Viral: 42 ವರ್ಷಗಳ ಹಿಂದಿನ ಬೆಂಗಳೂರು ಮ್ಯಾಪ್ ವೈರಲ್, ಇದ್ರಲ್ಲಿ ಹೆಚ್‌ಎಸ್‌ಆರ್ ಲೇಔಟ್, ಇಂದಿರಾನಗರ ಇಲ್ವೇ ಇಲ್ಲ ನೋಡಿ
ಲೆಕ್ಕವಿಲ್ಲದಷ್ಟು ಜನರಿಗೆ ಬದುಕು ಕಟ್ಟಿಕೊಟ್ಟ ಈ ಬೆಂಗಳೂರು ಸಂಪೂರ್ಣವಾಗಿ ಬದಲಾಗಿದೆ. ಅಲ್ಲಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಲೇಔಟ್‌ಗಳೇ ತುಂಬಿ ಹೋಗಿವೆ. ಆದರೆ ಇದೀಗ 1983 ರಲ್ಲಿ ಬೆಂಗಳೂರು ಹೇಗಿತ್ತು ಗೊತ್ತಾ?. ಬೆಂಗಳೂರಿನ ನಿವಾಸಿಯೊಬ್ಬರು ಹಂಚಿಕೊಂಡ 42 ವರ್ಷಗಳ ಹಳೆಯ ಅಪರೂಪದ ಮ್ಯಾಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು, ಸೆಪ್ಟೆಂಬರ್ 01: ಮಾಯಾನಗರಿ ಬೆಂಗಳೂರು (Bengaluru) ಹೆಸರು ಹೇಳಿದ ಕೂಡಲೇ ಎಲ್ಲರ ಕಿವಿ ನೆಟ್ಟಗೆ ಆಗುತ್ತದೆ. ಬೆಂಗಳೂರು ನಗರವೇ ಹಾಗೆ, ಯಾರೇ ಇಲ್ಲಿಗೆ ಬಂದರೂ ಅವರನ್ನು ತನ್ನವರಂತೆ ಅಪ್ಪಿ ಕೊಂಡಿದೆ. ಅಭಿವೃದ್ಧಿ ಹೊಂದುತ್ತಾ ದೂರದ ಊರಿನಿಂದ ಬರುವ ಅದೆಷ್ಟೋ ಜನರಿಗೆ ಕೆಲಸ ನೀಡಿದೆ, ಬದುಕಿಗೆ ಆಸರೆಯಾಗಿದೆ. ವರ್ಷಗಳು ಉರುಳಿದ್ದಂತೆ ಈ ಮಾಯಾನಗರಿ ಸಾಕಷ್ಟು ಬದಲಾಗಿದೆ. ಬೆಂಗಳೂರಿನ ಮಹಿಳೆಯೊಬ್ಬರು 1983 ರ ಅಂದರೆ 42 ವರ್ಷಗಳಷ್ಟು ಹಳೆಯ ಬೆಂಗಳೂರಿನ ಮ್ಯಾಪ್ (Bengaluru map) ಹಂಚಿಕೊಂಡಿದ್ದಾರೆ. ಆದರೆ ಈ ಮ್ಯಾಪ್‌ನಲ್ಲಿ ಹೆಚ್‌ಎಸ್‌ಆರ್ ಲೇಔಟ್ ಹಾಗೂ ಇಂದಿರಾನಗರ ಇರಲೇ ಇಲ್ಲವಂತೆ. ಬೆಂಗಳೂರು ನಗರದ ಕೇಂದ್ರವಾಗಿದ್ದು ಜಯನಗರ ಎಂದಿದ್ದಾರೆ.
42 ವರ್ಷಗಳ ಹಿಂದಿನ ಬೆಂಗಳೂರು ಮ್ಯಾಪ್
@dravishajatoch ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್‌ನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಹೀಗೆ ಬರೆದುಕೊಂಡಿದ್ದಾರೆ. ನಾವು 1983 ರ ಬೆಂಗಳೂರಿನ ಮ್ಯಾಪ್‌ನ್ನು ಸಂಗ್ರಾಹಕರಿಂದ ಖರೀದಿಸಿದ್ದೇವೆ. ಆ ಸಮಯದಲ್ಲಿ ಹೆಚ್‌ಎಸ್‌ಆರ್ ಹಾಗೂ ಇಂದಿರಾನಗರವು ಅಸ್ತಿತ್ವದಲ್ಲಿ ಇರಲಿಲ್ಲ. ಜಯನಗರವು ನಗರದ ಕೇಂದ್ರವಾಗಿದ್ದು, ಈ ನಕ್ಷೆಯಲ್ಲಿ ನಮ್ಮ ನೆಚ್ಚಿನ ಸ್ಥಳಗಳನ್ನು ಹುಡುಕುವತ್ತ ಸಾಗೋಣ. ಹಾಗೂ ಅವು ಅಂದು ಅಸ್ತಿತ್ವದಲ್ಲಿದ್ದವೇ ಎಂದು ನೋಡೋಣ ಎಂದಿದ್ದಾರೆ. ಈ ಪೋಸ್ಟ್‌ನಲ್ಲಿ 1983 ರ ಬೆಂಗಳೂರಿನ ಮ್ಯಾಪ್‌ನ್ನು ನೀವು ನೋಡಬಹುದು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
We bought Bengaluru’s map (1983 edition) from a collector. (42 years old)
And it turns out, HSR & Indiranagar are non existent. Jayanagar is almost central of the city.
Now, onto finding our fav places on the map and see if they existed back then xD pic.twitter.com/NBWlApcELJ
— Dravisha (@dravishakatoch) August 30, 2025
ಈ ಪೋಸ್ಟ್ ಹಂಚಿಕೊಂಡ ಬೆಂಗಳೂರಿನ ಮಹಿಳೆಯೇ ಕಾಮೆಂಟ್ ಮಾಡಿದ್ದು, ಈ ಮ್ಯಾಪ್ ದಕ್ಷಿಣ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಇಡೀ ನಗರವನ್ನು ಒಳಗೊಂಡಿದೆ ಎಂದಿದ್ದಾರೆ. ಎಂಜಿ ರೋಡ್, ಶಿವಾಜಿನಗರ, ಹಲಸೂರು ಕೆರೆ ಸೇರಿದಂತೆ ಪ್ರಸಿದ್ಧ ಸ್ಥಳಗಳನ್ನು ಇಲ್ಲಿ ಗುರುತಿಸಲಾಗಿದೆ. ವೈಟ್ ಫೀಲ್ಡ್, ಹೆಬ್ಬಾಳ, ಯಲಹಂಕ, ತುಮಕೂರು ರಸ್ತೆ ಹಾಗೂ ಬಳ್ಳಾರಿ ವಿಸ್ತರಿಸಿದೆ ಎಂದು ಹೇಳಿದ್ದಾರೆ. 1983 ರ ವೇಳೆ ದಕ್ಷಿಣ ಬೆಂಗಳೂರು ಹೆಚ್ಚು ಅಭಿವೃದ್ಧಿ ಹೊಂದಿದ್ದಂತೆ ಕಂಡು ಬಂದಿತು. ಜಯನಗರ, ಬನಶಂಕರಿ, ಹಾಗೂ ಜೆಪಿ ನಗರದಂತಹ ಯೋಜಿತ ವಿನ್ಯಾಸಗಳು ಇದ್ದವು. ಆದರೆ ಉತ್ತರದ ಭಾಗಗಳು ಮಾತ್ರ ಅರೆ ಗ್ರಾಮೀಣವಾಗಿದ್ದವು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Video: ಇದು ಟೆಕ್ನಾಲಜಿ ಎಫೆಕ್ಟ್; ಬೆಂಗಳೂರಿನ ಸ್ಕೂಟಿ ಸವಾರನ ಬೆನ್ನ ಮೇಲೆ ಡಿಜಿಟಲ್ ಸೈನ್ ಬೋರ್ಡ್‌ನ ಆಕರ್ಷಕ ಬ್ಯಾಗ್
ಆಗಸ್ಟ್ 30 ರಂದು ಶೇರ್ ಮಾಡಲಾದ ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು,ಇಂದಿಗೂ ನಾನು ನನ್ನ 84 ವರ್ಷದ ನೆರೆಹೊರೆಯವರಿಗೆ ಕೋರಮಂಗಲದಲ್ಲಿ ಯಾರನ್ನಾದರೂ ಭೇಟಿ ಮಾಡುತ್ತಿದ್ದೇನೆ ಎಂದು ಹೇಳಿದರೆ, ಅವರು ಕೋರಮಂಗಲಕ್ಕೆ ಯಾರು ಹೋಗುತ್ತಾರೆ ಎನ್ನುವ ಮುಖಭಾವದಿಂದ ನನ್ನನ್ನು ನೋಡುತ್ತಾರೆ ಎಂದಿದ್ದಾರೆ. ಮತ್ತೊಬ್ಬರು ಮನೆ ಖರೀದಿಸುವಾಗ ಉಲ್ಲೇಖಿಸಬೇಕಾದ ನಕ್ಷೆ ಇದು. ಅಲ್ಲಿ ಸರೋವರವಿದ್ದರೆ, ಆ ಜಾಗವನ್ನು ಖರೀದಿಸಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ನಕ್ಷೆ ತುಂಬಾ ಚೆನ್ನಾಗಿದೆ. ಸಾಧ್ಯವಾದರೆ ದಯವಿಟ್ಟು ಇದರ ಹೈ ರೆಸಲ್ಯೂಷನ್ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದೇ ಎಂದು ಇನ್ನೊಬ್ಬ ಬಳಕೆದಾರರು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








