Video: ಹತ್ತು ವರ್ಷಗಳ ಕಾಲ ಲಂಡನ್‌ನಲ್ಲಿ ವಾಸ, ವಿದೇಶ ತೊರೆಯಲು ಮುಂದಾದ ಭಾರತೀಯ ಮಹಿಳೆ ಬಿಚ್ಚಿಟ್ಟ ಕಾರಣ ನೋಡಿ
ಹೆಚ್ಚಿನವರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಅಲ್ಲಿ ಕೈತುಂಬಾ ಸಂಬಳ ಇರುವ ಉದ್ಯೋಗವೇನೋ ಸಿಗುತ್ತೆ. ಆದರೆ ಅಷ್ಟೇ ಅಲ್ಲಿನ ಜೀವನ ದುಬಾರಿಯಾಗಿರುತ್ತದೆ. ಕಳೆದ ಹತ್ತು ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿ ವಿದೇಶ ತೊರೆಯುವ ಪ್ಲ್ಯಾನ್‌ನಲ್ಲಿ ಇದ್ದಾರೆ. ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ತಿಳಿಸಿದ್ದು, ಈ ಕುರಿತಾದ ವಿಡಿಯೋ ವೈರಲ್ ಆಗಿದೆ.

ವಿದೇಶ ಎಂದರೆ ಕೆಲವರಿಗೆ ಅದೇನೋ ವ್ಯಾಮೋಹ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಅಂದುಕೊಳ್ಳುತ್ತಾರೆ. ಇನ್ನು ವಿದೇಶದಲ್ಲಿ ಯಾರಾದ್ರೂ ಸಂಬಂಧಿಕರು ಇದ್ದು ಬಿಟ್ಟರೆ, ಅವರಿಗೇನು ಕಡಿಮೆ, ಕೈ ತುಂಬಾ ಸಂಬಳವಿದೆ ಆರಾಮವಾಗಿ ಜೀವನ ನಡೆಸಬಹುದು ಎಂದುಕೊಳ್ಳುತ್ತಾರೆ. ಆದರೆ ಕಳೆದ ಹತ್ತು ವರ್ಷಗಳಿಂದ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಉದ್ಯಮಿ ಲಂಡನ್‌ಗೆ (London) ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. ವಿದೇಶಿ ಜೀವನ ನಾವಂದುಕೊಂಡಂತೆ ಇಲ್ಲ, ಅಲ್ಲಿನ ಬದುಕಿನ ನೈಜ ಚಿತ್ರಣವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
pallschhibber ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ ಹತ್ತು ವರ್ಷಗಳ ಕಾಲ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಉದ್ಯಮಿಯೊಬ್ಬರು ತಮ್ಮ ಕುಟುಂಬದೊಂದಿಗೆ ಮತ್ತೆ ಭಾರತಕ್ಕೆ ಮರಳಲು ಮುಂದಾಗಿದ್ದಾರೆ. ತಮ್ಮ ಈ ನಿರ್ಧಾರದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ ಎಂದು ಪಲ್ಲವಿ ಚಿಬ್ಬರ್ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ನೀವು ನಿಮ್ಮ ಜೀವನದಲ್ಲಿ ಬೆಳವಣಿಗೆಗೆ ಹೊಂದಬೇಕಂದ್ರೆ ಈ ದೇಶ ಸೂಕ್ತವಾಗಿಲ್ಲ. ಈ ದೇಶ ಬದುಕುಳಿಯುವುದಕ್ಕೆ ಮಾತ್ರ. ಇಲ್ಲಿ ಎಷ್ಟು ದುಡಿದ್ರೂ ಸಾಲಲ್ಲ, ಖರ್ಚು ತುಂಬಾ. ಆದರೆ ನನಗೆ ಲಂಡನ್ ಅಂದ್ರೆ ತುಂಬಾ ಇಷ್ಟ. ಇಲ್ಲಿನ ಖರ್ಚು ನೋಡಿದ್ರೆ ಇಲ್ಲಿ ಇರೋಕೆ ಸಾಧ್ಯನೇ ಇಲ್ಲ. ಇಲ್ಲೊಂದು ಡಿಶೂಮ್ ಹೆಸರಿನ ಇಂಡಿಯನ್ ರೆಸ್ಟೋರೆಂಟ್ ಇದೆ. ಇಲ್ಲಿ ಊಟ ಮಾಡಿದ್ರೆ 80 ಪೌಂಡ್ ಬಿಲ್ ಆಗುತ್ತದೆ ಎಂದು ಹೇಳಿದ್ದಾರೆ. ಹೀಗೆ ಲಂಡನ್ ಎಷ್ಟು ದುಬಾರಿಯಾನಗಿದೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ:Viral: ಭಾರತಕ್ಕೆ ಹೋಲಿಸಿದ್ರೆ ಲಂಡನ್ ಬಲು ದುಬಾರಿ; ವಿದೇಶಿ ಜೀವನ ಕಷ್ಟಕರ ಎಂದ ಬೆಂಗಳೂರಿನ ದಂಪತಿ
ಈ ಪೋಸ್ಟ್ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ನಿಮ್ಮ ಬಳಕೆದಾರರೊಬ್ಬರು ಭಾರತಕ್ಕೆ ಮರಳೋದು ನಿಮ್ಮ ಒಳ್ಳೆಯ ನಿರ್ಧಾರ. ನಮ್ಮ ದೇಶ ಯಾವತ್ತಿದ್ರೂ ನಮ್ಮದೇ ಎಂದು ಹೇಳಿದ್ದಾರೆ. ಮತ್ತೊಬ್ಬರು ನೀವು ಮರಳಿ ಬರುವುದೇ ಉತ್ತಮ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಆಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ನೋಡೋಕೆ ವಿದೇಶ ಸುಂದರ, ಆದರೆ ಅಲ್ಲಿನ ದುಬಾರಿ ಜೀವನ ಅಲ್ಲಿದ್ದವರಿಗೆ ಮಾತ್ರ ಗೊತ್ತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








