Video: ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಸಂಚರಿಸಿ ಈ ಮಾರ್ಗದ ವಾಸ್ತವ ಸ್ಥಿತಿ ಬಿಚ್ಚಿಟ್ಟ ಕೆನಡಾದ ವ್ಯಕ್ತಿ
ಬೆಂಗಳೂರಿನ ಸಮಸ್ಯೆಗಳನ್ನು ವಿದೇಶಿಗರು ಎತ್ತಿ ತೋರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ ಎಂಬುವವರು ಬೆಂಗಳೂರಿನಲ್ಲಿ ಪಾದಾಚಾರಿ ಮಾರ್ಗಗಳಲ್ಲಿ ನಡೆದುಕೊಂಡು ಹೋಗುವಾಗ ಅಲ್ಲಲ್ಲಿ ಕೊಳಕು ತುಂಬಿದ್ದು, ಆ ಪ್ರಯಾಣ ಎಷ್ಟು ಭಯಾನಕವಾಗಿತ್ತು ಎಂದು ವಿಡಿಯೋ ಮಾಡಿ ವಿವರಿಸಿದ್ದಾರೆ. ಸದ್ಯ ಈ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು, ಸೆಪ್ಟೆಂಬರ್ 11: ಮಾಯಾನಗರಿ ಬೆಂಗಳೂರು (Bengaluru) , ನಮ್ಮ ನಿಮ್ಮೆಲ್ಲರ ಪಾಲಿಗೆ ಅದೊಂದು ಕನಸಿನ ಲೋಕ, ಹೀಗಾಗಿ ನೂರಾರು ಕನಸುಗಳನ್ನು ಹೊತ್ತು ಇಲ್ಲಿಗೆ ಲಕ್ಷಾಂತರ ಜನರು ಉದ್ಯೋಗ ಅರಸಿಕೊಂಡು ಬರುತ್ತಾರೆ. ಹೀಗೆ ಬಂದವರು ಹಾಗೂ ಇಲ್ಲಿನ ನಿವಾಸಿಗಳು ಕೂಡ ಇಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡುವುದು ಕಡಿಮೆಯೇ. ಇನ್ನು ಸಂಚರಿಸಲು ಇಲ್ಲಿ ಫುಟ್‌ಪಾತ್ ಇರುವುದೇ ಇಲ್ಲ. ಇದ್ದರೂ ಕೂಡ ನಡೆದುಕೊಂಡು ಹೋಗಲು ಆಗಲ್ಲ. ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ (Caleb Friesen) ಬೆಂಗಳೂರಿನಲ್ಲಿ ಫುಟ್‌ಪಾತ್‌ನಲ್ಲಿ ಸಂಚಾರಿಸುವಾಗ ಇದೇ ಸಮಸ್ಯೆಯಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹತ್ತಿರದ ಸ್ಟಾರ್‌ಬಕ್ಸ್ ಔಟ್‌ಲೆಟ್‌ಗೆ ಸರಿಸುಮಾರು 2.4 ಕಿ.ಮೀ ದೂರದವರೆಗೆ ಈ ಪಾದಚಾರಿ ಮಾರ್ಗದ ಮೂಲಕ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಅವರು ಎದುರಿಸಿದ ಅಪಾಯಗಳೇನು ಹಾಗೂ ಅವ್ಯವಸ್ಥೆಯ ಬಗ್ಗೆ ಪಟ್ಟಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
@caleb-friesen2 ಹೆಸರಿನ ಎಕ್ಸ್ ಖಾತೆಯಲ್ಲಿ ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ ಅವರು ಹಂಚಿಕೊಂಡ ವಿಡಿಯೋದೊಂದಿಗೆ ಬೆಂಗಳೂರಿನ 2.4 ಕಿ.ಮೀ ಪಾದಚಾರಿ ಮಾರ್ಗಗಳು ನನಗೆ ಸುರಂಗ ಮಾರ್ಗ, ತಂತಿಗಳು, ಪೊದೆಗಳ ರಾಶಿ, ಚರಂಡಿಗೆ ಮೆಟ್ಟಿಲು, ಅಲ್ಲಲ್ಲಿ ಬಿದ್ದ ಕಸದ ರಾಶಿ ನಾನು ಇಲ್ಲಿ ಟೈಪ್ ಮಾಡಲು ಸಾಧ್ಯವಾಗದ ವಿಷಯಗಳಿವೆ, ನಿಮಗೆ ಹೊಟ್ಟೆ ದುರ್ಬಲವಾಗಿದ್ದರೆ ಇದನ್ನು ನೋಡಬೇಡಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
walking 2.4 km of Bengaluru footpaths showed me:
– tunnel juice – barbed wire – desire paths – bushwhacking – pavement pudding – a stairwell into a drain – something I can’t type here
don’t watch this if you have a weak stomach pic.twitter.com/vxijXd021g
— Caleb (@caleb_friesen2) September 11, 2025
ಈ ವಿಡಿಯೋದಲ್ಲಿ ವಿದೇಶಿಗ ಬೆಂಗಳೂರಿನ ಈ ಪಾದಚಾರಿ ಮಾರ್ಗ ಹೇಗಿದೆ ಎಂದು ವಿವರಿಸುವುದನ್ನು ನೋಡಬಹುದು. ತಂತಿಗಳು ಹಾಗೂ ಕಸವನ್ನು ದಾಟಿ ಈ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗಿದ್ದಾರೆ. ಇಲ್ಲಿ ನೂರಾರು ಸಮಸ್ಯೆಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದು, ಫುಟ್‌ಪಾತ್‌ನ್ನು ನೀವು ಬಳಸಬಹುದಾದರೆ, ಅದು ಒಳ್ಳೆಯ ಸಣ್ಣ ನಡಿಗೆ’ ಎಂದು ಹೇಳಿದ್ದಾರೆ.
ಇಲ್ಲಿ ಹೆಚ್ಚಿನವರೂ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇದು ಸುರಕ್ಷಿತವಲ್ಲ. ಇನ್ನು ಈ ಫುಟ್‌ಪಾತ್‌ನಲ್ಲೇ ಕಟ್ಟಡಗಳು ನಿರ್ಮಾಣವಾಗಿದೆ. ಜನರು ನಡೆದುಕೊಂಡು ಹೋಗುವ ಈ ಮಾರ್ಗದಲ್ಲಿ ಹುಲ್ಲುಗಳು, ಕಸಕಡ್ಡಿಗಳಿಂದ ತುಂಬಿ ಹೋಗಿವೆ. ಜನಸಾಮಾನ್ಯರು ನಡೆದಾಡುವ ಈ ಪಾದಚಾರಿ ಮಾರ್ಗದಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ್ದು ದುರ್ವಾಸನೆ ಬೀರುತ್ತಿದೆ. ಈ ವಿಡಿಯೋದಲ್ಲಿ ಸ್ವಚ್ಛತೆಯೂ ಕಣ್ಮರೆಯಾಗಿದೆ ಎನ್ನುವುದು ಸ್ಪಷ್ಟವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಇ ಫುಟ್ ಪಾತ್ ನಲ್ಲಿ ಸ್ಟಾಲ್, ಇನ್ನಿತ್ತರ ಸಾಮಗ್ರಿಗಳನ್ನು ಇಡಲಾಗಿದ್ದು, ಈ ಮಾರ್ಗವನ್ನು ಯಾರು ಬಳಸುತ್ತಿಲ್ಲ. ದುರ್ನಾತ ಬೀರುತ್ತಿದೆ ಎಂದು ಹೇಳಿದ್ದು ಇಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ನಾನು ಭಾರತವನ್ನು ಟೀಕಿಸಲು ಮಾತ್ರ ಬಯಸುವುದಿಲ್ಲ, ಈ ದೇಶದ ಬಗ್ಗೆ ನನಗೆ ತುಂಬಾ ಕಾಳಜಿ ಇದೆ ಎಂದು ಹೇಳಿದ್ದಾರೆ.
ಈ ವಿಡಿಯೋ ಇದುವರೆಗೂ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಇದು ನಿಜಕ್ಕೂ ಬೇಸರದ ಸಂಗತಿ. ನಾನು ನ್ಯೂಯಾರ್ಕ್ ನಲ್ಲಿದ್ದಾಗ ಈ ರೀತಿ ಪರಿಶೋಧನೆ ಮಾಡಿದ್ದೇನೆ, ಯಾರು ಹೋಗದ ಸ್ಥಳಗಳಿಗೆ ಹೋಗಿದ್ದೆ. ಆದರೆ ಅದು ಇದಕ್ಕಿಂತ ಉತ್ತಮವಾಗಿತ್ತು. ಬಹುತೇಕ ಪ್ರದೇಶಗಳು ಕೊಳಕಾಗಿದ್ದವು. ಅದನ್ನು ಇನ್ನು ಚೆನ್ನಾಗಿ ನಿರ್ವಹಿಸಬಹುದಾಗಿತ್ತು. ನಾವು ಹಳೆಯ ಹಾಗೂ ಕೈ ಬಿಟ್ಟ ರೈಲು ಮಾರ್ಗಗಳ ಮೇಲೆ ನಡೆಯುತ್ತಿದ್ದೆವು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮತ್ತೊಬ್ಬರು, ಕೊಳಕುಮಯ ಹಾಗೂ ಶಿಥಿಲಗೊಂಡ ಪಾದಚಾರಿ ಮಾರ್ಗಗಳಿಗೆ ಪರಿಹಾರವೇನು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Video: ಬೆಂಗಳೂರಿನ ದೊಮ್ಮಲೂರು-ಇಂದಿರಾನಗರ ಪಾದಚಾರಿ ಮಾರ್ಗ ಹೇಗಿತ್ತು? ಹೇಗಾಯಿತು ನೋಡಿ, ಇದು ವಿದೇಶಿಗನ ಕೈಚಳಕ
ನಮ್ಮಲ್ಲಿ ಯುರೋಪ್‌ನಂತೆ ನಡಿಗೆ ಅಥವಾ ಸೈಕ್ಲಿಂಗ್ ಸಂಸ್ಕೃತಿ ಇಲ್ಲ, ಆದ್ದರಿಂದ ಉತ್ತಮ ಪಾದಚಾರಿ ಮಾರ್ಗಗಳ ಬೇಡಿಕೆ ಕೊನೆಯ ಆದ್ಯತೆಯಾಗಿ ಉಳಿದಿದೆ, ವಾಹನ ಹೊಂದುವುದು ಮೊದಲನೆಯದು. ಎಲ್ಲಾ ಸ್ವಚ್ಛ ಪಾದಚಾರಿ ಮಾರ್ಗಗಳು ಸಾಮಾನ್ಯವಾಗಿ ಟ್ಯಾಕ್ಸಿ ಅಥವಾ ಬಸ್‌ಗಾಗಿ ಕಾಯಲು ಒಂದು ವೇದಿಕೆಯಾಗಿದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Thu, 11 September 25








