AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಂಗಳೂರಿಗೆ ಬಂದ ಮೂರೇ ದಿನಕ್ಕೆ ಕನ್ನಡ ಕಲಿಯಬೇಕು ಎಂದ ಪಶ್ಚಿಮ ಬಂಗಾಳದ ವಿದ್ಯಾರ್ಥಿ

ಹೊರ ರಾಜ್ಯದಿಂದ ಬಂದವರು ಕನ್ನಡ ಕಲಿಯಲು ಮನಸ್ಸು ಮಾಡುತ್ತಾರೆ. ಹೌದು, ಇದೀಗ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ಮಳಿಗೆಗಳಲ್ಲಿನ ಕನ್ನಡ ನಾಮಫಲಕಗಳನ್ನು ಶ್ಲಾಘಿಸಿ, ಇಲ್ಲಿನ ಭಾಷೆಯನ್ನು ಕಲಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಈ ವಿದ್ಯಾರ್ಥಿಯ ಕನ್ನಡ ಭಾಷೆ ಕಲಿಯುವ ಹಂಬಲಕ್ಕೆ ಬೆಂಬಲ ಸೂಚಿಸಿದ್ದಾರೆ.

Video: ಬೆಂಗಳೂರಿಗೆ ಬಂದ ಮೂರೇ ದಿನಕ್ಕೆ ಕನ್ನಡ ಕಲಿಯಬೇಕು ಎಂದ ಪಶ್ಚಿಮ ಬಂಗಾಳದ ವಿದ್ಯಾರ್ಥಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Sep 12, 2025 | 7:23 PM

Share

ಬೆಂಗಳೂರು, ಸೆಪ್ಟೆಂಬರ್ 12: ಕೆಲವರಿಗೆ ಕನ್ನಡವೆಂದರೆ ಅದೇನೋ ಹುಚ್ಚು ಅಭಿಮಾನ. ಹೀಗಾಗಿ ಹೊರರಾಜ್ಯದಿಂದ ಬೆಂಗಳೂರಿಗೆ (Bengaluru) ಉದ್ಯೋಗ ಅರಸಿ ಬಂದವರು ಕೂಡ ಇಲ್ಲಿನ ಜನರೊಂದಿಗಗೆ ಬೆರೆತು ಕನ್ನಡ ಕಲಿಯುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಕೆಲವರು ಅತ್ಯದ್ಭುತವಾಗಿ ಕನ್ನಡ ಮಾತನಾಡುವುದನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಕನ್ನಡದ ಮೇಲಿನ ಅಭಿಮಾನ, ಭಾಷೆಯ ಮೇಲಿನ ಪ್ರೀತಿ ನೋಡಿದಾಗ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಆದರೆ ಇದೀಗ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬರು (West Bengal student) ಬೆಂಗಳೂರು ನಗರದಲ್ಲಿ ಮಳಿಗೆ ಸೇರಿದಂತೆ ಅಂಗಡಿಗಳಲ್ಲಿ ಕನ್ನಡ ನಾಮಫಲಕಕ್ಕೆ ಒತ್ತು ನೀಡುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೂ ಕನ್ನಡ ಭಾಷೆ ಕಲಿಯುವ ಹಂಬಲವಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆ ಕಲಿಯಬೇಕೆನಿಸಿದ್ದು ಯಾಕೆ ಎಂದು ಹೇಳಿಕೊಂಡು ರೆಡ್ಡಿಟ್ ನಲ್ಲಿ ಈ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕನ್ನಡ ಕಲಿಯುವ ಹಂಬಲವಿದೆ ಎಂದ ವಿದ್ಯಾರ್ಥಿ

r/Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬರು ತನಗೆ ಕನ್ನಡ ಕಲಿಯಬೇಕು ಎಂದು ಹೇಳಿದ್ದಾರೆ. ಈ ಪೋಸ್ಟ್ ನಲ್ಲಿ ನಾನು ಪಶ್ಚಿಮ ಬಂಗಾಳದವನು. ಇತ್ತೀಚೆಗೆ ರಾಜರಾಜೇಶ್ವರಿ ನಗರದ ಬಳಿಯ ಪಿಜಿಗೆ ಕಾಲೇಜಿಗೆ ಹೋಗಲು ಸಲುವಾಗಿ ಸ್ಥಳಾಂತರಗೊಂಡಿದ್ದೇನೆ, ಇದೀಗ ಇಲ್ಲಿಗೆ ಬಂದು ಕೇವಲ 3 ದಿನಗಳು ಮಾತ್ರ ಕಳೆದಿವೆ. ಆದರೆ ನಾನು ಆ ‘ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಟ್ಯಾಗ್ ಅನ್ನು ನೋಡಿ ಈಗಾಗಲೇ ಆಕರ್ಷಿತನಾಗಿದ್ದೇನೆ. ಕನ್ನಡ ಜನರು ಅದ್ಭುತ ವ್ಯಕ್ತಿಗಳು ಎಂದಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

Reddit Post

ಇದನ್ನೂ ಓದಿ
Image
ಒಂದು ತಿಂಗಳ ವಾಟರ್​​ ಬಿಲ್​ ಇಷ್ಟೊಂದಾ? ರೊಚ್ಚಿಗೆದ್ದ ಬಾಡಿಗೆದಾರ
Image
ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಸಂಚರಿಸಿ ವಾಸ್ತವ ಸ್ಥಿತಿ ಬಿಚ್ಚಿಟ್ಟ ವಿದೇಶಿಗ
Image
ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್
Image
ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ

ಪ್ರತಿಯೊಂದು ಪ್ರಮುಖ ಅಂಗಡಿಗಳಾದ ಸ್ಟಾರ್‌ಬಕ್ಸ್, ಪೀಟರ್ ಇಂಗ್ಲೆಂಡ್, WROGN, KFC, ಹೀಗೆ ಯಾವುದೇ ಇರಲಿ. ನೀವು ಬ್ರ್ಯಾಂಡ್‌ನ ಹೆಸರನ್ನು ಇಂಗ್ಲಿಷ್‌ ಗಿಂತ ಮೊದಲು ಕನ್ನಡದಲ್ಲಿ ಪ್ರದರ್ಶಿಸುತ್ತಿದ್ದ ರೀತಿ ನೋಡಿ ಪ್ರಭಾವಿತನಾಗಿದ್ದೆ. ಈ ಕಾರಣದಿಂದಲೇ ನಾನು ಈಗ ಕನ್ನಡ ಕಲಿಯುವ ಹಂಬಲ ಹೊಂದಿದ್ದೇನೆ. ಮೊದಲನೇ ಸಲ ಇದು ತುಂಬಾ ಪ್ರಭಾವಶಾಲಿ ಅಂತ ನನಗೆ ಅನಿಸಿತು. ಬೆಂಗಳೂರಿನ ಇತರ ಗುಣಗಳ ಬಗ್ಗೆ ನಾನು ಯೋಚಿಸುವ ಅಗತ್ಯವಿಲ್ಲ. ಒಳ್ಳೆಯ ಕೆಲಸ, ಬೆಂಗಳೂರಿನ ಜನರು ಒಳ್ಳೆಯವರು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಒಂದು ತಿಂಗಳ ವಾಟರ್​​ ಬಿಲ್​ ಇಷ್ಟೊಂದಾ? ರೊಚ್ಚಿಗೆದ್ದ ಬಾಡಿಗೆದಾರ, ಪೋಸ್ಟ್‌ ವೈರಲ್​​

ಈ ಪೋಸ್ಟ್ ಈಗಾಗಲೇ ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ಯಾವುದೇ ಭಾಷೆಯನ್ನು ಕಲಿಯಲು ಕಾಲೇಜು ಅತ್ಯುತ್ತಮ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಈ ಪ್ರೀತಿಗೆ ತುಂಬಾ ಧನ್ಯವಾದಗಳು. ದಿನಗಳು ಕಳೆದಂತೆ ಈ ಭಾವನೆ ಬದಲಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಊರಿಗೆ ನಿಮಗೆ ಸ್ವಾಗತ. ಕನ್ನಡ ಕಲಿಯಲು ಸುಲಭವಾದ ಭಾಷೆ. ನೀವು ಅದನ್ನು ಕಲಿಯಲು ಬಯಸಿದ್ದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಮೇಲಿನ ಈ ಗೌರವವನ್ನು ಉಳಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್