AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಸಸ್ಯಗಳ ನಡುವೆ ಅಡಗಿದೆ ಮುದ್ದಾದ ಬೆಕ್ಕು, ಎಲ್ಲಿದೆ ಎಂದು ನೀವು ಹೇಳಬಲ್ಲಿರಾ?

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಒಗಟಿನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈ ಕೆಲವು ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಸಸ್ಯಗಳ ನಡುವೆ ಮರೆಮಾಡಿರುವ ಬೆಕ್ಕನ್ನು ಹುಡುಕುವ ಸವಾಲನ್ನು ನೀಡಲಾಗಿದೆ. ಈ ಒಗಟಿನ ಚಿತ್ರ ಬಿಡಿಸಲು ರೆಡಿ ಇದ್ರೆ ಈಗಲೇ ಈ ಚಿತ್ರದತ್ತ ಕಣ್ಣು ಹಾಯಿಸಿ.

Optical Illusion: ಸಸ್ಯಗಳ ನಡುವೆ ಅಡಗಿದೆ ಮುದ್ದಾದ ಬೆಕ್ಕು, ಎಲ್ಲಿದೆ ಎಂದು ನೀವು ಹೇಳಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌Image Credit source: Reddit
ಸಾಯಿನಂದಾ
|

Updated on: Sep 12, 2025 | 10:23 AM

Share

ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಫೋಟೋಗಳು ಹರಿದಾಡುತ್ತಿರುತ್ತವೆ. ಇಂತಹ ಫೋಟೋಗಳಲ್ಲಿ ಅಡಗಿರುವ ಒಗಟುಗಳನ್ನು ಬಿಡಿಸುವುದು ಸವಾಲಿನ ಕೆಲಸ, ಹೀಗಾಗಿ ನೀವು ಬುದ್ದಿಗೆ ಕೆಲಸ ನೀಡಬೇಕಾಗುತ್ತದೆ. ಕೆಲವೊಮ್ಮೆ ಈ ಚಿತ್ರಗಳು ನೋಡಲು ಸುಲಭವಾಗಿ ಕಂಡರೂ ಒಗಟು ಬಿಡಿಸುವುದು ಅಷ್ಟು ಸುಲಭವಲ್ಲ, ಕೆಲವರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ, ಇನ್ನು ಕೆಲವರು ಒಗಟಿನ ಚಿತ್ರವನ್ನು ಬಿಡಿಸುವಲ್ಲಿ ಸೋಲುತ್ತಾರೆ. ಇದೀಗ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಸಸ್ಯಗಳ ನಡುವೆ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಬೇಕು, ಇದು ನಿಮ್ಮಿಂದ ಸಾಧ್ಯವೇ?. ಒಮ್ಮೆ ಪ್ರಯತ್ನಿಸಿ ನೋಡಿ.

ರೆಡ್ಡಿಟ್ ಪೋಸ್ಟ್‌ನಲ್ಲಿ ಏನಿದೆ?

Keanu- Sneeze ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಈ ಚಿತ್ರವು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಚಿತ್ರವು ಒಂದು ಸಣ್ಣ ಉದ್ಯಾನವನ ವಿದ್ದು, ಅಲ್ಲಲ್ಲಿ ಸಸ್ಯಗಳಿವೆ. ಕೆಲವು ಎಲೆಗಳು ಒಣಗಿದರೆ ಮತ್ತೆ ಕೆಲವು ಹಸಿರಾಗಿವೆ. ಕೆಳಭಾಗದಲ್ಲಿ ಹುಲ್ಲಿನಂತಹ ಸಸ್ಯಗಳು ದಟ್ಟವಾಗಿ ಬೆಳೆದಿದೆ. ಮೊದಲ ನೋಟದಲ್ಲಿ, ಹಚ್ಚ ಹಸಿರಿನ ವಾತಾವರಣವು ಮನಸ್ಸಿಗೆ ಖುಷಿ ನೀಡುತ್ತವೆ. ಆದರೆ ಈ ದೃಶ್ಯದೊಳಗೆ ಬೆಕ್ಕೊಂದು ಅಡಗಿದೆ. ತನ್ನ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಜಾಣತನದಿಂದ ಈ ಬೆಕ್ಕನ್ನು ಮರೆ ಮಾಡಲಾಗಿದೆ. ಈ ಒಗಟು ಎಷ್ಟು ಕಠಿಣವಾಗಿದೆ ಎಂದರೆ ನಿಮ್ಮ ತೀಕ್ಷ್ಣವಾದ ಕಣ್ಣುಗಳಿಗೂ ಸವಾಲು ಹಾಕುತ್ತದೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

Reddit Post

ಇದನ್ನೂ ಓದಿ
Image
ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹೇಳಬಲ್ಲಿರಾ?
Image
ತೋಳಗಳ ನಡುವೆ ಅಡಗಿರುವ ಜೇಡವನ್ನು ಹುಡುಕಬಲ್ಲಿರಾ?
Image
ನೂರಾರು ಮುಖಗಳ ನಡುವೆ ಅಡಗಿರುವ ಬೆಕ್ಕನ್ನು ಗುರುತಿಸಬಲ್ಲಿರಾ?
Image
ಈ ಚಿತ್ರದಲ್ಲಿರುವ ಹುಲಿಗಳೆಷ್ಟು ಎಂದು ಹೇಳಬಲ್ಲಿರಾ?

ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?

ಎಷ್ಟೆ ತಲೆಕೆಡಿಸಿಕೊಂಡರೂ, ಕಣ್ಣು ಅಗಲಿಸಿ ನೋಡಿದರೂ ಹಚ್ಚಹಸಿರಿನ ಸಸ್ಯಗಳ ನಡುವೆ ಅಡಗಿರುವ ಬೆಕ್ಕನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಇದು ನಿಮಗೆ ಮಾತ್ರವಲ್ಲ, ಅತ್ಯುತ್ತಮ ವೀಕ್ಷಣಾ ಕೌಶಲ್ಯ ಹೊಂದಿದ್ದವರಿಗೂ ಇಂತಹ ಒಗಟಿನ ಚಿತ್ರಗಳನ್ನು ಬಿಡಿಸುವುದು ಕಷ್ಟವೇ. ಹೆಚ್ಚು ತಲೆಕೆಡಿಸಿಕೊಳ್ಳದೇ ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಗಮನಿಸಿ ಇದರಲ್ಲಿ ಅಡಗಿರುವ ಬೆಕ್ಕು ನಿಮ್ಮ ಕಾಣಿಸಿತೇ ಎಂದು ಹೇಳಿ.

ಇದನ್ನೂ ಓದಿ:Optical Illusion: ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹೇಳಬಲ್ಲಿರಾ?

ಬಳಕೆದಾರರ ಕಾಮೆಂಟ್‌ಗಳು ಹೀಗಿವೆ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಆಧಾರಿತ ಪೋಸ್ಟ್ ಗೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದು, ಬೆಕ್ಕನ್ನು ಕಂಡುಕೊಂಡೆ ಎಂದಿದ್ದಾರೆ. ಇನ್ನೊಬ್ಬರು, ಈ ಚಿತ್ರದ ಮಧ್ಯದಲ್ಲಿ ಅಲ್ಲ, ಸ್ವಲ್ಪ ಬಲಕ್ಕೆ ಕೆಳಭಾಗದಲ್ಲಿ ಕಪ್ಪು ಹಾಗೂ ಕಿತ್ತಳೆ ಬಣ್ಣದ ಮೈ ಚರ್ಮದ ಹೊಂದಿರುವ, ನೀಲಿ ಕಣ್ಣುಗಳು ನಿಮ್ಮನ್ನೇ ದಿಟ್ಟಿಸಿ ನೋಡುತ್ತಿವೆ ಎಂದು ಕಾಮೆಂಟ್ ಮಾಡಿ ಉತ್ತರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಆ ಬೆಕ್ಕು ಕ್ಯಾಮೆರಾವನ್ನೇ ದಿಟ್ಟಿಸಿ ನೋಡುವಂತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ