AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಏನ್ ಅವಸ್ಥೆ ನೋಡಿ; ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ

ದಿನನಿತ್ಯದ ಓಡಾಟಕ್ಕೆ ಸಾರಿಗೆ ಸಂಪರ್ಕ ಅತ್ಯಗತ್ಯ. ಆದರೆ ಊರಿಗೆ ರಸ್ತೆಯೇ ಇಲ್ಲದೇ ಹೋದರೆ ಅಲ್ಲಿನ ಜನರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಕೆಲವು ಕಡೆ ರಸ್ತೆಯಿಲ್ಲದೇ ಒದ್ದಾಡುವ ಜನರನ್ನು ನೀವು ನೋಡಿರುತ್ತೀರಿ. ಆದರೆ ಈ ಗ್ರಾಮದ ರಸ್ತೆಯೂ ಹೊಸದಾಗಿ ಡಾಂಬರೀಕರಣಗೊಂಡಿದೆ. ಈ ಗ್ರಾಮದ ಜನರು ಮಾಡುತ್ತಿರುವ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ಏನ್ ಅವಸ್ಥೆ ನೋಡಿ; ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on:Sep 02, 2025 | 4:23 PM

Share

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯಲ್ಲ. ಕೆಲವೊಮ್ಮೆ ನಮ್ಮ ಜನ ಬುದ್ಧಿವಂತರೋ ದಡ್ಡರೋ ಎನ್ನುವ ಅನುಮಾನ ಬರುತ್ತೆ. ಊರಿಗೆ ರಸ್ತೆಯಾದ್ರೆ (Road) ಸಹಜವಾಗಿ ಆ ಗ್ರಾಮಸ್ಥರಿಗೆ ಖುಷಿಯಾಗುತ್ತೆ. ಆದರೆ ಈ ಗ್ರಾಮದ ಜನರು ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಬಕೆಟ್‌ಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ಘಟನೆಯೂ ಬಿಹಾರದಲ್ಲಿ (Bihar) ನಡೆದಿದೆ ಎನ್ನಲಾಗಿದೆ. ಈ ಘಟನೆಯೂ ಬಿಹಾರದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಗ್ರಾಮದ ಜನರು ಸಿಕ್ಕಾಪಟ್ಟೆ ಬುದ್ಧಿವಂತರು ಎಂದು ಕಾಲೆಳೆದಿದ್ದಾರೆ.

@thatinadicmonk ಹೆಸರಿನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಹೊಸ ರಸ್ತೆ, ಶೋಚನೀಯ ಸ್ಥಿತಿ ನಿರ್ಮಾಣ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹೀಗೆ ಕದ್ದಿದ್ದಾರೆ. ಮೀಸಲಾತಿಯನ್ನು ಮೂಲಭೂತವಾಗಿ ಅಗತ್ಯ ನೀತಿಯಾಗಿ ನಂಬುವ, ಪೀಳಿಗೆಯಿಂದ ಪೀಳಿಗೆಗೆ ಉಚಿತ ಸಾರಿಗೆಯನ್ನು ಪ್ರೋತ್ಸಾಹಿಸುವ ದೇಶವು ಯಾವಾಗಲೂ ಇಂತಹ ವ್ಯಕ್ತಿಗಳನ್ನು ಉತ್ಪಾದಿಸುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿ ಹೋಗಿದ್ದು, ರಸ್ತೆಯೂ ಹೊಸದರಂತೆಯೇ ಕಾಣುತ್ತಿದೆ. ಆದರೆ ಗ್ರಾಮಸ್ಥರು ರಸ್ತೆಗೆ ಹಾಕಿದ್ದ ಡಾಂಬರನ್ನು ಹಾರೆಯಿಂದ ಕಿತ್ತು ಬಕೆಟ್ ಗೆ ತುಂಬಿಸಿಕೊಳ್ಳುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ಈಜುಕೊಳದಂತಾದ ಬೆಂಗಳೂರು ಡಬಲ್ ಡೆಕ್ಕರ್ ಫ್ಲೈಓವರ್: ವಿಡಿಯೋ ವೈರಲ್
Image
ಗೂಗಲ್ ಮ್ಯಾಪ್ ತಂದ ಎಡವಟ್ಟು; ಸೇತುವೆ ಮೇಲೆ ಸಿಲುಕಿದ ವಾಹನ, ಏನಾಯ್ತು ನೋಡಿ
Image
ಬೆಂಗಳೂರಿಗರೇ, ಎಲ್ಲಿ ಗುಂಡಿ ಕಂಡರೂ ಗುಂಡಿ ಗಮನ ಆ್ಯಪ್ ಬಳಸಿ
Image
ಸೈಕಲ್​ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಈಜುಕೊಳದಂತಾದ ಬೆಂಗಳೂರು ಡಬಲ್ ಡೆಕ್ಕರ್ ಫ್ಲೈಓವರ್: ವಿಡಿಯೋ ವೈರಲ್, ಎಂಜಿನಿಯರಿಂಗ್ ಅದ್ಭುತ ಎಂದ ನೆಟ್ಟಿಗರು

ಆಗಸ್ಟ್ 31 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರೊಬ್ಬರು, ತಮ್ಮ ಊರು ಅಭಿವೃದ್ಧಿಯತ್ತ ಸಾಗುತ್ತಿರುವುದನ್ನು ಪ್ರೋತ್ಸಾಹಿಸಬೇಕು, ಈ ರೀತಿ ಮಾಡುವುದನ್ನು ಸರಿಯಲ್ಲ ಎಂದಿದ್ದಾರೆ. ಇನ್ನೊಬ್ಬರು ಯಾವ ಕಾರಣಕ್ಕಾಗಿ ಕಾಂಕ್ರೀಟ್ ಹಾಕಲಾದ ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Tue, 2 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ