AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವಾಸಯೋಗ್ಯಕ್ಕೆ ಗುರುಗಾಂವ್‌ಗಿಂತ ಬೆಂಗಳೂರು ಬೆಸ್ಟ್; ಕಾರಣ ವಿವರಿಸಿದ ವ್ಯಕ್ತಿ

ಹೆಚ್ಚಿನವರು ಉದ್ಯೋಗ ಅರಸುತ್ತಾ ಬೆಂಗಳೂರಿಗೆ ಬರುತ್ತಾರೆ. ಪ್ರಾರಂಭದ ದಿನಗಳಲ್ಲಿ ಈ ಊರಿಗೆ ಹೊಂದಿಕೊಳ್ಳುವುದು ಕಷ್ಟವಾದರೂ ನಂತರದಲ್ಲಿ ಇದು ನಮ್ಮ ಹುಟ್ಟೂರು ಎನ್ನುವಷ್ಟು ಹತ್ತಿರವಾಗಿ ಬಿಡುತ್ತದೆ. ಇದೀಗ ರೆಡ್ಡಿಟ್ ನಲ್ಲಿ ವ್ಯಕ್ತಿಯೊಬ್ಬರು ಗುರುಗಾಂವ್ ಹಾಗೂ ಬೆಂಗಳೂರಿನ ಜೀವನವನ್ನು ಹೋಲಿಸಿ ಯಾವ ನಗರ ಎಷ್ಟು ಸುರಕ್ಷಿತ ಎಂದು ಹೇಳಿದ್ದಾರೆ. ಈ ಕುರಿತಾದ ಪೋಸ್ಟ್ ಸಖತ್ ವೈರಲ್ ಆಗಿದೆ.

Viral: ವಾಸಯೋಗ್ಯಕ್ಕೆ ಗುರುಗಾಂವ್‌ಗಿಂತ ಬೆಂಗಳೂರು ಬೆಸ್ಟ್; ಕಾರಣ ವಿವರಿಸಿದ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Sep 16, 2025 | 1:08 PM

Share

ಕೆಲಸವೆಂದ ಮೇಲೆ ಒಂದು ಊರು ಬಿಟ್ಟು ಮತ್ತೊಂದು ಊರಿಗೆ ತೆರಳಲೇ ಬೇಕು. ಹೀಗಾಗಿ ಒಂದೊಂದು ಊರಲ್ಲೂ ಒಂದೊಂದು ರೀತಿಯ ಅನುಭವವಾಗುವುದು ಸಹಜ. ಆದರೆ ಕೆಲವರು ಈ ಬಗ್ಗೆ ಹೇಳ್ತಾರೆ, ಇನ್ನು ಕೆಲವರು ಎಲ್ಲಾ ಅನುಭವಗಳನ್ನು ಜೀವನದ ಪಾಠವಾಗಿ ಸ್ವೀಕರಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಗುರುಗಾಂವ್ (Gurgaon) ಹಾಗೂ ಬೆಂಗಳೂರು (Bengaluru) ಈ ಎರಡು ನಗರದಲ್ಲಿ ಯಾವ ನಗರ ಸುರಕ್ಷಿತ ಹಾಗೂ ವಾಸಯೋಗ್ಯವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರ ಪೋಸ್ಟ್ ಎರಡು ನಗರಗಳ ರಸ್ತೆಗಳು, ಸುರಕ್ಷತೆ ಮತ್ತು ವಾಸಯೋಗ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಪ್ರಾಮಾಣಿಕ ಅನುಭವ ಹಂಚಿಕೊಂಡ ವ್ಯಕ್ತಿ

@dconhue ಎಂಬ ಹೆಸರಿನ ರೆಡ್ಡಿಟ್ ಬಳಕೆದಾರರು ಪೋಸ್ಟ್ ಹಂಚಿಕೊಂಡು ಗುರಗಾಂವ್ vs ಬೆಂಗಳೂರು: ಎರಡರಲ್ಲೂ ವಾಸಿಸಿದ ನನ್ನ ವೈಯಕ್ತಿಕ ಅನುಭವ” ಎಂಬ ಶೀರ್ಷಿಕೆಯಲ್ಲಿ ಕೆಲವು ವಿಚಾರಗಳನ್ನು ಹೇಳಿದ್ದಾರೆ. ನನಗೆ ಗುರುಗಾಂವ್ (ಗುರುಗ್ರಾಮ) ಮತ್ತು ಬೆಂಗಳೂರಿನಲ್ಲಿ ವಾಸಿಸುವ ಅವಕಾಶ ಸಿಕ್ಕಿದೆ. ಮೂಲಸೌಕರ್ಯ ಮತ್ತು ವಾಸಯೋಗ್ಯ ವಿಚಾರಕ್ಕೆ ಸಂಬಂಧಿಸಿದ್ದಂತೆ ಈ ಎರಡೂ ನಗರಗಳ ನಡುವಿನ ಕುರಿತು ನನ್ನ ಪ್ರಾಮಾಣಿಕ ಅನುಭವವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

Viral Post

ಇದನ್ನೂ ಓದಿ
Image
ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ ಇಸ್ರೋದ ಮಾಜಿ ಅಧ್ಯಕ್ಷ
Image
ಇದು ಬೆಂಗಳೂರಿನ ರಸ್ತೆಗುಂಡಿಗಳ ದುಸ್ಥಿತಿ ಎಂದ ವಿದ್ಯಾರ್ಥಿನಿಯರು
Image
ಮೂವಿ ನೋಡೋಕ್ ಥಿಯೇಟರ್‌ಗೆ ಬಂದ್ರು ವರ್ಕ್‌ ಟೆನ್ಶನ್‌ ಮಾತ್ರ ತಪ್ಪಿಲ್ಲ
Image
ಕಳೆದುಹೋದ ಏರ್‌ಪಾಡ್‌ ಹುಡುಕಲು ಯುವತಿಗೆ ಸಹಾಯ ಮಾಡಿದ ಬೆಂಗಳೂರಿನ ಆಟೋ ಚಾಲಕ

ಗುರುಗಾಂವ್ ವಿಭಿನ್ನ ಕಥೆಗಳ ಸಮ್ಮಿಲನ

ಗುರುಗಾಂವ್ ಭಾರತದ ಉನ್ನತ ಕಾರ್ಪೊರೇಟ್ ಕೇಂದ್ರಗಳಲ್ಲಿ ಒಂದಾಗಿರಬೇಕು, ಆದರೆ ವಾಸ್ತವವು ವಿಭಿನ್ನ ಕಥೆಯನ್ನು ಹೇಳುತ್ತದೆ. ಇಲ್ಲಿ ದೊಡ್ಡ ಸಮಸ್ಯೆಗಳೆಂದರೆ ಅದುವೇ ರಸ್ತೆಗಳ ಸ್ಥಿತಿ. ಎಲ್ಲೆಡೆ ಗುಂಡಿಗಳಿವೆ, ಇದು ನಿಜಕ್ಕೂ ಜೀವಕ್ಕೆ ಅಪಾಯಕಾರಿ. ಇನ್ನೂ ಆಘಾತಕಾರಿ ಸಂಗತಿಯೆಂದರೆ 20 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಮುಂದೆಯೂ ಹಾಳಾದ ರಸ್ತೆಗಳು , ಕಸ ಮತ್ತು ತೆರೆದ ಚರಂಡಿಗಳನ್ನು ಕಾಣಬಹುದು. ಕಸ ನಿರ್ವಹಣೆ ಕಳಪೆಯಾಗಿದೆ, ಅನೇಕ ಪ್ರದೇಶಗಳು ಕೆಟ್ಟ ವಾಸನೆಯಿಂದ ತುಂಬಿ ಹೋಗಿವೆ. ಸ್ಥಳೀಯ ಅಪರಾಧಗಳು ಮತ್ತು ಗೂಂಡಾಗಿರಿಯಂತಹ ವಾತಾವರಣವಿದ್ದು, ಅಭದ್ರತೆಯ ಭಾವನೆಯನ್ನು ಉಂಟು ಮಾಡುತ್ತದೆ. ಗುರುಗಾಂವ್‌ನಲ್ಲಿರುವ ಬಸ್ ನಿಲ್ದಾಣವು ಭೀಕರ ಸ್ಥಿತಿಯಲ್ಲಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ಸರಿಯಾದ ಬಸ್ ನಿಲ್ದಾಣದಂತೆ ಕಾಣುತ್ತಿಲ್ಲ, ಇದು ‘ಸಹಸ್ರಮಾನ ನಗರ’ ಎಂದು ಹೇಳಿಕೊಳ್ಳುವ ನಗರಕ್ಕೆ ಇದು ತದ್ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ವಾಸಯೋಗ್ಯ, ಸುರಕ್ಷಿತ ನಗರ

ಬೆಂಗಳೂರು ಗುರುಗಾಂವ್ ಗಿಂತ ವಿಭಿನ್ನವಾಗಿದೆಹಾಗೂ ಉತ್ತಮವಾಗಿದೆ. ರಸ್ತೆಗಳು ಹೆಚ್ಚಾಗಿ ಉತ್ತಮ ಸ್ಥಿತಿಯಲ್ಲಿವೆ. ಹೌದು, ಕೆಲವು ಪ್ರದೇಶಗಳಲ್ಲಿ ಕೆಟ್ಟ ತೇಪೆಗಳಿವೆ, ಮೆಟ್ರೋ ನಿರ್ಮಾಣದಿಂದಾಗಿ ಹೀಗಿವೆ. ಈ ಕನಿಷ್ಠ ಸಮಸ್ಯೆಗಳಿಗೆ ಒಂದು ಕಾರಣವಿದ್ದು ಆದರೆ ತಾತ್ಕಾಲಿಕವಾಗಿರುತ್ತದೆ. ಗುರುಗಾಂವ್‌ನಂತಹ ಕಸ ತುಂಬಿದ ಪ್ರದೇಶಗಳನ್ನು ನೀವು ನೋಡುವುದಿಲ್ಲ. ಬೆಂಗಳೂರಿನ ಜನರು ಉತ್ತಮ ನಾಗರಿಕ ಪ್ರಜ್ಞೆಯನ್ನು ಹೊಂದಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಹೆಚ್ಚಿನ ಎಲ್ಲರೂ ಕೈ ಜೋಡಿಸುತ್ತಾರೆ. ಬೆಂಗಳೂರಿನ ಅತೀ ದೊಡ್ಡ ಸಮಸ್ಯೆಯೆಂದರೆ ಅದುವೇ ಅಧಿಕ ಜನಸಂಖ್ಯೆ. ಇದು ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ, ಆದರೆ ಇಲ್ಲಿನ ವ್ಯವಸ್ಥೆಯು ಗುರುಗಾಂವ್‌ಗಿಂತ ವ್ಯವಸ್ಥಿತವಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದೆ. ಸುರಕ್ಷತೆ ಹಾಗೂ ಭದ್ರತೆಯಲ್ಲಿ ಬೆಂಗಳೂರು ಮುಂದಿದೆ. ಇಲ್ಲಿನ ಕಾನೂನು ವ್ಯವಸ್ಥೆಯೂ ಉತ್ತಮವಾಗಿದೆ. ಸಮಸ್ಯೆಗಳ ವಿರುದ್ಧ ಇಲ್ಲಿನ ಜನರು ಧ್ವನಿ ಎತ್ತುವ ಸಂದರ್ಭಗಳೇ ಹೆಚ್ಚು. ಬೆಂಗಳೂರಿನಲ್ಲಿ ಐಷಾರಾಮಿ ಕಟ್ಟಡಗಳು, ಜಾಗವು ಬಹಳ ದುಬಾರಿಯಾಗಿದೆ. ವಾಸಯೋಗ್ಯತೆ ಹಾಗೂ ಮೂಲಭೂತ ನಾಗರಿಕ ಮೂಲ ಸೌಕರ್ಯವನ್ನು ಪರಿಗಣಿಸಿದಾಗ ಈ ಬೆಲೆಯೂ ಸಮಂಜಸವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:Viral: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಖಾದ್ಯ ಸವಿದ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ವೈರಲ್ ಆಯ್ತು ಫೋಟೋಸ್

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ, ನೀವು ಎಲ್ಲಿಯವರು ಎಂದು ಕೇಳಿದ್ದಾರೆ. ಮತ್ತೊಬ್ಬರು, ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ದೆಹಲಿ ಹಾಗೂ ಗುರಗಾಂವ್ ಅಷ್ಟೊಂದು ಕಲುಷಿತವಾಗಿಲ್ಲದಿದ್ದರೆ ನಾನು ಅಲ್ಲಿ ವಾಸಿಸಲು ಇಷ್ಟಪಡುತ್ತಿದ್ದೆ. ವಾಯು ಮಾಲಿನ್ಯವನ್ನು ಹೊರತುಪಡಿಸಿ ದೆಹಲಿಯ ಮೂಲಸೌಕರ್ಯ ಮತ್ತು ರಸ್ತೆಗಳು ವಿಶ್ವ ದರ್ಜೆಯವು. ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವಿಮಾನ ನಿಲ್ದಾಣ ರಸ್ತೆಯನ್ನು ಹೊರತುಪಡಿಸಿ ಬೆಂಗಳೂರಿನಲ್ಲಿ ಸರಿಯಾದ ರಸ್ತೆಗಳಿಲ್ಲ ಎಂದು ವಾಸ್ತವ ಸ್ಥಿತಿಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳು ಇಲ್ಲದ ರಸ್ತೆಗಳನ್ನು ನೀವು ಎಲ್ಲಿ ನೋಡಿದ್ದೀರಿ. ಇಲ್ಲಿ ಗುಂಡಿಗಳಿಲ್ಲದ ಯಾವುದೇ ರಸ್ತೆ ಇಲ್ಲ. ಈ ರಸ್ತೆಗಳು ಸಾವಿನ ಕೂಪಗಳಾಗಿವೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Tue, 16 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ