Video: ಅಲ್ಲ ನೀನೂ ಮೇಲೆ ಹೇಗೆ ಹೋದೆ? ಶ್ವಾನಗಳಿಗೆ ಹೆದರಿ ಮನೆಯ ಛಾವಣಿ ಹತ್ತಿದ ಹಸು
ನಮ್ಮ ಸುತ್ತಮುತ್ತಲಿನಲ್ಲಿ ಕೆಲವು ಆಘಾತಕಾರಿ ಘಟನೆಗಳು ನಡೆಯುತ್ತವೆ. ಕೆಲವು ಘಟನೆಗಳನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟನೇ. ಈ ದೃಶ್ಯ ನೋಡಿ ಕೂಡ ನೀವು ಶಾಕ್ ಆಗಬಹುದು. ಹಸುವನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದು, ಈ ವೇಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಸುವು ಮನೆಯ ಹಂಚಿನ ಮೇಲೆ ಹತ್ತಿ ನಿಂತುಕೊಂಡಿದೆ. ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಅದಿಲಾಬಾದ್, ಸೆಪ್ಟೆಂಬರ್ 16: ರಸ್ತೆಬದಿಯಲ್ಲಿ ಸಂಚಾರಿಸುವಾಗ ಬೀದಿನಾಯಿಗಳು (Street Dog) ಜನರನ್ನು ಬೆನ್ನಟ್ಟಿ ದಾಳಿ ಮಾಡುತ್ತವೆ. ಇನ್ನು ಮನುಷ್ಯರಷ್ಟೇ ಅಲ್ಲ, ನಾಯಿಗಳು ಈ ಪ್ರಾಣಿಗಳು ಬೆನ್ನಟ್ಟುವ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಈ ವೇಳೆ ಪ್ರಾಣಿಗಳು ಜೀವಭಯದಲ್ಲಿ ಓಡಿಹೋಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಕಡೆ ಹಸುವನ್ನು ನಾಯಿಗಳು ಬೆನ್ನಟ್ಟಿವೆ. ಈ ವೇಳೆ ಹಸುವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮನೆಯ ಛಾವಣಿ ಮೇಲೆ ಹತ್ತಿದ್ದು, ಈ ಘಟನೆಯೂ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ (Adialabad district) ಬೋರಾಜ್ ಮಂಡಲದ ನಿರಾಲಾ ಗ್ರಾಮದಲ್ಲಿ ನಡೆದಿದೆ. ಹಸು ಮನೆಯ ಛಾವಣಿ ಮೇಲೆ ಹತ್ತುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ವೈರಲ್ ಆಗಿದೆ.
ಈ ದೃಶ್ಯವನ್ನು ನೋಡಿ ಸ್ಥಳೀಯರು ಆತಂಕಗೊಂಡಿದ್ದು,ಹಸುವಿನ ಭಾರಕ್ಕೆ ಛಾವಣಿ ಕುಸಿಯುತ್ತದೆ ಎಂದು ಭಯಭೀತರಾಗಿದ್ದಾರೆ. ಹಸುವನ್ನು ಕೆಳಗೆ ಇಳಿಸಲು ಹೆಣಗಾಡಿದ್ದಾರೆ. ಕೊನೆಗೆ ಸತತ ಪ್ರಯತ್ನದಿಂದ ಮನೆಯ ಮೇಲಿಂದ ಹಸುವನ್ನು ಕೆಳಗಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:Video: ಜಸ್ಟ್ ಮಿಸ್, ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ಶ್ವಾನ
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಹಸು ಮನೆಯ ಛಾವಣಿ ಹತ್ತಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹಸುವು ಹೇಗೆ ಕೆಳಗೆ ಇಳಿಯಿತು? ಯಾರಾದರೂ ಹಸುವನ್ನು ಕೆಳಗೆ ಹಾಕಿದ್ದಾರೆಯೇ? ಹೀಗೆ ಕೆಲವರು ಪ್ರಶ್ನಿಸಿದ್ದಾರೆ. ಹಸುವಿನ ಮಾಲೀಕರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Tue, 16 September 25








