Video: ಇದು ಟೆಕ್ನಾಲಜಿ ಎಫೆಕ್ಟ್; ಬೆಂಗಳೂರಿನ ಸ್ಕೂಟಿ ಸವಾರನ ಬೆನ್ನ ಮೇಲೆ ಡಿಜಿಟಲ್ ಸೈನ್ ಬೋರ್ಡ್‌ನ ಆಕರ್ಷಕ ಬ್ಯಾಗ್
ನಾವಿಂದು ತಂತ್ರಜ್ಞಾನಕ್ಕೆ ಎಷ್ಟು ಒಗ್ಗಿಕೊಂಡಿದ್ದೇವೆ ಅಂದ್ರೆ ತಂತ್ರಜ್ಞಾನವಿಲ್ಲದೇ ನಾವಿಲ್ಲ ಎನ್ನುವಂತಾಗಿದೆ. ಹೀಗಾಗಿ ಜನಸಾಮಾನ್ಯರು ಸೇರಿದಂತೆ ಆಟೋ ಚಾಲಕರು ಈ ಟೆಕ್ನಾಲಜಿಯನ್ನು ವಿಭಿನ್ನವಾಗಿ ಬಳಸಿಕೊಳ್ಳುವುದನ್ನು ನೋಡಿರಬಹುದು. ಆದರೆ ಈ ವಿಡಿಯೋ ನೋಡಿದ ಇಷ್ಟೊಂದು ಮುಂದಿದ್ದಾರಾ ಎನ್ನುವ ಆಲೋಚನೆ ಬಂದರೂ ತಪ್ಪಿಲ್ಲ. ಸ್ಕೂಟಿ ಸವಾರನು ಹಾಕಿಕೊಂಡಿರುವ ಈ ಡಿಜಿಟಲ್ ಸೈನ್ ಬೋರ್ಡ್ ಇರುವ ಬ್ಯಾಗ್ ಹಾಗೂ ಅದರ ಮೇಲಿರುವ ಕೆಲವು ಸಾಲುಗಳು ಎಲ್ಲರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 31:ತಂತ್ರಜ್ಞಾನ (technology) ಕ್ಷೇತ್ರವು ಮುಂದುವರೆದಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಸ್ಟಾಪ್ ಅಪ್ ಉದ್ಯಮದಲ್ಲಿ ಹಾಗೂ ಐಟಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಆದರೆ ಇದೀಗ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬನ ಬ್ಯಾಗ್ ಎಲ್ಲರ ಗಮನ ಸೆಳೆಯುತ್ತಿದೆ. ಡಿಜಿಟಲ್ ಸೈನ್ ಬೋರ್ಡ್ (digital sign board) ಇರುವ ಬ್ಯಾಗನ್ನು ಹಾಕಿಕೊಂಡಿದ್ದು, ಇದರಲ್ಲಿ ಕೇಳಲಾದ ಪ್ರಶ್ನೆಯನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂತಹ ದೃಶ್ಯಗಳು ಬೆಂಗಳೂರಿನಲ್ಲಿ ಮಾತ್ರ ಎಂದಿದ್ದಾರೆ.
@gsp1591 ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಪೀಕ್ ಬೆಂಗಳೂರು ಮೂವ್ಮೆಂಟ್, ಏನ್ರಿ ಮೀಡಿಯಾ, ಜನರೇ ನೀವೇನು ಮಾಡುತ್ತಿದ್ದೀರಿ ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬೆಂಗಳೂರಿನ ಸ್ಕೂಟಿ ಸವಾರರೊಬ್ಬನು ತನ್ನ ಬ್ಯಾಗ್‌ನಿಂದ ಗಮನ ಸೆಳೆಯುತ್ತಿದ್ದಾನೆ. ಡಿಜಿಟಲ್ ಸೈನ್ ಬೋರ್ಡ್ ಇರುವ ಈ ಬ್ಯಾಗ್ ಹಾಕಿಕೊಂಡಿದ್ದು, ಇದರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಏನ್ರೀ ಮೀಡಿಯಾ, ಜನರೇ ನೀವೇನು ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆಯನ್ನು ಬರೆದಿರುವುದನ್ನು ಕಾಣಬಹುದು. ಈ ಸವಾರನು ಸಿಗ್ನಲ್‌ನಲ್ಲಿ ನಿಂತಿದ್ದ ವೇಳೆಯಲ್ಲಿ ಹಿಂಬದಿ ಸ್ಕೂಟಿ ಸವಾರ ಈ ವಿಡಿಯೋವನ್ನು ಮಾಡಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Peak Bengaluru moment……
Enri media. What U people are doing? pic.twitter.com/p1GvYDiOww
— Dr Gsp (@gsp1591) August 26, 2025
ಇದನ್ನೂ ಓದಿ:Viral: ಬೆಂಗಳೂರಿಗನ ಹೊಸ ಪ್ರಯತ್ನ; ಮನೆಯಲ್ಲಿ ಗರಿಗರಿ ದೋಸೆ ಮಾಡೋದಕ್ಕೂ ಬಂತು ರೋಬೋಟ್
ಆಗಸ್ಟ್ 26 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು ಹಲವರು ವೀಕ್ಷಿಸಿದ್ದು, ಬಳಕೆದಾರರು ಡಿಜಿಟಲ್ ಸೈನ್ ಬೋರ್ಟ್ ಇರುವ ಈ ಬ್ಯಾಗ್ ನೊಂದಿಗೆ ಸಂದೇಶ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ಇಂತಹ ವಿಚಾರಗಳು ಬೆಂಗಳೂರಿನಲ್ಲಿ ಮಾತ್ರ ನೋಡಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು ತಂತ್ರಜ್ಞಾನದೊಂದಿಗೆ ಟೆಕ್ನಲೊಜಿಯಾ ಎಂಬ ಫೇಮಸ್ ಡೈಲಾಗ್ ನ್ನು ಈ ರೀತಿ ಬಳಸಬಹುದು ಎಂದು ನಮಗೆ ಇವತ್ತೇ ತಿಳಿದದ್ದು ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಪ್ರಶ್ನೆಯನ್ನು ಯಾವ ಕಾರಣಕ್ಕಾಗಿ ಬರೆದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








