Video: ಮೊಬೈಲ್ ಬಳಸೋರಿಗೆ ಲಂಡನ್‌ಗಿಂತ ಮುಂಬೈ ಸೇಫ್, ಅಸಲಿ ಕಾರಣ ತಿಳಿಸಿದ ಯುವಕ
ಈಗಿನ ಯುವಕರು ಎಲ್ಲೆಂದರಲ್ಲಿ ಮೊಬೈಲ್ ಬಳಸುತ್ತಾರೆ. ಹೀಗಾಗಿ ಮೊಬೈಲ್ ಬಿಟ್ಟು ಇರದ ಕ್ಷಣ ಇಲ್ಲವೇ ಇಲ್ಲ ಎಂದೇಳಬಹುದು. ಆದರೆ ಯುವಕನೊಬ್ಬ ಲಂಡನ್ ಹಾಗೂ ಮುಂಬಯಿ ಈ ಎರಡು ನಗರಗಳಲ್ಲಿ ಮೊಬೈಲ್ ಬಳಕೆ ಎಲ್ಲಿ ಹಾಗೂ ಎಷ್ಟು ಸೇಫ್ ಎಂದು ಹೇಳಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇವರ ಮಾತನ್ನು ಒಪ್ಪಿಕೊಂಡಿದ್ದಾರೆ.

ಈಗಿನ ದಿನಗಳಲ್ಲಿ ಮೊಬೈಲ್ (mobile) ಗೀಳು ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸ್ಪಲ್ಪ ಸಮಯ ಸಿಕ್ಕರೆ ಸಾಕು, ಸ್ಮಾರ್ಟ್ ಫೋನ್ ಕೈಯಲ್ಲಿ ಇದ್ದರೆ ಅದನ್ನು ನೋಡುತ್ತಾ ಸಮಯ ಕಳೆಯುತ್ತಾರೆ. ಹೀಗಿರುವಾಗ ಒನತ್ ಸಿಯಾಹಾನ್ (Onat Siahaan) ಎಂಬ ಹೆಸರಿನ ಯುವಕನು ಮುಂಬಯಿ ಮತ್ತು ಲಂಡನ್ ನಗರಗಳಲ್ಲಿನ ಸಾರ್ವಜನಿಕ ಸ್ಥಳಗಳ ಸುರಕ್ಷತೆಯನ್ನು ಹೋಲಿಸಿದ್ದಾನೆ. ಈ ಎರಡು ನಗರದಲ್ಲಿ ಮೊಬೈಲ್ ಬಳಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಹೇಳಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮೊಬೈಲ್ ಬಳಸುವವರಿಗೆ ಈ ಸಿಟಿ ಬೆಸ್ಟ್
yuanathan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುವಕನು ಮುಂಬಯಿ ನಗರದಲ್ಲಿ ಮೊಬೈಲ್ ಬಳಸುವಾಗ ಎಷ್ಟು ನಿರಳವಾಗಿರುತ್ತೇನೆ, ಹಾಗೂ ಯಾವುದೇ ಭಯವಿಲ್ಲದೇ ಮೊಬೈಲ್ ಬಳಸುವುದನ್ನು ತೋರಿಸಿದ್ದಾನೆ. ಲಂಡನ್ ನಲ್ಲಿ ಮೊಬೈಲ್ ಬಳಸುವ ವಿಧಾನ ಹೇಗಿರುತ್ತದೆ, ಮೊಬೈಲ್ ಬಳಸುವಾಗಲು ಎಷ್ಟು ಜಾಗ್ರತೆಯಾಗಿದ್ದರೂ ಸಾಲಲ್ಲ ಎಂದು ತಿಳಿಸುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಮಾಡಿದ್ದಾನೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಮೊಬೈಲ್ ಫೋನ್‌ಗಳ ಕಳ್ಳತನದ ಘಟನೆಗಳ ಬಗ್ಗೆಯೂ ಉಲ್ಲೇಖಿಸಿದ್ದು, ಲಂಡನ್‌ಗೆ ಹೋಲಿಸಿದ್ರೆ ಮುಂಬಯಿ ಎಷ್ಟು ಸುರಕ್ಷಿತ ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದ ಶೀರ್ಷಿಕೆಯಲ್ಲಿ ಪ್ರಪಂಚದ 30ಕ್ಕೂ ಹೆಚ್ಚು ರಾಜಧಾನಿ ನಗರಗಳಲ್ಲಿ ಸುತ್ತಿದ ನಂತರ, ಜಗತ್ತಿನ ಅತ್ಯಂತ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಒಂದು ಈ ಲಂಡನ್..ಆದರೆ ಇಲ್ಲಿ ನನ್ನ ಮೊಬೈಲ್ ಅನ್ನು ಮುಕ್ತವಾಗಿ ಬಳಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನನಗೆ ಶಾಕಿಂಗ್ ವಿಚಾರವಾಗಿದೆ. ಇಲ್ಲಿ ಈ ಪರಿಸ್ಥಿತಿಯೂ ದಿನದಿಂದ ದಿನಕ್ಕೆ ಇನ್ನಷ್ಟು ಹದಗೆಡುತ್ತಿದೆ. ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳು ಲಂಡನ್‌ನಲ್ಲಿ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಿ. ನೀವು ಗಾರ್ಡನ್ ಮೇಲೆ ಕುಳಿತು ಮೊಬೈಲ್ ನೋಡುತ್ತಾ ಕುಳಿತಿದ್ದರೂ ಕಳ್ಳರು ಮೊಬೈಲ್ ಎಗರಿಸಿಕೊಂಡು ಹೋಗ್ತಾರೆ ಎಂದು ಪೊಲೀಸರು ಹೇಳ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದು, ಈ ಬಗ್ಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Viral: ಬೆಂಗಳೂರಿಗನ ಹೊಸ ಪ್ರಯತ್ನ; ಮನೆಯಲ್ಲಿ ಗರಿಗರಿ ದೋಸೆ ಮಾಡೋದಕ್ಕೂ ಬಂತು ರೋಬೋಟ್
ಈ ವಿಡಿಯೋ 1.4 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು ಲಂಡನ್ ನಲ್ಲಿದ್ದಾಗ ನನ್ನ ಪಾಸ್ ಪೋರ್ಟ್ ಯಾರೋ ಕದ್ದು ಹೋಗಿದ್ದರು ಎಂದು ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮತ್ತೊಬ್ಬರು ಒಂದು ಬಿಲಿಯನ್ ಜನರು ನಿಮ್ಮ ಮಾತನ್ನು ಒಪ್ಪುತ್ತಾರೆ. ನಿಮಗೆ ಮುಂಬಯಿಗೆ ಸ್ವಾಗತ ಎಂದು ಕಾಮೆಂಟ್ ಮಾಡಿದ್ದಾರೆ. ಈ ರೀತಿ ವ್ಯತ್ಯಾಸವು ಸರಿಯಾಗಿಲ್ಲ. ಲಂಡನ್ ಆರ್ಥಿಕವಾಗಿ ಚೆನ್ನಾಗಿಲ್ಲ. ಇಲ್ಲಿ ತುಂಬಾ ಜನ ಬಡವರು ಇದ್ದಾರೆ. ಆದರೆ ಮುಂಬೈ ಆರ್ಥಿಕವಾಗಿ ಅಭಿವೃದ್ಧಿ ಕಂಡಿದ್ದು, ಅದೆಷ್ಟೋ ಜನರ ಬದುಕಿಗೆ ಆಸರೆಯಾಗಿದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








