Video: ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು, ಕಿಸ್ಸಿಂಗ್ ವಿಡಿಯೋ ವೈರಲ್
ಈಗಿನ ಕಾಲದ ಯುವಕ ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಿತಿ ಮೀರಿ ವರ್ತಿಸುತ್ತಾರೆ. ಈ ಪ್ರೇಮಿಗಳು ಎಲ್ಲೆಂದರಲ್ಲಿ ರೊಮ್ಯಾನ್ಸ್‌ನಲ್ಲಿ ಮುಳುಗಿ ನಾಗರಿಕರಿಗೆ ಮುಜುಗರ ಉಂಟು ಮಾಡುತ್ತಾರೆ. ಇದೀಗ ಚಲಿಸುತ್ತಿದ್ದ ಬೈಕ್‌ನಲ್ಲೇ ರೊಮ್ಯಾನ್ಸ್ ಮಾಡುತ್ತಿರುವ ಜೋಡಿ ಹಕ್ಕಿಗಳ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಕಾಲ ತುಂಬಾನೇ ಕೆಟ್ಟೋಯ್ತು ಎಂದಿದ್ದಾರೆ.

ಉತ್ತರ ಪ್ರದೇಶ, ಆಗಸ್ಟ್ 26: ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರಲ್ಲ ಎಂದು ಹೇಳ್ತಾರೆ, ಆದರೆ ಈ ಕೆಲವು ವಿಡಿಯೋಗಳನ್ನು ನೋಡಿದಾಗ ಈ ಮಾತು ನಿಜವೆನಿಸುತ್ತದೆ. ಹೌದು,ಕೆಲ ಪ್ರೇಮಿಗಳು, ರೈಲು, ಮೆಟ್ರೋ, ಬಸ್, ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರವಾಗುವಂತೆ ನಡೆದುಕೊಳ್ಳುತ್ತಾರೆ. ಪಬ್ಲಿಕ್‌ನಲ್ಲಿಯೇ ಹಗ್ಗಿಂಗ್, ಕಿಸ್ಸಿಂಗ್ ಹೀಗೆ ಮಿತಿ ಮೀರಿ ವರ್ತಿಸುತ್ತಿರುವುದನ್ನು ನೀವು ನೋಡುತ್ತೀರಿ. ಇದೀಗ ಅಂತಹದ್ದೆ ವಿಡಿಯೋ ವೈರಲ್ ಆಗಿದೆ. ಪ್ರೇಮಿಗಳಿಬ್ಬರೂ ಸಂಚಾರಿ ನಿಯಮವನ್ನು (traffic rules) ಬ್ರೇಕ್ ಮಾಡಿ ಚಲಿಸುತ್ತಿದ್ದ ಬೈಕ್‌ನಲ್ಲೇ ಅಪ್ಪಿಕೊಂಡು ಕುಳಿತಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ (Gorakhpur of Uttar Pradesh) ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಪ್ರೇಮಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಲಿಸುವ ಬೈಕ್‌ನಲ್ಲೇ ಜೋಡಿ ಹಕ್ಕಿಗಳ ಸರಸ
@Mithileshdhar ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಯುವಕನು ಬೈಕ್ ಓಡಿಸುತ್ತಿದ್ದರೆ, ಪ್ರಿಯತಮೆ ಬೈಕ್ ಟ್ಯಾಂಕ್ ಮೇಲೆ ಕುಳಿತು ಅವನನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾಳೆ. ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ತಮಾಷೆ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮನ್ನು ನೋಡುತ್ತಾರೆ ಎನ್ನುವ ಪರಿವೇ ಇಲ್ಲದೇ ವರ್ತಿಸುತ್ತಿದ್ದಾರೆ. ರಾಮಗಢ ತಾಲ್‌ಗೆ ಭೇಟಿ ನೀಡಲು ಹೋಗುತ್ತಿದ್ದ ವೇಳೆ ಈ ಈ ಜೋಡಿಹಕ್ಕಿಗಳು ಬೈಕ್‌ನಲ್ಲೇ ಮೈ ಮರೆತಿದ್ದಾರೆ. ಚಲಿಸುವ ಬೈಕ್‌ನಲ್ಲಿಯೇ ಜೋಡಿ ಹಕ್ಕಿಗಳು ರೊಮ್ಯಾನ್ಸ್ ಮಾಡುತ್ತಿರುವುದನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ये कपल गोरखपुर में बाइक से सैर कर रहा था। एक दूसरे से फेस-टू-फेस बात करने का ये तरीका बेहतर है। फिर भी पता नहीं क्यों पुलिस ने इनका 2500 रुपए का चालान काट दिया। pic.twitter.com/tG2uaghF6i
— Bhadohi Wallah (@Mithileshdhar) August 23, 2025
ಈ ವಿಡಿಯೋ ಆಗಸ್ಟ್ 23 ರಂದು ಶೇರ್ ಮಾಡಿಕೊಂಡಿದ್ದು, ವೈರಲ್ ಆಗುತ್ತಿದ್ದತೆ ಪೊಲೀಸರ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವಂತೆ ನಡೆದುಕೊಂಡ ಈ ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೋರಖ್‌ಪುರ ಪೊಲೀಸರಿಗೆ ಪತ್ರ ಬರೆಯಲಾಗಿದೆ. ಇನ್ನು ಈ ವಿಡಿಯೋ ಇದುವರೆಗೆ ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಾನ ಮರ್ಯಾದೆ ಇಲ್ಲದವರು ಮಾತ್ರ ಈ ರೀತಿ ವರ್ತಿಸಲು ಸಾಧ್ಯ ಎಂದಿದ್ದಾರೆ.
ಇದನ್ನೂ ಓದಿ:Video: ಮಾಡೆಲ್ ಮುಂದೆಯೇ ರಸ್ತೆಯಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ
ಇನ್ನೊಬ್ಬರು, ನಿಮ್ಮ ಅಪ್ಪ ಅಮ್ಮನ ಮರ್ಯಾದೆಯನ್ನು ಬೀದಿಗೆ ತರುವ ಕೆಲಸವನ್ನು ಮಾಡ್ಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು , ಸಂಚಾರಿ ನಿಯಮ ಬ್ರೇಕ್ ಮಾಡಿ ಸಾರ್ವಜನಿಕರಿಗೆ ಮುಜುಗರ ತರುವಂತೆ ಮಾಡಿದ ಈ ಪ್ರೇಮಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಿ ಎಂದು ಅಗ್ರಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Tue, 26 August 25








