AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕರೆ ಮಾಡಿದಾಗ ಬ್ಯುಸಿ ಬಂದ ಲವ್ವರ್‌ ಫೋನ್;‌ ಕೋಪದಲ್ಲಿ ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಪ್ರಿಯಕರ

ಈ ಪ್ರೀತಿಯಲ್ಲಿ ಬಿದ್ದವರು ಮಾಡುವ ಅವಾಂತರಗಳು ಒಂದೆರಡಲ್ಲ. ಪ್ರೇಮಿಗಳ ಇಂತಹ ಹುಚ್ಚಾಟಗಳಿಗೆ ಸಂಬಂಧಿಸಿ ಸುದ್ದಿಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ಗರ್ಲ್‌ಫ್ರೆಂಡ್‌ ಫೋನ್‌ ಬ್ಯುಸಿ ಬಂತೆಂಬ ಕಾರಣಕ್ಕೆ ಹುಚ್ಚು ಪ್ರೇಮಿಯೊಬ್ಬ ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾನೆ. ಆತ ವಿದ್ಯುತ್‌ ಕಂಬಕ್ಕೆ ಹತ್ತಿ ವೈರ್ ಕಟ್‌ ಮಾಡಿದ್ದು, ಈ ಕುರಿತ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Video: ಕರೆ ಮಾಡಿದಾಗ ಬ್ಯುಸಿ ಬಂದ ಲವ್ವರ್‌ ಫೋನ್;‌ ಕೋಪದಲ್ಲಿ ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಪ್ರಿಯಕರ
ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಪ್ರೇಮಿImage Credit source: Social Media
ಮಾಲಾಶ್ರೀ ಅಂಚನ್​
|

Updated on:Sep 03, 2025 | 12:06 PM

Share

ಪ್ರೀತಿಯಲ್ಲಿ (Lovers) ಬಿದ್ದವರು ತಾವು ಏನು ಮಾಡ್ತಿದ್ದೇವೆ ಎಂಬ ಅರಿವು ಅವರಿಗೆಯೇ ಇರೋದಿಲ್ಲ. ಕೆಲವೊಂದು ಘಟನೆಗಳನ್ನು ನೋಡಿದಾಗ ಇದೆಲ್ಲಾ ಇದೆಲ್ಲಾ ನಿಜ ಎಂದೆನಿಸುತ್ತದೆ. ಹೌದು ಕೆಲವರು ಹೇಗಪ್ಪಾ ಅಂದ್ರೆ ಗರ್ಲ್‌ಫ್ರೆಂಡ್‌ ತಮ್ಮನ್ನು ನಿರ್ಲಕ್ಷ್ಯಿಸುತ್ತಿದ್ದಾಳೆ ಎಂದು ಆಕೆಗೆ ಟಾರ್ಚರ್‌ ಕೊಡುವಂತಹದ್ದು ಮಾಡಿದ್ರೆ, ಇನ್ನೂ ಕೆಲವರು ಆತ್ಮಹತ್ಯೆಗೆ ಕೂಡಾ ಯತ್ನಿಸುವುದುಂಟು. ಪ್ರೇಮಿಗಳ ಹುಚ್ಚಾಟಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿದ್ದು, ಗರ್ಲ್‌ಫ್ರೆಂಡ್‌ ಕಾಲ್‌ ಪದೇ ಪದೇ ಬ್ಯುಸಿ ಬಂತೆಂಬ ಕಾರಣಕ್ಕೆ ಹುಚ್ಚು ಪ್ರೇಮಿಯೊಬ್ಬ (Lover cuts power to girlfriend village)  ಇಡೀ ಗ್ರಾಮದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ. ಆತ ವಿದ್ಯುತ್‌‌ ಕಂಬಕ್ಕೆ ಹತ್ತಿ ಕರೆಂಟ್‌ ವೈರ್‌ ತುಂಡು ಮಾಡಿದ್ದು, ಈ ಕುರಿತ ವಿಡಿಯೋವೊಂದು ಸಖತ್‌  ವೈರಲ್‌ ಆಗುತ್ತಿದೆ.

ಇಡೀ ಗ್ರಾಮದ  ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಹುಚ್ಚು ಪ್ರೇಮಿ:

ಯಾವಾಗ ಕಾಲ್‌ ಮಾಡಿದ್ರೂ ಕೂಡಾ ಗರ್ಲ್‌ ಫ್ರೆಂಡ್‌ ಫೋನ್‌ ಬ್ಯುಸಿ ಬರ್ತಿತ್ತು, ಆಕೆ ನನ್ನ ಒಂದು ಫೋನ್‌ ಕಾಲ್‌ ಕೂಡ ರಿಸೀವ್‌ ಮಾಡಿಲ್ಲ ಎಂದು ಹತಾಶೆಯಿಂದ ಹುಚ್ಚು ಪ್ರೇಮಿಯೊಬ್ಬ ಇಡೀ ಹಳ್ಳಿಯ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸಿದಂತಹ ಆಘಾತಕಾರಿ ಘಟನೆಯೊಂದು ನಡೆದಿದೆ.

ಇದನ್ನೂ ಓದಿ
Image
ಈಗಷ್ಟೇ ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ
Image
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
Image
15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!
Image
ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು

ಆತ ವಿದ್ಯುತ್ ಕಂಬಕ್ಕೆ ಹತ್ತಿ ಬೃಹತ್‌ ಗಾತ್ರದ ಪ್ಲೈಯರ್‌ನಿಂದ ಕರೆಂಟ್‌ ವೈರ್‌ ಕಟ್‌ ಮಾಡಿದ್ದಾನೆ. ತನ್ನ ವೈಯಕ್ತಿಕ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವ ಬದಲು ಆತ ಕೋಪದಲ್ಲಿ ಇಡೀ ಊರಿನ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು tv1indialive ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಗರ್ಲ್‌ ಫ್ರೆಂಡ್‌ ಫೋನ್‌ ಬ್ಯುಸಿ ಬಂದಿದ್ದಕ್ಕೆ ಆಕೆಯ ಇಡೀ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಪ್ರೇಮಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ವಿದ್ಯುತ್‌ ಕಂಬವನ್ನೇರಿ ನಿಂತಿರುವ ದೃಶ್ಯವನ್ನು ಕಾಣಬಹುದು. ಗರ್ಲ್‌ಫ್ರೆಂಡ್‌ ಕಾಲ್‌ ರಿಸೀವ್‌ ಮಾಡಿಲ್ಲ ಎಂಬ ಕಾರಣಕ್ಕೆ ಸಿನಿಮಿಯ ರೀತಿಯಲ್ಲಿ ಆತ ಇಡೀ ಹಳ್ಳಿಯ ವಿದ್ಯುತ್‌  ಸಂಪರ್ಕ ಕಡಿತಗೊಳಿಸಿದ್ದಾನೆ.

ಇದನ್ನೂ ಓದಿ: ಹೋಗ್ಬೇಡಮ್ಮ, ನೀನು ಬೇಕು, ಕುಟುಂಬವ ತೊರೆದು ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು

ಆಗಸ್ಟ್‌ 30 ರಂದು ಶೇರ್‌ ಮಾಡಲಾದ ಈ ವಿಡಿಯೋ 16.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಈತ ಬಾಲಿವುಡ್‌ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸಬೇಕುʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈತನ ಗರ್ಲ್‌ಫ್ರೆಂಡ್‌ ಕಾರಣಕ್ಕೆ ಈಗ ಇಡೀ ಹಳ್ಳಿ ಕತ್ತಲೆಯಲ್ಲಿ ಕೂರಬೇಕಾಯಿತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೌಶಲ್ಯಗಳ ಅತ್ಯುತ್ತಮ ಬಳಕೆʼ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Wed, 3 September 25