AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಬ್ಬನ ಮೇಲೆ ಇಬ್ಬರ ಲವ್; ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು

ಇಲ್ಲೊಂದು ವಿವಾಹೇತರ ಸಂಬಂಧದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂದೇ ಮನೆಯ ಇಬ್ಬರು ಸೊಸೆಯಂದಿರು ನೆರೆಮನೆಯ ಯುವಕನೊಂದಿಗೆ ಓಡಿ ಹೋಗಿದ್ದಾರೆ. ಒಂದೇ ಯುವಕನ ಮೇಲೆ ವಾರಗಿತ್ತಿಯರಿಗೆ ಪ್ರೀತಿ ಮೂಡಿದ್ದು, ಇದೀಗ ಅತ್ತೆ, ಮಾವ, ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟು, ತಾವು ಪ್ರೀತಿಸಿದ ಪಕ್ಕದ ಮನೆಯ ಯುವಕನೊಂದಿಗೆ ಓಡಿ ಹೋಗಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಒಬ್ಬನ ಮೇಲೆ ಇಬ್ಬರ ಲವ್; ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು
ಯುವಕನೊಂದಿಗೆ ಓಡಿ ಹೋದ ವಾರಗಿತ್ತಿಯರು
ಮಾಲಾಶ್ರೀ ಅಂಚನ್​
|

Updated on: Sep 03, 2025 | 2:38 PM

Share

ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳ (Extra marital affair) ಪ್ರಕರಣಗಳು ತೀರಾ ಹೆಚ್ಚಿವೆ. ಹೆಂಡ್ತಿ ಮಕ್ಕಳು ಅಂತ ಸುಂದರವಾದ ಸಂಸಾರವಿದ್ದರೂ, ಬೇರೊಂದು ಮಹಿಳೆಯೊಂದಿಗೆ ಸಂಬಂಧ ಹೊಂದಿರುವ, ಪರ ಪುರುಷನೊಂದಿಗೆ ವಿವಾಹಿತ ಮಹಿಳೆ ಅಕ್ರಮ ಸಂಬಂಧ ಇಟ್ಟುಕೊಂಡಂತಹ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ವಿಚಿತ್ರ ಏನೆಂದರೆ ಒಬ್ಬ ಯುವಕನ ಮೇಲೆ ಇಬ್ಬರು ಮಹಿಳೆಯರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೌದು ಒಂದೇ ಮನೆಯ ಇಬ್ಬರು ಸೊಸೆಯಂದಿರು ಪಕ್ಕದ ಮನೆಯ ಯುವಕನನ್ನು ಪ್ರೀತಿಸಿ, ಇದೀಗ ಅತ್ತೆ ಮಾವ, ಮಕ್ಳಿಗೆ ಚಹಾದಲ್ಲಿ ನಿದ್ರೆಯ ಮಾತ್ರೆ ಹಾಕಿಕೊಟ್ಟು ಈ ವಾರಗಿತ್ತಿಯರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಪ್ರಿಯಕರನೊಂದಿಗೆ ಓಡಿ ಹೋದ ವಾರಗಿತ್ತಿಯರು:

ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬಾಗ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲಿಡಾ ಗ್ರಾಮದಲ್ಲಿ ಸೋಮವಾರ ಅಂದರೆ ಸೆಪ್ಟೆಂಬರ್‌ 01 ರಂದು ಈ ವಿಚಿತ್ರ ಘಟನೆ ನಡೆದಿದ್ದು, ವಾರಗಿತ್ತಿಯರಿಬ್ಬರು ಪಕ್ಕದ ಮನೆಯ ಯುವಕನೊಂದಿಗೆ ಓಡಿ ಹೋಗಿದ್ದಾರೆ. ಈ ಇಬ್ಬರೂ ಮಹಿಳೆಯರು ಒಂದೇ ಯುವಕ ಪ್ರೀತಿಯಲ್ಲಿ ಬಿದ್ದಿದ್ದು, ಸೋಮವಾರ ಮನೆಯಲ್ಲಿದ್ದ ಅತ್ತೆ, ಮಾವ, ಮೂವರು ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟು, ಈ ವಾರಗಿತ್ತಿಯರಿಬ್ಬರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾರೆ.

ಮಲಿಡಾ ಗ್ರಾಮದ ಇಬ್ಬರು ಸಹೋದರರಾದ ಯಾಸಿನ್ ಶೇಖ್ ಮತ್ತು ಅನಿಸೂರ್ ಶೇಖ್‌ರ ಪತ್ನಿಯರಾದ ಕುಲ್ಚನ್‌ ಮಲ್ಲಿಕ್‌ ಮತ್ತು ನಜ್ಮಾ ಮಂಡಲ್‌ ಪಕ್ಕದ ಮನೆಯ ಯುವಕನೊಂದಿಗೆ ಓಡಿ ಹೋದವರು. ಅನಿಸೂರ್‌ ಅಲ್ಲೇ ಗ್ರಾಮದಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಯಾಸಿನ್‌ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಹೋದರರಿಬ್ಬರ ಪತ್ನಿಯರಿಗೆ ಪಕ್ಕದ ಮನೆಯ ಆರಿಫ್‌ ಮೊಲ್ಲಾ ಎಂಬಾತನ ಮೇಲೆ ಪ್ರೀತಿಯಾಗಿದೆ. ಈ ಇಬ್ಬರು ವಾರಗಿತ್ತಿಯರು ತಮ್ಮ ಪ್ರಿಯಕರನೊಂದಿಗೆ ಸೇರಿ ಅತ್ತೆ, ಮಾವ ಮತ್ತು ಮೂವರು ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟು ಮನೆಯಿಂದ ಓಡಿ ಹೋಗಿದ್ದಾರೆ.

ಇದನ್ನೂ ಓದಿ
Image
ಈಗಷ್ಟೇ ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ
Image
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
Image
15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!
Image
ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು

ಅನಿಸೂರ್ ಗ್ಯಾರೇಜ್‌ನಿಂದ ಮನೆಗೆ ಹಿಂತಿರುಗಿದಾಗ ಅವರ ಪೋಷಕರು ಮತ್ತು ಮೂವರು ಹೆಣ್ಣುಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ತಕ್ಷಣ ಬಾಗ್ಡಾ ಗ್ರಾಮೀಣ ಆಸ್ಪತ್ರೆಗೆ ಸೇರಿಸಿದ್ದು, ಅವರಿಗೆ ಪ್ರಜ್ಞೆ ಬಂದ ನಂತರ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದು, ಆ ಸಂದರ್ಭದಲ್ಲಿ ವಾರಗಿತ್ತಿಯರಿಬ್ಬರು ಪ್ರಿಯಕರನೊಂದಿಗೆ ಓಡಿ ಹೋದ ಘಟನೆಯ ಬಗ್ಗೆ ತಿಳಿದುಬಂದಿದೆ.

ಇದನ್ನೂ ಓದಿ: ಕರೆ ಮಾಡಿದಾಗ ಬ್ಯುಸಿ ಬಂದ ಲವ್ವರ್‌ ಫೋನ್;‌ ಕೋಪದಲ್ಲಿ ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಪ್ರಿಯಕರ

ಈ ಮೂವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮಂಗಳವಾರ ಅನಿಸೂರ್ ಶೇಖ್ ಬಾಗ್ಡಾ ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದ್ದಾರೆ. ಇನ್ನೊಂದು ಸಂಗತಿ ಏನಪ್ಪಾ ಅಂದ್ರೆ ವಾರಗಿತ್ತಿಯರೊಂದಿಗೆ ಓಡಿ ಹೋದ ಆರಿಫ್ ಕೂಡ ವಿವಾಹಿತ. ಆತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದರು. ಹೀಗಿದ್ದರೂ ಕೂಡಾ ಆತ ಒಂದೇ ಮನೆಯ ಇಬ್ಬರು ಸೊಸೆಯರೊಂದಿಗೆ ಪ್ರೀತಿಯಲ್ಲಿ ಬಿದ್ದು ಓಡಿ ಹೋಗಿದ್ದಾನೆ. ಈ ವಿಚಿತ್ರ ವಿವಾಹೇತರ ಸಂಬಂಧದ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ