಚಿತ್ರವು ಅಷ್ಟು ಸುಲಭದಾಯಕವಾಗಿಲ್ಲ. ಕಪ್ಪು ಬಿಳುಪಿನ ಸುರುಳಿಯಂತಿರುವ ಈ ಚಿತ್ರದಲ್ಲಿ ಸಂಖ್ಯೆಯೊಂದು ಅಡಗಿದೆ. ನಿಮ್ಮ ಕಣ್ಣು ಶಾರ್ಪ್ ಇದ್ರೆ ನಿರ್ದಿಷ್ಟ ಸಮಯದೊಳಗೆ ಆ ಸಂಖ್ಯೆಯನ್ನು ಕಂಡುಹಿಡಿಯಬೇಕು. ಈ ಚಿತ್ರವನ್ನು ಗಮನಿಸಿ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ.
ಈ ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಪ್ಪು ಬಿಳುಪಿನ ಸುರುಳಿಯಕಾರದ ರಚನೆಯನ್ನು ಕಾಣಬಹುದು. ಆದರೆ ಈ ಚಿತ್ರದಲ್ಲಿ ಸಂಖ್ಯೆಯೊಂದು ಅಡಗಿದೆ. ನೀವು ಅತ್ಯಂತ ಚುರುಕು ಮನಸ್ಸಿನವರಾಗಿದ್ದರೆ, ವೀಕ್ಷಣಾ ಕೌಶಲ್ಯ, ತೀಕ್ಷ್ಣ ದೃಷ್ಟಿ ಹೊಂದಿದ್ದರೆ ನೀವು ಈ ಒಗಟಿನ ಚಿತ್ರವನ್ನು ಕೇವಲ 12 ಸೆಕೆಂಡುಗಳಲ್ಲಿ ಬಿಡಿಸಿ ಆ ಸಂಖ್ಯೆ ಯಾವುದೆಂದು ಹೇಳಲು ಸಾಧ್ಯ. ನೀವು ಈ ಒಗಟನ್ನು ಬಿಡಿಸಲು ರೆಡಿ ಇದ್ದರೆ ಈಗಲೇ ಈ ಸವಾಲು ಸ್ವೀಕರಿಸಲು ಸಿದ್ಧರಾಗಿ.
ಇದನ್ನೂ ಓದಿ:Optical Illusion: ತೋಳಗಳ ನಡುವೆ ಅಡಗಿರುವ ಜೇಡವನ್ನು 8 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಉತ್ತರ ಇಲ್ಲಿದೆ:
ಎಷ್ಟೇ ಹುಡುಕಿದರೂ ಕಪ್ಪು ಬಿಳುಪಿನ ಸುರುಳಿಯಾಕಾರದ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ತಲೆ ಕಡೆಸಿಕೊಂಡಿದ್ದೀರಾ?. ಈ ಒಗಟನ್ನು ನೂರರಲ್ಲಿ ಹತ್ತು ಜನರಿಗೆ ಮಾತ್ರ ಬಿಡಿಸಲು ಸಾಧ್ಯ. ನಿಮಗೆ ಈ ಭ್ರಮೆಯನ್ನುಂಟು ಮಾಡುವ ಈ ಒಗಟಿನ ಚಿತ್ರ ಬಿಡಿಸಲು ಆಗಲಿಲ್ಲವೆಂದು ಚಿಂತಿಸಬೇಡಿ. ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆ 2025, ಸೂಕ್ಷ್ಮವಾಗಿ ಗಮನಿಸಿದರೆ ಆ ಸಂಖ್ಯೆ ನಿಮ್ಮ ಕಣ್ಣಿಗೆ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








