AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಖಾದ್ಯ ಸವಿದ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ವೈರಲ್ ಆಯ್ತು ಫೋಟೋಸ್

ಮಸಾಲ ದೋಸೆಗೆ ಫೇಮಸ್ ಬೆಂಗಳೂರಿನ ಈ ವಿದ್ಯಾರ್ಥಿ ಭವನ. ಹೌದು ಇಲ್ಲಿ ರುಚಿಕರ ಖಾದ್ಯಗಳಿಗೆ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಇಲ್ಲಿಗೆ ಬರ್ತಾರೆ. ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಕೂಡ ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ಸವಿಯಲು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Viral: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಖಾದ್ಯ ಸವಿದ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ವೈರಲ್ ಆಯ್ತು ಫೋಟೋಸ್
ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್Image Credit source: Instagram
ಸಾಯಿನಂದಾ
|

Updated on: Sep 15, 2025 | 3:39 PM

Share

ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ರುಚಿಕರ ಖಾದ್ಯಗಳಿಗೆ ಈ ವಿದ್ಯಾರ್ಥಿ ಭವನ ರೆಸ್ಟೋರೆಂಟ್ ಸಿಕ್ಕಾಪಟ್ಟೆ ಫೇಮಸ್. ಶನಿವಾರ, ಭಾನುವಾರವಂತೂ ದೋಸೆ ಸೇರಿದಂತೆ ಇನ್ನಿತ್ತರ ಖಾದ್ಯ ಸವಿಯಲು ಆಹಾರ ಪ್ರಿಯರ ದಂಡೇ ಜಮಾಯಿಸುತ್ತದೆ. ಇನ್ನು ಮಸಾಲೆ ದೋಸೆ, ಇಡ್ಲಿ, ಖಾರಾ ಬಾತ್‌, ರವೆ ವಡೆ ಸೇರಿದಂತೆ ಕಾಫಿ ಕುಡಿಯಲು ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳು, ಸೆಲೆಬ್ರಿಟಿಗಳ ವರೆಗೆ ಇಲ್ಲಿಗೆ ಬರ್ತಾರೆ. ಇದೀಗ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ (Former ISRO Chairman Dr. S. Somnath) ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ (Vidyarthi Bhavan in Bengaluru) ಭೇಟಿ ನೀಡಿ ಇಲ್ಲಿ ಸಿಗುವ ರುಚಿಕರ ಬೆಣ್ಣೆ ಮಸಾಲೆ ದೋಸೆಯನ್ನು ಸವಿದಿದ್ದಾರೆ. ಎಸ್. ಸೋಮನಾಥ್ ಭೇಟಿಯ ಕ್ಷಣಗಳನ್ನು ವಿದ್ಯಾರ್ಥಿ ಭವನದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಹೋಟೆಲ್ ಮಾಲೀಕ ಸಂತೋಷ ವ್ಯಕ್ತಪಡಿಸಿದ್ದಾರೆ.

Vidyarthibhavan ಹೆಸರಿನ ಇನ್ಸ್ಟಾಗ್ರಾಮ್ ನ ಅಧಿಕೃತ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಇಸ್ರೋದ ಮಾಜಿ ಅಧ್ಯಕ್ಷರಾದ @SomanathSpeak ಅವರನ್ನು ಇಂದು ಸಂಜೆ ವಿದ್ಯಾರ್ಥಿ ಭವನದಲ್ಲಿ ಗೌರವ ಸಲ್ಲಿಸಲಾಗಿದೆ. ಚಂದ್ರಯಾನ-3 ರ ಐತಿಹಾಸಿಕ ಯಶಸ್ಸಿನ ಹಿಂದಿನ ನಾಯಕನನ್ನು ಭೇಟಿಯಾಗಲು ಹೆಮ್ಮೆಯ ಕ್ಷಣ. ಅವರು ನಮ್ಮ ಪರಂಪರೆಯ ವಾತಾವರಣ ಮತ್ತು ಐಕಾನಿಕ್ ಸುವಾಸನೆಗಳನ್ನು ಆನಂದಿಸಿದ್ದಾರೆ ಎಂದು ಸಂತೋಷವಾಯಿತು” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ
Image
ಇದು ಬೆಂಗಳೂರಿನ ರಸ್ತೆಗುಂಡಿಗಳ ದುಸ್ಥಿತಿ ಎಂದ ವಿದ್ಯಾರ್ಥಿನಿಯರು
Image
ಬೆಂಗಳೂರಿಗೆ ಬಂದ ಮೂರೇ ದಿನಕ್ಕೆ ಕನ್ನಡ ಕಲಿಯಬೇಕು ಎಂದ ವಿದ್ಯಾರ್ಥಿ
Image
ಒಂದು ತಿಂಗಳ ವಾಟರ್​​ ಬಿಲ್​ ಇಷ್ಟೊಂದಾ? ರೊಚ್ಚಿಗೆದ್ದ ಬಾಡಿಗೆದಾರ
Image
ವಿದ್ಯಾರ್ಥಿ ಭವನದ ಊಟ ಸವಿದು ಪ್ರಾಮಾಣಿಕ ರೇಟಿಂಗ್ಸ್‌ ನೀಡಿದ ವ್ಲಾಗರ್

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇಲ್ಲಿ ಶೇರ್ ಮಾಡಲಾದ ಫೋಟೋಗಳಲ್ಲಿ ಡಾ. ಸೋಮನಾಥ್ ತಮ್ಮ ಪತ್ನಿ ಮತ್ತು ರೆಸ್ಟೋರೆಂಟ್‌ನ ಮಾಲೀಕ ಎಸ್. ರಾಮಕೃಷ್ಣ ಅಡಿಗ ಅವರೊಂದಿಗೆ ಗರಿಗರಿಯಾದ ದೋಸೆಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಒಂದು ಫೋಟೋದಲ್ಲಿ ಡಾ. ಎಸ್. ಸೋಮನಾಥ್ ಅವರು ಏಣಿಯಂತೆ ದೋಸೆ ಪ್ಲೇಟ್ ನ್ನು ಕೈಯನ್ನು ಹಿಡಿದಿರುವ ವೆಟೈರ್ ಪಕ್ಕದಲ್ಲಿ ಪೋಸ್ ನೀಡಿದ್ದಾರೆ. ಪತ್ನಿಯೊಂದಿಗೆ ಉಪಾಹಾರ ಗೃಹದಲ್ಲಿ ಅವರ ಉಪಸ್ಥಿತಿಯು ರೆಸ್ಟೋರೆಂಟ್ ತಂಡವನ್ನು ಸಂತೋಷಪಡಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ:Video: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಫುಡ್ ಸವಿದು ಪ್ರಾಮಾಣಿಕ ರೇಟಿಂಗ್ಸ್ ನೀಡಿದ ಅಮೆರಿಕನ್ ವ್ಲಾಗರ್

ಈ ಪೋಸ್ಟ್ ಗೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಬ್ಬ ಬಳಕೆದಾರರೊಬ್ಬರು, ರಾಕೆಟ್ ಮ್ಯಾನ್ ವಿಥ್ ದೋಸಾ ಮ್ಯಾನ್ ಎಂದಿದ್ದಾರೆ. ಇನ್ನೊಬ್ಬರು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಸುಮ್ಮನೆ ಹಣ ಖರ್ಚು ಎಂದು ಹೇಳಿದರೆ, ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ