Optical Illusion: ಈ ಚಿತ್ರದಲ್ಲಿ ಹಾರುವ ಪಕ್ಷಿಗಳ ನಡುವೆ ಹಾರಲಾಗದ ಹಕ್ಕಿ ಎಲ್ಲಿದೆ ಎಂದು ಹುಡುಕಿ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲ, ನಿಮ್ಮ ಬುದ್ಧಿವಂತಿಕೆ ಹಾಗೂ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಒಗಟಿನ ಚಿತ್ರಗಳು ಸಾಕಷ್ಟು ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ಹಾರುವ ಪಕ್ಷಿಗಳ ನಡುವೆ ಹಾರಲು ಸಾಧ್ಯವಾಗದ ಹಕ್ಕಿಯೊಂದು ಅಡಗಿದೆ. ನೀವು ಆ ಪಕ್ಷಿ ಯಾವುದು ಎಂದು ಗುರುತಿಸಬಹುದೇ?.

ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಇತ್ತೀಚೆಗಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸುತ್ತಿದೆ. ಇಂತಹ ಚಿತ್ರಗಳು ಮೊದಲ ನೋಟಕ್ಕೆ ನಿಮ್ಮನ್ನು ಭ್ರಮೆಗೆ ಸಿಲುಕಿಸಬಹುದು, ಇಲ್ಲದಿದ್ದರೆ ಕಣ್ಣನ್ನು ಮೋಸಗೊಳಿಸಲು ಬಹುದು. ಆದರೆ ಇದು ಟ್ರಿಕ್ಕಿ ಒಗಟಿನ ಚಿತ್ರಗಳಾಗಿರುತ್ತದೆ. ಹೀಗಾಗಿ ಈ ಒಗಟನ್ನು ಬಿಡಿಸುವುದೇ ಬಹುದೊಡ್ಡ ಚಾಲೆಂಜ್ ಇರುತ್ತದೆ. ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಹಾರಲಾಗದ ಪಕ್ಷಿಯನ್ನು ಕಂಡು ಹಿಡಿಯಬೇಕು. ಆದರೆ ಈ ಒಗಟನ್ನು ಬಿಡಿಸಲು ಕಾಲದ ಮಿತಿ ಇಲ್ಲ. ನಿಮ್ಗೆ ಇಂತಹ ಒಗಟನ್ನು ಬಿಡಿಸುವ ಕ್ರೇಜ್ ಇದ್ಯಾ, ಇದೀಗ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಒಟ್ಟಿಗೆ ಕುಳಿತಿರುವ ಪ್ರಕಾಶಮಾನವಾದ ಆಕರ್ಷಕ ಪಕ್ಷಿಗಳನ್ನು ಕಾಣಬಹುದು. ರೆಕ್ಕೆಗಳನ್ನು ಅಗಲವಾಗಿ ಹೊಂದಿರುವ ಗಿಳಿ, ಪಾರಿವಾಳ, ನವಿಲು ಹೀಗೆ ತರತರಹದ ಹಾರಾಡುವ ಹಕ್ಕಿಗಳು ಇವೆ. ಆದರೆ ಈ ಹಕ್ಕಿಗಳ ಗುಂಪಿನಲ್ಲಿ ಒಂದು ಹಾರಲಾಗದ ಪಕ್ಷಿಯೊಂದಿದೆ. ಆ ಪಕ್ಷಿ ಯಾವುದೆಂದು ಪತ್ತೆ ಹಚ್ಚುವ ಸವಾಲನ್ನು ನೀಡಲಾಗಿದೆ.
ಹಾರಲು ಸಾಧ್ಯವಾಗದ ಹಕ್ಕಿಯನ್ನು ಹುಡುಕಿ
ಈ ಚಿತ್ರದಲ್ಲಿರುವ ಬಹುತೇಕ ಪಕ್ಷಿಗಳು ರೆಕ್ಕೆಗಳನ್ನು ಹೊಂದಿದ್ದು, ಹಾರಬಲ್ಲವು. ಆದರೆ ಒಂದು ಪಕ್ಷಿಗೆ ಹಾರಲು ಆಗುವುದಿಲ್ಲ. ನೀವು ಆ ಹಕ್ಕಿ ಯಾವುದೆಂದು ಎಷ್ಟು ಹುಡುಕಲು ಪ್ರಯತ್ನ ಪಟ್ಟರೂ, ಎಲ್ಲಾ ಹಕ್ಕಿಗಳು ಒಂದೇ ಆಗಿರುವಂತೆ ಕಾಣುತ್ತದೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ ಆ ಹಾರಲು ಸಾಧ್ಯವಾಗದ ಹಕ್ಕಿ ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯ.
ಇದನ್ನೂ ಓದಿ: Optical Illusion: ಈ ಕಪ್ಪು ಬಿಳುಪಿನ ವೃತ್ತಾಕಾರದ ಚಿತ್ರದಲ್ಲಿ ಅಡಗಿರುವ ಸಂಖ್ಯೆ ಯಾವುದೆಂದು ಹೇಳಬಲ್ಲಿರಾ?
ಉತ್ತರ ಇಲ್ಲಿದೆ
ಈ ಒಗಟಿನ ಚಿತ್ರದಲ್ಲಿ ಹಾರಲು ಸಾಧ್ಯವಾಗದೇ ಇರುವ ಹಕ್ಕಿಯೇ ಡೋಡೋ. ನೀವು ಈ ಡೋಡೋವನ್ನು ತಕ್ಷಣ ಗುರುತಿಸಿ, ಈ ಒಗಟನ್ನು ಬಿಡಿಸಲು ಸಾಧ್ಯವಾದರೆ ನೀವು ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿದ್ದೀರಿ ಎನ್ನುವುದು ಖಚಿತವಾಗುತ್ತದೆ. ಒಂದು ವೇಳೆ ಹಾರಲಾಗದ ಹಕ್ಕಿಯನ್ನು ಗುರುತಿಸಲು ಸಾಧ್ಯವಾಗದೇ ಹೋದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಕೊನೆಯ ಸಾಲಿನಲ್ಲಿ ಎಡದಿಂದ ಮೊದಲ ಹಕ್ಕಿಯೇ ಈ ಡೋಡೋ. ಉದ್ದನೆಯ ಕೊಕ್ಕು ಮತ್ತು ದುಂಡಗಿನ ದೇಹವನ್ನು ಹೊಂದಿದ್ದು, ಹಾರಲು ಸಾಧ್ಯ ವಾಗದ ಈ ಹಕ್ಕಿಯನ್ನು ನೀವು ನೋಡಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Mon, 1 September 25








