AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಗೋ ಬ್ಯಾಕ್ ಹಿಂದಿ ವಾಲಾ ಆಟೋಸ್’; ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್

ಬೆಂಗಳೂರಿನ ಆಟೋ ರಿಕ್ಷಾದ ಹಿಂಬದಿಯಲ್ಲಿ ಬರೆಯಲಾದ ಕೆಲವು ಸಾಲುಗಳು ಹಿಂದಿ ಆಟೋ ಚಾಲಕರನ್ನು ಕೆರಳಿಸುವಂತಿದೆ. ಹಿಂದಿವಾಲಾ ಆಟೋ ಚಾಲಕರನ್ನೇ ಗುರಿಯಾಗಿಸಿಕೊಂಡಿದ್ದು ಈ ರೀತಿಯ ಸಾಲುಗಳನ್ನು ಬರೆಯಲಾಗಿದೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವಿವಾದಕ್ಕೆ ನಾಂದಿಯಾಡಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

Viral: 'ಗೋ ಬ್ಯಾಕ್ ಹಿಂದಿ ವಾಲಾ ಆಟೋಸ್'; ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್
ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹImage Credit source: Instagram/ Pinterest
ಸಾಯಿನಂದಾ
|

Updated on: Sep 11, 2025 | 4:34 PM

Share

ಬೆಂಗಳೂರು, ಸೆಪ್ಟೆಂಬರ್‌ 11: ಎಲ್ಲರೂ ಸಮಾನರು, ಎಲ್ಲರಿಗೂ ಪ್ರಾಮಾಣಿಕವಾಗಿ ದುಡಿದು ತಿನ್ನುವ ಸ್ವಾತಂತ್ರ್ಯವಿದೆ. ಆದರೆ ಯಾವುದೇ ಲೈಸೆನ್ಸ್ ಇಲ್ಲದೇ ಆಟೋ ಓಡಿಸುವ ಹಿಂದಿ ಆಟೋ ಚಾಲಕರನ್ನು (Hindi auto driver) ಇಲ್ಲಿಂದ ಹಿಂತಿರುಗಿ ಹೋಗುವಂತೆ ಬೆಂಗಳೂರಿನ ಆಟೋದ (Bengaluru auto) ಹಿಂದೆ ಸಂದೇಶವನ್ನು ಬರೆಯಲಾಗಿದೆ. ಇಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ, ಅಕ್ರಮವಾಗಿ ಆಟೋ ಓಡಿಸುವ ಹಿಂದಿ ಆಟೋ ಚಾಲಕರಿಗಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದೆ ಈ ಸಾಲುಗಳು. ಸದ್ಯಕ್ಕೆ ಈ ಪೋಸ್ಟ್ ವೈರಲ್ ಆಗಿದ್ದು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದು ಇಂತಹ ಅನಗತ್ಯ ದ್ವೇಷದಿಂದ ದೂರವಿರಿ ಎಂದಿದ್ದಾರೆ.

nammabengaluru ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ಆಟೋದ ಹಿಂಬದಿ ಅಂಟಿಸಲಾದ ಪೋಸ್ಟರ್ ವೊಂದನ್ನು ಕಾಣಬಹುದು. ಈ ಪೋಸ್ಟ್ ಗೆ ಇದನ್ನು ನೋಡಿ ದುಃಖವಾಯಿತು. ಎಲ್ಲಾ ನಿಯಮಗಳನ್ನು ಪಾಲಿಸುತ್ತಾ ಕಾನೂನುಬದ್ಧವಾಗಿ ಕೆಲಸ ಮಾಡುವ ಜನರ ಬಗ್ಗೆ ನಾವು ಅಷ್ಟೊಂದು ದ್ವೇಷ ಸಾಧಿಸಬಾರದು” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ
Image
ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ
Image
ಗೇಮಿಂಗ್ ಚೇರ್ ಅಳವಡಿಸಿಕೊಂಡ ಬೆಂಗಳೂರಿನ ಆಟೋ ಡ್ರೈವರ್
Image
ಎದೆಯ ಮೇಲೆ ಮಲಗಿರುವ ಪುಟ್ಟ ಪ್ರಪಂಚ, ಜೀವನ ನಿರ್ವಹಣೆಗಾಗಿ ಈ ಆಟೋ
Image
ಒಂದು ಕಿಮೀಗೆ 425 ರೂ ಆಟೋ ಚಾರ್ಜ್ ಎಂದ ಬೆಂಗಳೂರಿನ ವ್ಯಕ್ತಿ

ವೈರಲ್‌ ಪೋಸ್ಟ್‌ ಇಲ್ಲಿದೆ

ಆಟೋದ ಹಿಂಬದಿ ಹಿಂತಿರುಗಿ, ಅಕ್ರಮವಾಗಿ ಆಟೋ ಓಡಿಸುತ್ತಿರುವ ಹಿಂದಿಚಾಲಕರೇ ಇಲ್ಲಿಂದ ಹಿಂತಿರುಗಿ. ಪರವಾನಗಿ ಇಲ್ಲ/ ಪೊಲೀಸ್ ಪರಿಶೀಲನೆ ಇಲ್ಲ/ ಪ್ರದರ್ಶನವಿಲ್ಲ/ ಬ್ಯಾಡ್ಜ್ ಇಲ್ಲ/ ಪರವಾನಗಿ ಇಲ್ಲ. ಆದರೂ ಕೆ.ಆರ್. ಪುರಂ ಮತ್ತು ಮಹದೇವಪುರ ವಲಯದಲ್ಲಿ 10,000 ಕ್ಕೂ ಹೆಚ್ಚು ಆಟೋಗಳು ಇವೆ ಎಂದು ಬರೆದಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ:Video: ಇದು ಗ್ರ್ಯಾಂಡ್ ಥೆಫ್ಟ್ ಆಟೋರಿಕ್ಷಾ; ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ಇಂತಹ ಸಂದೇಶ ಗಳು ದ್ವೇಷ ಹಾಗೂ ವಿಭಜನೆಯನ್ನು ಹೆಚ್ಚಿಸುತ್ತವೆ. ಶಾಂತಿಯನ್ನು ಹಾಳು ಮಾಡುತ್ತವೆ ಎಂದಿದ್ದಾರೆ. ಮತ್ತೊಬ್ಬರು, ಇಂತಹ ದ್ವೇಷ ಹಾಗೂ ಅನಗತ್ಯ ದೂಷಣೆಯಿಂದಾಗಿ ಜನರು ಖಾಸಗಿ ವಾಹನಗಳನ್ನು ಬಳಸಲು ಒತ್ತಾಯಿಸಲ್ಪಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಸಾಮಾನ್ಯ ಜ್ಞಾನ ಹಾಗೂ ನಾಗರಿಕ ಜಾಗೃತಿ ಕಳೆದು ಹೋಗಿದೆ. ಇದು ಕೇವಲ ಭಾಷೆ ಅಥವಾ ರಾಜ್ಯದ ಸಮಸ್ಯೆಯಲ್ಲ, ಇಡೀ ಸಮಾಜದ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದಿ ಜನರು ಬೆಂಗಳೂರು, ಭಾರತದ ಭಾಗವಲ್ಲ, ಬದಲಾಗಿ ಬೇರೆ ಯಾವುದೋ ದೇಶದ ಭಾಗ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ