Viral: ನಾವು ದುಡ್ಡು ಪಾವತಿಸ್ತೇವೆ ಎಂದು ದರ್ಪ ತೋರಿಸುವ ವಿದ್ಯಾರ್ಥಿಗಳು, ನೋವಿನ ಕಥೆ ಬಿಚ್ಚಿಟ್ಟ ಹೌಸ್ ಕೀಪರ್
ಬದುಕು ಎಲ್ಲರದ್ದು ಒಂದೇ ರೀತಿ ಇರಲ್ಲ. ಹೀಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಅದರಲ್ಲೇ ಖುಷಿ ಕಾಣುವವರು ಹಲವು ಮಂದಿ. ಆದರೆ ಅವರವರ ಕೆಲಸದ ಕಷ್ಟ ಅವರಿಗೆ ಮಾತ್ರ ಗೊತ್ತು. ಹೌಸ್ ಕೀಪರ್ ಆಗಿ ಬಾಂಬೆ ಐಐಟಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಬಿಚ್ಚಿಟ್ಟ ಸತ್ಯ ತಿಳಿದ್ರೆ ಎಜುಕೇಟೆಡ್‌ಗಿಂತ ಜನಸಾಮಾನ್ಯರೇ ಎಷ್ಟೋ ವಾಸಿ ಎಂದೆನಿಸುತ್ತದೆ. ಹಾಗಾದ್ರೆ ಸ್ವಚ್ಛತಾ ಸಿಬ್ಬಂದಿ ಬಿಚ್ಚಿಟ್ಟ ಸತ್ಯವೇನು ಈ ಕುರಿತಾದ ಕುತೂಹಲ ಕಾರಿ ಮಾಹಿತಿ ಇಲ್ಲಿದೆ.

ಡಿಗ್ರಿ, ಡಬಲ್ ಡಿಗ್ರಿ ಪಡೆಡುಕೊಂಡಿದ್ದರೆ ಏನಂತೆ, ಒಳ್ಳೆಯ ನಡೆ ನುಡಿ, ಎಲ್ಲರನ್ನು ಸಮಾನವಾಗಿ ಕಾಣುವ ಮನಸ್ಥಿತಿ ಹಾಗೂ ಯಾರಿಗೂ ತೊಂದರೆ ನೀಡದೇ ಬದುಕುವುದು ಬಹಳ ಮುಖ್ಯ. ಆದರೆ ಎಜುಕೇಕೆಡ್ ಹಾಗೂ ಹೈ ಕ್ಲಾಸ್ ವ್ಯಕ್ತಿಗಳ ಮನಸ್ಥಿತಿಗಳು ವಿಭಿನ್ನವಾಗಿರುತ್ತದೆ. ಓದು ಬರಹ ಗೊತ್ತಿಲ್ಲದ ಸಣ್ಣ ಪುಟ್ಟ ಕೆಲಸವನ್ನು (job) ಮಾಡಿಕೊಂಡು ಜೀವನ ನಡೆಸುವವರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಹೌದು, ಐಟಿ ಬಾಂಬೆಯಲ್ಲಿ ತಂತ್ರಜ್ಞರಾಗಿ ಕೆಲಸದಲ್ಲಿರುವ ಆರವ್ ರಂಗ್ವಾನಿಯವರ (Arav Rangwani) ಬಳಿ ಹೌಸ್ ಕೀಪರ್ ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ವಿವರಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿದ್ಯಾವಂತರಾಗಿದ್ದು ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ.
ಹೌಸ್ ಕೀಪರ್ ನೋವಿನ ಕಥೆಯಿದು
ಐಐಟಿ ಬಾಂಬೆಯಲ್ಲಿ ಟಾಯ್ಲೆಟ್ ಬಾತ್‌ರೂಮ್ ಸ್ವಚ್ಛತಾ ಸಿಬ್ಬಂದಿಯೊಬ್ಬರು, ಆರವ್ ರಂಗ್ವಾನಿರವರ ಜೊತೆಗೆ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡು ಹೌಸ್ ಕೀಪರ್ ತನ್ನ ಜೊತೆಗೆ ಏನೆಲ್ಲಾ ಹೇಳಿಕೊಂಡ ಎನ್ನುವ ಬಗ್ಗೆ ವಿವರಿಸಿದ್ದಾರೆ. ನಾನು ನಿನ್ನೆ ಕ್ಲಾಸ್‌ನಲ್ಲಿ ಉಪನ್ಯಾಸ ಮುಗಿಸಿ ಬಳಿಕ ಕೈ ತೊಳೆದುಕೊಳ್ಳುವುದಕ್ಕಾಗಿ ವಾಶ್‌ರೂಮ್‌ಗೆ ಹೋಗಿದ್ದೆ. ಅಲ್ಲಿ ಹೌಸ್ ಕೀಪರ್ ಒಬ್ಬರು ಇದ್ದರು. ನನ್ನ ನೋಡಿದ ತಕ್ಷಣ ನಾನು ಇಲ್ಲಿ ಕ್ಲೀನ್ ಮಾಡ್ತಿದ್ದೇನೆ, ಆಮೇಲೆ ಬನ್ನಿ ಎಂದು ಹೇಳಿದರು. ಅದಕ್ಕೆ ನಾನು ಸರಿ ಎಂದೆ. ಆ ಬಳಿಕ ನನ್ನ ಬಳಿ ನಿಮಗೆ ಏನು ಮಾಡಬೇಕಿತ್ತು ಎಂದು ಕೇಳಿದ್ರು. ನಾನು ಕೈ ಕಾಲು ತೊಳೆಯಬೇಕಿತ್ತು ಎಂದು ಉತ್ತರಿಸಿದೆ. ಹಾಗಾದ್ರೆ ನೀವು ಆ ಕೊನೆಯ ಟಾಯ್ಲೆಟ್ ಖಾಲಿ ಇದೆ ಅಲ್ಲಿಗೆ ಹೋಗಿ ಕಾಲು ತೊಳೆದುಕೊಳ್ಳಿ ಎಂದು ಹೇಳಿದ್ರು. ನಾನು ಅವರು ಹೇಳಿದ್ದಂತೆ ಕಾಲು ತೊಳೆದು ಹೊರಗೆ ಬಂದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಹೊರಗೆ ಬರುತ್ತಿದ್ದಂತೆ ಅವರಿಗೆ ಏನು ಅನಿಸಿತು ಎಂದು ಗೊತ್ತಿಲ್ಲ, ನನ್ನ ಬಳಿ ತಮ್ಮ ಕೆಲಸದಲ್ಲಿನ ಕಷ್ಟಗಳನ್ನು ಹೇಳಲು ಪ್ರಾರಂಭಿಸಿದ್ರು. ಅಣ್ಣ ಇಲ್ಲಿ ಯಾರು ಕೂಡ ಹೇಳುವುದನ್ನು ಕೇಳುವುದೇ ಇಲ್ಲ. ನಾನು ಕ್ಲೀನ್ ಮಾಡ್ತಾ ಇರ್ತೆನೆ ಅವರು ಟಾಯ್ಲೆಟ್ ಬಳಸಿ ಅದನ್ನು ಗಲೀಜು ಮಾಡಿ ನೀರು ಹಾಕದೇನೇ ಹೋಗಿ ಬಿಡ್ತಾರೆ. ಮೂತ್ರ ವಿಸರ್ಜನೆ ಮಾಡಿದ ಮೇಲೆ ಫ್ಲಶ್ ಮಾಡಿದ್ರೆ ಕೆಟ್ಟ ವಾಸನೆ ಬರೋದು ನಿಲ್ಲುತ್ತೆ. ಆದರೆ ಅವರು ಫ್ಲಶ್ ಮಾಡುವುದೇ ಇಲ್ಲ ಎಂದು ಹೌಸ್ ಕೀಪರ್ ಹೇಳಿಕೊಂಡ ವಿಚಾರವನ್ನು ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಎಷ್ಟೇ ಸ್ವಚ್ಛ ಮಾಡಿದ್ರು ಮತ್ತೆ ಅದೇ ಪರಿಸ್ಥಿತಿ ಎಂದ ಹೌಸ್ ಕೀಪರ್
ಇನ್ನು ಕಸ ಹಾಕುವುದಕ್ಕೆ ಕಸದ ಬುಟ್ಟಿ ಇದೆ. ಆದರೆ ಕಸವನ್ನು ವಾಟರ್ ಕೂಲರ್‌ನ ಮೇಲೆ ಹಾಕ್ತಾರೆ. ಟಾಯ್ಲೆಟ್ ಕ್ಲೀನ್ ಆಗಿ ಇಡಲ್ಲ. ನಾನು ಎಲ್ಲವನ್ನು ಸ್ವಚ್ಛಗೊಳಿಸಬೇಕು. ಕಿಟಕಿ ತುಂಬಾ ಮದ್ಯದ ಬಾಟಲಿಗಳು. ಎಲ್ಲವನ್ನು ಸ್ವಚ್ಛ ಮಾಡಿ ಹೋಗಿದ್ರು, ಮತ್ತೆ ಹಾಗೆಯೇ ಆಗಿರುತ್ತದೆ. ಈ ಬಗ್ಗೆ ನಾನು ನೇರವಾಗಿ ಹೇಳಿದರೆ ವಿದ್ಯಾರ್ಥಿಗಳು ನಾವು ದುಡ್ಡು ಪಾವತಿಸುತ್ತೇವೆ ಎನ್ನುವ ಸೊಕ್ಕಿನ ಮಾತುಗಳನ್ನು ಆಡುತ್ತಾರೆ. ಈ ಮಾತು ಕೇಳಿದ ಬಳಿಕ ನನಗೆ ಮಾತನಾಡುವುದಕ್ಕೆ ಆಗಲ್ಲ ಎಂದರು ಹೌಸ್ ಕೀಪರ್. ಈ ಮಾತು ಕೇಳಿ ನನ್ನ ಮನಸ್ಸಿಗೆ ತುಂಬಾನೇ ಬೇಜಾರಾಯ್ತು ಎಂದು ಆರವ್ ಬರೆದುಕೊಂಡಿದ್ದಾರೆ.
ಹೌಸ್ ಕೀಪರ್‌ಗಳು ದೂರು ನೀಡಿದ್ರೂ ಪ್ರಯೋಜನವಿಲ್ಲ
ಈ ವಿಚಾರದ ಬಗ್ಗೆ ತಿಳಿಸಿದ ಆರವ್, ಆ ಸ್ವಚ್ಛತಾ ಸಿಬ್ಬಂದಿಯೂ ಹೇಳುವುದೆಲ್ಲವನ್ನು ಗಮನವಿಟ್ಟು ಕೇಳಿಸಿಕೊಂಡೆ. ಆ ವ್ಯಕ್ತಿಯೂ ನನಗೆ ಶಕ್ತಿಹೀನನಾಗಿ ಕಂಡ. ಈ ವ್ಯಕ್ತಿಗಳಿಗೆ ಏನು ಹೇಳ್ಬೇಕು, ಯಾರ ಬಳಿ ಹೇಳ್ಬೇಕು ಎಂದು ತಿಳಿದಿರುವುದಿಲ್ಲ. ಹೀಗಾಗಿ ಏನು ಮಾತನಾಡದೇ ಮೌನವಾಗಿಯೇ ಇರ್ತಾರೆ. ಈ ಸ್ವಚ್ಛತಾ ಸಿಬ್ಬಂದಿಗಳು ದೂರು ನೀಡಿದ್ರು, ನಾವುಗಳು ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಈ ರೀತಿ ಘಟನೆಗಳು ಮುಂದುವರೆಯುತ್ತಲೇ ಇರುತ್ತದೆ ಎಂದು ಕಟು ವಾಸ್ತವವನ್ನು ವಿವರಿಸಿದ್ದಾರೆ.
ದುಡ್ಡು ಕೊಡುತ್ತೇವೆ ಎಂದ ಕೂಡಲೇ ಯಾರಿಗೂ ಸಂಪತ್ತನ್ನು ಹಾಳು ಮಾಡುವ ಅಧಿಕಾರವಿಲ್ಲ. ಮೂಲಭೂತ ಸ್ವಚ್ಛತೆ ಹಾಗೂ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಆ ವ್ಯಕ್ತಿಯೂ ತನ್ನ ಸಮಸ್ಯೆಯನ್ನು ಈ ವ್ಯಕ್ತಿ ಕೇಳಿಸಿಕೊಳ್ತಾನೆ ಎಂದು ಮನಸ್ಸು ಬಿಚ್ಚಿ ನನ್ನೊಂದಿಗೆ ಎಲ್ಲವನ್ನು ಹಂಚಿಕೊಂಡ. ದಿನಕ್ಕೆ ಎಂಟು ಗಂಟೆಗಳ ಕಾಲ ದುಡಿಯುವ ಈ ವ್ಯಕ್ತಿಯೂ ತನ್ನದೇ ಧ್ವನಿಯನ್ನು ಹೊಂದಿದ್ದಾನೆ. ಅವನ ಧ್ವನಿಗೆ ನನ್ನ ಧ್ವನಿಗೂಡಿಸುತ್ತೇನೆ ಎಂದು ಹೇಳಿದ್ದಾರೆ ಆರವ್.
ಇದನ್ನೂ ಓದಿ:Viral: ಸತತ 11 ವರ್ಷಗಳಿಂದ ವಡಾ ಪಾವ್ ಮಾರಿ ಜೀವನ ಸಾಗಿಸುತ್ತಿರುವ ಯಶಸ್ವಿ ಮಹಿಳೆಯ ಕಥೆಯಿದು
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ಮೌಲ್ಯಯುತವಲ್ಲದ ಶಿಕ್ಷಣವೇ ಇದಕ್ಕೆ ಕಾರಣ ಎಂದಿದ್ದಾರೆ. ಮತ್ತೊಬ್ಬರು, ಹೌಸ್ ಕೀಪರ್ ಗಳ ಮೇಲೆ ಈ ರೀತಿ ದರ್ಪ ತೋರಿಸುವುದು ಸರಿಯಲ್ಲ..ಅವರುಗಳು ಕೂಡ ನಮ್ಮಂತೆ ಮನುಷ್ಯರು, ಅವರಿಗೆ ದುಡಿಯುವುದು ಅನಿವಾರ್ಯವಾಗಿರುತ್ತದೆ ಎಂದು ಮರೆಯಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮನುಷ್ಯನು ನಾಗರಿಕ ಪ್ರಜ್ಞೆಯನ್ನು ಮರೆತು ವರ್ತಿಸುತ್ತಿದ್ದಾನೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








