Video: ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಿದ ಯುವಕ, ಮುಂದೇನಾಯ್ತು ನೋಡಿ
ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಹುಚ್ಚಿನಿಂದ ಯುವಕ ಯುವತಿಯರು ಪ್ರಾಣಕ್ಕೆ ಕುತ್ತು ತರುವಂತಹ ಸಾಹಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಯುವಕನೊಬ್ಬನು ಎದುರಿಗೆ ರೈಲು ಬರುತ್ತಿದ್ದಂತೆ ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಮುಂದೇನಾಯ್ತು ಎಂದು ತಿಳಿದ್ರೆ ನೀವು ಇವನ ಗುಂಡಿಯನ್ನು ಮೆಚ್ಚಿಕೊಳ್ತಿರಾ.

ರೀಲ್ಸ್ ರೀಲ್ಸ್ ರೀಲ್ಸ್…. ಈಗಿನ ಕಾಲದ ಯುವಕ ಯುವತಿಯರಲ್ಲಿ ರೀಲ್ಸ್ (reels) ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ರೀಲ್ಸ್ ಮಾಡಿ ನಾನಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ. ಇಲ್ಲೊಬ್ಬ ಯುವಕನದ್ದು ಇದೆ ಕಥೆ. ಹೌದು ಯುವಕನೊಬ್ಬ ರೀಲ್ಸ್ ಕ್ರೇಜ್‌ಗೆ ಬಿದ್ದು ಎದುರಿಗೆ ರೈಲು ಬರುತ್ತಿದ್ದರೂ ರೈಲ್ವೆ ಹಳಿ (railway track) ಮೇಲೆ ಮಲಗಿ ರೀಲ್ಸ್ ಮಾಡಿದ್ದಾನೆ. ಈತನ ಆಯಸ್ಸು ಗಟ್ಟಿ ಇದೆ ಕಾಣಿಸುತ್ತೆ, ಪ್ರಾಣಾಪಯದಿಂದ ಪಾರಾಗಿದ್ದಾನೆ. ಎದೆ ಝಲ್ ಎನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
@nidhiambedkar ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುತ್ತಿದ್ದಾರೆ..! ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೀಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನು ರೈಲ್ವೆ ಹಳಿಗಳ ಮೇಲೆ ರೀಲ್ಸ್ ಮಾಡಲು ಮುಂದಾಗಿರುವುದನ್ನು ನೋಡಬಹುದು. ಎದುರಿಗೆ ರೈಲು ಬರುತ್ತಿದ್ದರೂ ರೈಲ್ವೆ ಹಳಿಗಳ ಮೇಲೆ ಮಲಗಿದ್ದು, ರೈಲು ಆತನ ಮೇಲೆ ಹಾದುಹೋಗಿದೆ. ಆ ಬಳಿಕ ಎದ್ದು ನಿಂತು ಏನೋ ಸಾಧಿಸಿದೆ ಎನ್ನುವಂತೆ ಜೋರಾಗಿ ಕಿರುಚುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
रील बनाने के चक्कर में लोग अपनी जान जोख़िम में डाल रहे हैं..!
सरकार को ऐसे वीडियो बनाने वाले पे सख़्त करवाई करनी चाहिए… pic.twitter.com/XY1Gq2MZFc
— निधि अम्बेडकर (@nidhiambedkar) September 7, 2025
ಇದನ್ನೂ ಓದಿ: Video: ಈ ಪ್ರೇಮಿಗಳಿಗೆ ರೈಲೇ ಬೆಡ್ ರೂಮ್, ಬಿಸಿ ಬಿಸಿ ಚುಂಬನ, ಹಗ್ಗಿಂಗ್ ವಿಡಿಯೋ ವೈರಲ್
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು, ಈ ವಿಡಿಯೋ ಯಾವಾಗ ಪೋಸ್ಟ್ ಮಾಡಲಾಗಿದೆ ಹಾಗೂ ಎಲ್ಲಿ ನಡೆಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿಯ ಹುಚ್ಚಾಟಗಳಿಗೆ ಯಾವಾಗ ಕಡಿವಾಣ ಬೀಳುತ್ತೆ ಎಂದು ಕೇಳಿದ್ದಾರೆ. ಮತ್ತೊಬ್ಬರು, ರೀಲ್ಸ್ ಹುಚ್ಚು ಪ್ರಾಣ ಕಳೆದುಕೊಂಡು ಹೋಗುವಷ್ಟರ ಮಟ್ಟಿಗೆ ಹೋಗಬಾರದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








