Video: ತನ್ನ ಊರಿನ ಸಣ್ಣದಾದ ಹೋಟೆಲ್‌ಗೆ ವಿಭಿನ್ನವಾಗಿ ಪ್ರಮೋಷನ್ ನೀಡಿದ ವ್ಯಕ್ತಿ
ಸೋಶಿಯಲ್ ಮೀಡಿಯಾದಲ್ಲಿ ಕೆಲವು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಷ್ಯಗಳು ಗಂಭೀರವಾಗಿದ್ರು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಇದೀಗ ಇಂತಹದ್ದೇ ದೃಶ್ಯ ವೈರಲ್ ಆಗಿದ್ದು ವ್ಯಕ್ತಿಯೊಬ್ಬ ಸಣ್ಣದಾದ ಸ್ಥಳೀಯ ಹೋಟೆಲ್‌ವೊಂದಕ್ಕೆ ವಿಭಿನ್ನವಾಗಿ ಪ್ರಮೋಷನ್ ನೀಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಬೆಳ್ತಂಗಡಿ, ಸೆಪ್ಟೆಂಬರ್ 04: ಪ್ರತಿಯೊಂದು ಮಳಿಗೆಗಳು, ಹೋಟೆಲ್‌ಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ವಿಶಿಷ್ಟ ರೀತಿಯ ಮಾರುಕಟ್ಟೆ ತಂತ್ರಗಳನ್ನು ಬಳಸಿಕೊಳ್ಳುತ್ತವೆ. ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ರೀತಿಯ ಜಾಹೀರಾತನ್ನು ನೀಡುತ್ತವೆ. ಆದರೆ ಬೆಳ್ತಂಗಡಿ ತಾಲೂಕಿನ ಪನಕಜೆ (Panakaje of Belthangady) ಎಂಬಲ್ಲಿ ಇರುವ ಸಣ್ಣದಾದ ಹೋಟೆಲ್‌ವೊಂದಕ್ಕೆ ನ್ಯೂಸ್ ಓದೋ ರೀತಿಯಲ್ಲಿ ವ್ಯಕ್ತಿಯೊಬ್ಬ ಪ್ರಮೋಷನ್ (Promotion)ನೀಡಿದ್ದಾನೆ. ಈ ವಿಡಿಯೋ ನೋಡಿದ ಮೇಲೆ ಈ ರೀತಿಯ ಪ್ರಮೋಷನ್ ಯಾವ ಫೈವ್ ಸ್ಟಾರ್ ಹೋಟೆಲ್‌ಗೂ ಸಿಕ್ಕಿರಲು ಸಾಧ್ಯವೇ ಇಲ್ಲ ಎಂದು ನಿಮ್ಗೆ ಅನಿಸಿದ್ರೂ ತಪ್ಪಿಲ್ಲ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
praveendsouza301 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವ್ಯಕ್ತಿಯೊಬ್ಬನು ಸಣ್ಣದಾದ ಹೋಟೆಲ್‌ವೊಂದಕ್ಕೆ ಪ್ರಮೋಷನ್ ನೀಡುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಹೋಟೆಲ್ ಮುಂಭಾಗದಲ್ಲಿ ನಿಂತು ಕೊಂಡಿದ್ದು, ಬೆಳ್ತಂಗಡಿ ತಾಲೂಕಿನ ಪನಕಜೆಯ ಎಂಬಲ್ಲಿ ಮಸೀದಿಯ ಹತ್ತಿರ ಹೋಟೆಲ್ ಇದೆ. ಈ ಹೋಟೆಲ್‌ಗೆ ಸುತ್ತಮುತ್ತಲಿನ ಹಳ್ಳಿಯ ಜನರು ಬರಬೇಕಾಗಿ ಕೇಳಿಕೊಳ್ಳುತ್ತೇನೆ. ಈ ಹೋಟೆಲ್‌ನಲ್ಲಿ ಗೋಳಿಬಜೆ, ಚಟ್ಟಂಬಡೆ, ಬಿಸ್ಕಟ್ ಅಬಂಡೆ, ಸಜ್ಜಿಗೆ ಬಜಿಲ್, ಊಟ, ಆಮ್ಲೆಟ್ ಎಲ್ಲಾ ಮಾಡಿ ಕೊಡಲಾಗುತ್ತದೆ. ಇಷ್ಟು ಹೇಳಿ ನಾನು ಮಾತುಗಳನ್ನು ಮುಗಿಸುತ್ತಿದ್ದೇನೆ, ಧನ್ಯವಾದಗಳು ಎಂದು ಹೇಳಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: Viral: ಅತುಲ್ ಪತ್ನಿ ನಾಪತ್ತೆ; ಬೆಂಗಳೂರಿನಲ್ಲಿ ಗಮನ ಸೆಳೆಯುತ್ತಿದೆ ವಿಚಿತ್ರ ಜಾಹೀರಾತು
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಆಕಾಶವಾಣಿ ವಾರ್ತೆಗಳು ಇಲ್ಲಿಗೆ ಮುಕ್ತಾಯವಾಯಿತು ಎಂದಿದ್ದಾರೆ. ಇನ್ನೊಬ್ಬರು ಹೋಟೆಲ್ ನೋಡುವಾಗಲೇ ಅಲ್ಲಿಗೆ ಹೋಗುವುದು ಬೇಡವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೌದಾ ಮರ್ರೆರೇ ಹಾಗದ್ರೆ ಒಂದು ಹತ್ತು ಪ್ಲೇಟ್ ಪಾರ್ಸೆಲ್ ಮಾಡಿ ಅಥವಾ ಕೊರಿಯರ್ ಮಾಡಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








