Optical Illusion: ಈ ಚಿತ್ರದಲ್ಲಿ ಅಡಗಿರುವ ಆನೆಯನ್ನು ನಿಮ್ಮಿಂದ ಹುಡುಕಲು ಸಾಧ್ಯನಾ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಅದನ್ನು ಬಿಡಿಸಲು ತಾಳ್ಮೆ ಹಾಗೂ ಜಾಣ್ಮೆ ಎರಡು ಬೇಕು. ಇದೀಗ ಇಂತಹದ್ದೇ ಟ್ರಿಕ್ಕಿಯಾಗಿರುವ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಆನೆಯನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ನೀವು ಈ ಒಗಟನ್ನು ವೇಗವಾಗಿ ಪರಿಹರಿಸಿದಷ್ಟೂ ನಿಮ್ಮ ಮೆದುಳು ಚುರುಕಾಗುತ್ತದೆ. ಹಾಗಾದ್ರೆ ಈ ಒಗಟು ಬಿಡಿಸಲು ರೆಡಿ ಇದ್ದೀರಾ?.

ಆಪ್ಟಿಕಲ್ ಇಲ್ಯೂಷನ್ (Optical Illusion) ನಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ನೀಡುವ ಈ ಒಗಟುಗಳನ್ನು ಬಿಡಿಸುವತ್ತ ಹೆಚ್ಚಿನವರು ಅಸಕ್ತಿ ತೋರಿಸುತ್ತಾರೆ. ಈ ಒಗಟುಗಳನ್ನು ಬಿಡಿಸುವುದು ಸೇರಿದಂತೆ ಇಂತಹ ಸವಾಲಿನ ಆಟ ಎಂದರೆ ಬಹುತೇಕರಿಗೆ ಇಷ್ಟ. ಆದರೆ ಈ ವೇಳೆಯಲ್ಲಿ ನೀವು ನಿಮ್ಮ ಬುದ್ಧಿಯನ್ನು ಖರ್ಚು ಮಾಡಬೇಕಾಗುತ್ತದೆ. ಹೌದು ನಿಮ್ಮ ಬುದ್ಧಿವಂತಿಕೆ ಹಾಗೂ ತೀಕ್ಷ್ಣತೆಯನ್ನು ಪರೀಕ್ಷಿಸುವ ಆಟವಿದು ಎಂದರೂ ತಪ್ಪಿಲ್ಲ. ಕೆಲವರು ಕ್ಷಣಾರ್ಧದಲ್ಲಿ ಉತ್ತರ ಕಂಡು ಕೊಂಡರೆ, ಇನ್ನು ಕೆಲವರು ಒಗಟು ಬಿಡಿಸುವಲ್ಲಿ ವಿಫಲವಾಗುತ್ತಾರೆ. ಇದೀಗ ನಿಮ್ಮ ಬುದ್ಧಿವಂತಿಕೆ ಹಾಗೂ ತಾಳ್ಮೆಯನ್ನು ಪರೀಕ್ಷಿಸುವ ಸವಾಲಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಗಜರಾಜನಿದ್ದು, ಎಲ್ಲಿದ್ದಾನೆ ಎಂದು ಕೇವಲ ಎಂಟು ಸೆಕೆಂಡುಗಳಲ್ಲಿ ಹೇಳಬೇಕು. ಆನೆಯನ್ನು ಪತ್ತೆ ಹಚ್ಚಲು ಸಾಧ್ಯನಾ? ಒಮ್ಮೆ ಪ್ರಯತ್ನಿಸಿ ನೋಡಿ.
ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಭ್ರಮೆ ಐಕ್ಯೂ ಪರೀಕ್ಷೆಯು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಜಕ್ಕೂ ಆಸಕ್ತಿದಾಯಕವಾಗಿದೆ. ಈ ಫೋಟೋದಲ್ಲಿ ಮರಗಿಡಗಳು, ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿಗಳ ಹಿಂಡು, ದೊಡ್ಡದಾದ ಬಂಡೆ ಕಲ್ಲು, ತೆಂಗಿನಮರವನ್ನು ಕಾಣಬಹುದು. ಆದರೆ, ಇದೆಲ್ಲದರ ನಡುವೆ ಆನೆಯೊಂದು ಅಡಗಿದೆ. ಉತ್ತಮ ಅರಿವಿನ ಕೌಶಲ್ಯ ಹಾಗೂ ತೀಕ್ಷ್ಣವಾದ ಗಮನ ಹೊಂದಿರುವ ವ್ಯಕ್ತಿಗಳು ಮಾತ್ರ ಅಡಗಿರುವ ಆನೆಯನ್ನು ಕಂಡುಹಿಡಿಯಲು ಸಾಧ್ಯವಂತೆ. ಹಾಗಾದ್ರೆ ನಿಮಗಿರುವ ಎಂಟು ಸೆಕೆಂಡುಗಳ ಒಳಗೆ ಆನೆಯನ್ನು ಕಂಡು ಹಿಡಿಯಬೇಕು.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?
ಉತ್ತರ ಇಲ್ಲಿದೆ

ಅಯ್ಯೋ ನೀವು ಎಷ್ಟೇ ಹುಡುಕಿದರೂ ಎಂಟು ಸೆಕೆಂಡುಗಳಲ್ಲಿ ಆನೆಯನ್ನು ಹುಡುಕಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ. ನಿರ್ದಿಷ್ಟ ಸಮಯ ಮೀರಿದ್ದರೂ ತಲೆ ಖರ್ಚು ಮಾಡಿ ಉತ್ತರ ಕಂಡು ಹಿಡಿಯಲು ಸಾಧ್ಯವೇ ಎಂದು ನೋಡಿ. ಕಣ್ಣು ದೃಷ್ಟಿ ಅಗಲಿಸಿ, ತಾಳ್ಮೆಯಿಂದ ಈ ಚಿತ್ರವನ್ನು ಗಮನಿಸಿದ್ರೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲವೆಂದರೆ ನಿಮಗೆ ಆನೆ ಎಲ್ಲಿದೆ ಎಂದು ನಾವೇ ಹೇಳುತ್ತೇವೆ. ಕೆಂಪು ಬಣ್ಣದಿಂದ ಈ ಚಿತ್ರದಲ್ಲಿ ಅಡಗಿರುವ ಆನೆಯನ್ನು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








