Optical illusion: ನೀವು ಜಾಣರಾಗಿದ್ರೆ ಹಚ್ಚಹಸಿರಿನ ಹೊಲದಲ್ಲಿ ಅಡಗಿರುವ ಇಬ್ಬರೂ ಮಕ್ಕಳನ್ನು 10 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ?
ಮೆದುಳಿನ ಚುರುಕುತನ ಹಾಗೂ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಆಪ್ಟಿಕಲ್ ಇಲ್ಯೂಷನ್‌ನಂತಹ ಒಗಟಿನ ಆಟಗಳನ್ನು ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ಎಷ್ಟೇ ಟೆನ್ಶನ್ ಇರಲಿ ಇಂತಹ ಒಗಟಿನ ಆಟವು ಮೈಂಡ್‌ನ್ನು ರಿಲ್ಯಾಕ್ಸ್ ಆಗಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ಒಗಟಿನ ಚಿತ್ರದಲ್ಲಿ ಹಚ್ಚಹಸಿರಾದ ಹೊಲದಲ್ಲಿ ಅಡಗಿರುವ ಇಬ್ಬರೂ ಮಕ್ಕಳನ್ನು ಪತ್ತೆ ಹಚ್ಚಬೇಕು. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ?.

ಕೆಲವರು ಬಿಡುವಿನ ನಡುವೆ ಈ ಆಪ್ಟಿಕಲ್ ಇಲ್ಯೂಷನ್ ನತ್ತ ಚಿತ್ರಗಳನ್ನು ಬಿಡಿಸುತ್ತಾರೆ. ಇನ್ನು ಕೆಲವರು ಈ ಬಿಡುವು ಸಿಕ್ಕಾಗಲ್ಲೆಲ್ಲಾ ಈ ಒಗಟಿನ ಚಿತ್ರದತ್ತ ಗಮನ ಹರಿಸುತ್ತಾರೆ. ಆದರೆ ಈ ಆಪ್ಟಿಕಲ್ ಇಲ್ಯೂಷನ್ ನಂತಹ (Optical Illusion) ಒಗಟಿನ ಚಿತ್ರಗಳು ಮೆದುಳಿಗೆ ಕೆಲಸ ನೀಡುತ್ತದೆ. ಒಂದು ಕ್ಷಣ ನಮ್ಮ ಕಣ್ಣನ್ನು ಮೋಸಗೊಳಿಸಿ ಮೆದುಳಿನ ತೀಕ್ಷ್ಣತೆ, ಕಣ್ಣಿನ ಚುರುಕುತನವನ್ನು ಪರೀಕ್ಷಿಸುವ ಮೂಲಕ ವೈಯುಕ್ತಿಕ ಸಾಮರ್ಥ್ಯ ಎಷ್ಟಿದೆ ಎಂದು ಬಹಿರಂಗ ಪಡಿಸುತ್ತದೆ. ನಿಮಗೂ ಇಂತಹ ಭ್ರಮೆ ಉಂಟು ಮಾಡುವ ಒಗಟಿನ ಚಿತ್ರ ಬಿಡಿಸುವ ಕ್ರೇಜ್ ಇದ್ರೆ ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದೆ. ದಿಗಂತದ ಕೊನೆಯವರೆಗೂ ಹಚ್ಚಹರಿಸಿರಿಂದ ಚಾಚಿಕೊಂಡಿರುವ ಬೆಳೆಯೂ ಇದ್ದು, ಇಲ್ಲಿ ಅಡಗಿರುವ ಇಬ್ಬರು ಮಕ್ಕಳನ್ನು ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.
ಈ ಚಿತ್ರದಲ್ಲಿ ಏನಿದೆ?
ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹೊಲವು ಹಚ್ಚಹಸಿರಾದ ಬೆಳೆಗಳಿಂದ ಆವೃತ್ತವಾಗಿದೆ. ಹೊಲವನ್ನು ಆವರಿಸಿರುವ ಎತ್ತರದ ಬೆಳೆಗಳ ನಡುವೆ ಒಬ್ಬ ಹುಡುಗ ಮತ್ತು ಹುಡುಗಿಯೂ ಇದ್ದಾರೆ. ಆದರೆ ಈ ಮಕ್ಕಳನ್ನು ಕೇವಲ ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು. ಈ ಚಿತ್ರವನ್ನು ನೀವು ಸೂಕ್ಷ್ಮವಾಗಿ ಗಮನಿಸಿ ಉತ್ತರವನ್ನು ಹೇಳಲು ಸಾಧ್ಯವೇ ಎಂದು ನೋಡಿ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಲ್ಲಿರಾ?
ಉತ್ತರ ಇಲ್ಲಿದೆ
ಈ ಆಪ್ಟಿಕಲ್ ಇಲ್ಯೂಷನ್ ಒಗಟಿನ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದರೂ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ, ಬಹುತೇಕರಿಗೆ ನಿಮ್ಮಂತೆ ಆಗಿದೆ. ಈ ಹಚ್ಚಹಸಿರಾದ ಬೆಳೆಯ ನಡುವೆ ಇಬ್ಬರೂ ಮಕ್ಕಳು ಎಲ್ಲಿದ್ದಾರೆ ಎಂದು ನಾವು ನಿಮಗೆ ಹೇಳುತ್ತೇವೆ. ಈ ಮಕ್ಕಳು ಮಧ್ಯದಲ್ಲಿ ಹಾಗೂ ಬಲಭಾಗದಲ್ಲಿ ಬೆಳೆಗಳ ನಡುವೆ ಮರೆಮಾಡಲ್ಪಟ್ಟಿದ್ದಾರೆ. ಸ್ಪಷ್ಟವಾಗಿ ಗಮನಿಸಿದರೆ ಈ ಇಬ್ಬರೂ ಮಕ್ಕಳು ನಿಮ್ಮ ಕಣ್ಣಿಗೆ ಕಾಣಿಸುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








