Video: ಈ ಪ್ರೇಮಿಗಳಿಗೆ ರೈಲೇ ಬೆಡ್ ರೂಮ್, ಬಿಸಿ ಬಿಸಿ ಚುಂಬನ, ಹಗ್ಗಿಂಗ್ ವಿಡಿಯೋ ವೈರಲ್
ನಮ್ಮಲ್ಲಿ ಕೆಲವರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದು ತಿಳಿದಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕವಾಗಿ ವರ್ತಿಸಿ ಇತರರಿಗೂ ಮುಜುಗರ ಆಗುವಂತೆ ನಡೆದುಕೊಳ್ಳುತ್ತಾರೆ. ಇದೀಗ ಪ್ರೇಮಿಗಳಿಬ್ಬರೂ ರೈಲನ್ನೇ ಬೆಡ್ ರೂಮ್ ಆಗಿಸಿಕೊಂಡು ರೊಮ್ಯಾನ್ಸ್‌ನಲ್ಲಿ ಮುಳುಗಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಈ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರೀತಿ ಎನ್ನುವ ಎರಡಕ್ಷರ ಸುಂದರ ಪ್ರೀತಿಗೆ ಕಣ್ಣಿಲ್ಲ, ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ ಅಂತಾರೆ. ಈ ಮಾತು ಕೆಲವೊಮ್ಮೆ ನಿಜವೆನಿಸುತ್ತದೆ. ಕೆಲವರು ತಮ್ಮ ಅಕ್ಕಪಕ್ಕ ಯಾರಿದ್ದಾರೆ ಎಂಬುದನ್ನು ಕೂಡಾ ಗಮನಿಸದೆ ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ (Romance) ಮಾಡುತ್ತಾ ಇತರರಿಗೂ ಮುಜುಗರವಾಗುವಂತೆ ವರ್ತಿಸುತ್ತಿರುತ್ತಾರೆ. ಹೀಗೆ ಪ್ರೇಮಿಗಳು ಪ್ರೀತಿಯ ಎಲ್ಲೆಗಳನ್ನು ಮೀರಿ ಅಸಭ್ಯವಾಗಿ ವರ್ತಿಸುವ ಘಟನೆಗಳು ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುತ್ತದೆ. ಆದರೆ ಇದೀಗ ಇಲ್ಲೊಂದು ಜೋಡಿಯೂ ಪ್ರಯಾಣಿಕರಿಗೆ ಮುಜುಗರವಾಗುವಂತೆ ವರ್ತಿಸಿದೆ. ರೈಲಿನಲ್ಲಿ (Train) ಜೋಡಿಯೊಂದು ಅಪ್ಪಿಕೊಂಡು ಮುದ್ದಾಡಿದ್ದು, ಈ ವರ್ತನೆಯೂ ಪ್ರಯಾಣಿಕರಿಗೆ ಮುಜುಗರ ತರಿಸಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರೈಲಿನಲ್ಲಿ ಪೇಮಿಗಳ ಸಖತ್ ರೊಮ್ಯಾನ್ಸ್
@divyakuamari ಹೆಸರಿನ ಎಕ್ಸ್ ಖಾತೆಯಲ್ಲಿ ಜೋಡಿಯ ರೊಮ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವ ಯುವಕ ಯುವತಿಯನ್ನು ಕಾಣಬಹುದು. ಸುತ್ತಲೂ ಜನರಿದ್ದರೂ ಈ ಜೋಡಿಯೊಂದು ಸೈಡ್ ಲೋವರ್ ಬರ್ತ್ ಸೀಟ್‌ನಲ್ಲಿ ಮಲಗಿಕೊಂಡು ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುತ್ತನ್ನಿಕ್ಕುತ್ತಾ ರೊಮ್ಯಾನ್ಸ್ ಮಾಡುತ್ತಾ ಮೈ ಮರೆತಿದೆ. ಈ ಜೋಡಿಯ ಸರಸ ಸಲ್ಲಾಪವನ್ನು ಮೇಲಿನ ಬರ್ತ್ ಸೀಟ್‌ನಲ್ಲಿರುವ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
OYO Train
ऐसे लोगों ने अब टट्रैन को भी oyo बना दिया 🤦♀️🤦♀️ pic.twitter.com/ZZCZ3nADdj
— दिव्या कुमारी (@divyakumaari) September 6, 2025
ಇದನ್ನೂ ಓದಿ:Video: ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು, ಕಿಸ್ಸಿಂಗ್ ವಿಡಿಯೋ ವೈರಲ್
ಸೆಪ್ಟೆಂಬರ್ 6 ರಂದು ಶೇರ್ ಮಾಡಲಾದ ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋಗೆ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದು ಅರಿವಿರಲಿ ಎಂದಿದ್ದಾರೆ. ಮತ್ತೊಬ್ಬರು ಇದೆಲ್ಲವು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ, ಏನು ಮಾಡೋದಕ್ಕೆ ಆಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದು ತುಂಬಾ ಮುಜುಗರದ ಸಂಗತಿ, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೆಂದು ಜನರು ತಿಳಿದುಕೊಳ್ಳಬೇಕು. ಸರ್ಕಾರ ಅಥವಾ ರೈಲ್ವೆ ಕಠಿಣ ಕ್ರಮ ಕೈಗೊಳ್ಳಬೇಕು. ಕನಿಷ್ಠ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Mon, 8 September 25








