Video: ಬೆಂಗಳೂರಿನಲ್ಲಿ ತಮ್ಮ ತಿಂಗಳ ಖರ್ಚು ಎಷ್ಟೆಂದು ರಿವೀಲ್ ಮಾಡಿದ ದಂಪತಿ
ಬೆಂಗಳೂರಿನಲ್ಲಿ ಬದುಕೋದು ತುಂಬಾನೇ ಕಷ್ಟ. ಎಷ್ಟೇ ದುಡಿದ್ರೂ ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣವೇ ಉಳಿಯಲ್ಲ. ಬೆಂಗಳೂರಿನ ದಂಪತಿಯದ್ದು ಇದೇ ಪರಿಸ್ಥಿತಿ. ಇವರು ಇಲ್ಲಿ ಬದುಕುವವರ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಲಕ್ಷಾನುಗಟ್ಟಲೆ ರೂಪಾಯಿ ಇದ್ರೂ ಸಾಲಲ್ಲ ಎಂದು ವಿವರಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದೆ.

ಬಹುತೇಕರಿಗೆ ಬೆಂಗಳೂರು (Bengaluru) ಅಂದ್ರೆ ದುಬಾರಿ, ಇಲ್ಲಿ ಜೀವನ ನಡೆಸೋದು ಕಷ್ಟ ಎನ್ನುತ್ತಾರೆ. ಹೀಗಾಗಿ ಕೆಲಸಕ್ಕೆಂದು ಇಲ್ಲಿಗೆ ಬರುವವರು ದುಡಿದ ಸಂಪಾದನೆಯಲ್ಲಿ ಅಷ್ಟೋ ಇಷ್ಟೋ ಖರ್ಚು ಮಾಡಿ ತಮ್ಮ ಇತಿಮಿತಿಯಲ್ಲಿ ಇರುತ್ತಾರೆ. ಆದರೆ ದಂಪತಿಗಳಿಗೆ ಇಲ್ಲಿ ಜೀವನ ನಡೆಸೋದು ಅಷ್ಟು ಸುಲಭವಲ್ಲ. ಬಾಡಿಗೆ, ವಿದ್ಯುತ್ ಬಿಲ್, ಸಾರಿಗೆ ಹಾಗೂ ದಿನಸಿ ಸಾಮಾನು ಎಂದು ಕೈಯಲ್ಲಿದ್ದ ದುಡ್ಡು ನೀರಿನಂತೆ ಹರಿದು ಹೋಗುತ್ತದೆ. ಬೆಂಗಳೂರಿನಲ್ಲಿ ನೆಲೆಸಿರುವ ದಂಪತಿ ತಮ್ಮ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದ್ದು ಆಗಸ್ಟ್ ತಿಂಗಳ (August Month) ಒಟ್ಟು ಖರ್ಚು ಎಷ್ಟಾಯಿತು ಎಂದು ಬಹಿರಂಗ ಪಡಿಸಿದ್ದಾರೆ. ಈ ಕುರಿತಾದ ಪೋಸ್ಟ್ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ಶಾಕ್ ಆಗಿದ್ದಾರೆ.
ಆಗಸ್ಟ್ ತಿಂಗಳ ಒಟ್ಟು ಖರ್ಚು ಎಷ್ಟೆಂದು ರಿವೀಲ್ ಮಾಡಿದ ದಂಪತಿ
eacapetolandscapes ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದಂಪತಿ ತಮ್ಮ ತಿಂಗಳ ಒಟ್ಟು ಖರ್ಚು ಎಷ್ಟಾಗುತ್ತದೆ ಎಂದು ಹೇಳಿದ್ದಾರೆ. ಮನೆ ಬಾಡಿಗೆ 42,000 ರೂ, ಫಿಟ್ನೆಸ್ 40,000 ರೂ (ಪರ್ಸನಲ್ ಟ್ರೇನರ್ ಹಾಗೂ ಪಿಲೇಟ್ಸ್ ಸೆಷನ್), ದಿನಸಿಗೆ ರೂ 20,000, ದಿನನಿತ್ಯದ ಅಗತ್ಯಗಳು 10,000 ರೂ (ಮನೆಕೆಲಸದಾಕೆಯ ವೆಚ್ಚ, ಒಟಿಟಿ, ಅಗತ್ಯ ವೆಚ್ಚಗಳು) ಆಹಾರ 13,000 ರೂ (ಆನ್ಲೈನ್ ಆರ್ಡರ್ + ಔಟ್‌ಸೈಡ್ ತಿನ್ನೋದು), ಟ್ರಾವೆಲ್ 3,50,000 ರೂ (2 ಅಂತರಾಷ್ಟ್ರೀಯ + 2 ದೇಶೀಯ ಪ್ರವಾಸ ಸೇರಿ), ಹೂಡಿಕೆ 1,00,000 ರೂ ಹಾಗೂ ಇತರ ವೆಚ್ಚಗಳು 13,000 ರೂ (ಕ್ಯಾಬ್, ಇನ್ಶುರೆನ್ಸ್) ಎಂದು ಹೇಳಿದ್ದಾರೆ. ಕೊನೆಗೆ ಒಟ್ಟು ವೆಚ್ಚ 5,90,000 ರೂ ಎಂದು ಹೇಳುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದಲ್ಲಿ ದಂಪತಿಯೂ ನಾವು ಪ್ರತಿ ತಿಂಗಳು ಖರ್ಚು-ಗಳಿಕೆಗಳ ಬಗ್ಗೆ ಚರ್ಚೆ ಮಾಡುತ್ತೇವೆ, ಹೂಡಿಕೆಗೆ ಹಣ ಮೀಸಲಿಡುತ್ತೇವೆ. ಹಣದ ಬಗ್ಗೆ ಪ್ರಾಮಾಣಿಕ ಮಾತುಕತೆ ಯಾವುದೇ ದಂಪತಿಗೆ ಅಗತ್ಯ ಎಂದಿದ್ದಾರೆ. ಈ ವಿಡಿಯೋ ಇದುವರೆಗೆ 4.5 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದ್ದು ಇವರ ತಿಂಗಳ ಖರ್ಚು ವೆಚ್ಚವನ್ನು ಕಂಡು ಬಳಕೆದಾರರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ:Viral: ಅತುಲ್ ಪತ್ನಿ ನಾಪತ್ತೆ; ಬೆಂಗಳೂರಿನಲ್ಲಿ ಗಮನ ಸೆಳೆಯುತ್ತಿದೆ ವಿಚಿತ್ರ ಜಾಹೀರಾತು
ಈ ವಿಡಿಯೋಗೆ ಬಳಕೆದಾರರೊಬ್ಬರು, ನಿಮ್ಮ ತಿಂಗಳ ಆದಾಯ ಎಷ್ಟು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಇಷ್ಟೊಂದು ಐಷಾರಾಮಿ ಜೀವನ ನಡೆಸಿದ್ರೆ ಎಷ್ಟು ದುಡಿದ್ರೂ ಸಾಕಾಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ದಂಪತಿಯ ತಿಂಗಳ ಖರ್ಚು, ನನ್ನದು ಒಂದು ವರ್ಷದ ಖರ್ಚು ಆಗಿದೆ ಎಂದು ವಾಸ್ತವ ಸ್ಥಿತಿಯನ್ನು ಇನ್ನೊಬ್ಬರು ಕಾಮೆಂಟ್ ಮಾಡಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Fri, 5 September 25








