ಕಳೆದುಹೋದ ಏರ್‌ಪಾಡ್ ಹುಡುಕಲು ಯುವತಿಗೆ ಸಹಾಯ ಮಾಡಿದ ಬೆಂಗಳೂರಿನ ಆಟೋ ಚಾಲಕ
ಮೀಟರ್‌ಗಿಂತ ಹೆಚ್ಚಿಗೆ ಹಣ ವಸೂಲಿ ಮಾಡ್ತಾರೆ, ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಾರೆ ಎಂದು ಆಟೋ ಚಾಲಕರ ವಿರುದ್ಧ ಒಂದಷ್ಟು ದೂರುಗಳು ಕೇಳಿಬರುತ್ತವೆ. ಇವೆಲ್ಲದರ ನಡುವೆ ಹಲವು ಆಟೋ ಚಾಲಕರು ಪ್ರಾಮಾಣಿಕತೆ, ಒಳ್ಳೆಯತನದಿಂದ ಬದುಕುತ್ತಿದ್ದಾರೆ. ಇದಕ್ಕೆ ನಿದರ್ಶನದಂತಿರುವ ಘಟನೆಯೊಂದು ನಡೆದಿದ್ದು, ಆಟೋ ಡ್ರೈವರ್ ಒಬ್ರು ತನ್ನೆಲ್ಲಾ ಕೆಲಸ ಕಾರ್ಯ ಪಕ್ಕಕ್ಕಿಟ್ಟು ಯುವತಿಗೆ ಏರ್‌ಪಾಡ್ ಹುಡುಕಲು ಸಹಾಯ ಮಾಡಿದ್ದಾರೆ.

ಮನುಷ್ಯತ್ವವನ್ನೇ ಮರೆತು ಕ್ರೂರವಾಗಿ ವರ್ತಿಸುವ ಜನರ ನಡುವೆ ಒಬ್ಬರಿಗೆ ಸಹಾಯ ಮಾಡುವ ಮನೋಭಾವ (helping nature), ಒಳ್ಳೆ ಮನಸ್ಸು, ಪ್ರಾಮಾಣಿಕತೆ ಸೇರಿದಂತೆ ಹತ್ತಾರು ಒಳ್ಳೆಯ ಗುಣಗಳನ್ನು ಹೊಂದಿರುವ ಜನರೂ ಇದ್ದಾರೆ. ಹೀಗೆ ಸ್ವಾರ್ಥವೇ ತುಂಬಿದ ಈ ಪ್ರಪಂಚದಲ್ಲಿ ಒಳ್ಳೆತನ ಸಹಾಯ ಗುಣ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿರುವಂತಹ ಘಟನೆಯೊಂದರ ಸುದ್ದಿ ಇದೀಗ ವೈರಲ್ ಆಗಿದ್ದು, ಬೆಂಗಳೂರಿನ (Bengaluru) ಆಟೋ ಡ್ರೈವರ್ ಒಬ್ರು ತನ್ನ ಕೆಲಸ ಕಾರ್ಯವನ್ನೆಲ್ಲಾ ಪಕ್ಕಕ್ಕಿಟ್ಟು ಯುವತಿಯೊಬ್ಬಳಿಗೆ ಏರ್‌ಪಾಡ್ ಹುಡುಕಲು ಸಹಾಯ ಮಾಡಿದ್ದಾರೆ. ಈ ಹೃದಯಸ್ಪರ್ಶಿ ಕಥೆ ವೈರಲ್ ಆಗುತ್ತಿದ್ದು, ಆಟೋ ಡ್ರೈವರ್‌ನ ಈ ಒಳ್ಳೆತನವನ್ನು ಎಲ್ಲರೂ ಕೊಂಡಾಡಿದ್ದಾರೆ.
ಕಳೆದುಹೋದ ಏರ್‌ಪಾಡ್ ಹುಡುಕಲು ಯುವತಿಗೆ ಸಹಾಯ ಮಾಡಿದ ಆಟೋ ಚಾಲಕ:
ಬೆಂಗಳೂರಿನ ಆಟೋ ಚಾಲಕರೊಬ್ಬರು ಕಳೆದು ಹೋದ ಏರ್‌ಪಾಡ್ ಹುಡುಕಲು ಯುವತಿಯೊಬ್ಬಳಿಗೆ ಸಹಾಯ ಮಾಡಿದ್ದಾರೆ. ಪಾಲಕ್ ಮಲ್ಹೋತ್ರಾ ಎಂಬ ಯುವತಿ ತನ್ನ ಏರ್‌ಪಾಡ್‌ಗಳನ್ನು ಆಕಸ್ಮಿಕವಾಗಿ ಆಟೋವೊಂದರಲ್ಲಿ ಬಿಟ್ಟು ಹೋಗಿರುತ್ತಾಳೆ. ಕಳೆದು ಹೋದ ಆ ಏರ್‌ಪಾಡ್ ಹುಡುಕಲು ಆಕೆ ಇನ್ನೊಬ್ಬ ಆಟೋ ಚಾಲಕ ದರ್ಶನ್ ಎಂಬವರ ಬಳಿ ಕೇಳಿಕೊಂಡಿದ್ದಾಳೆ. ಆಟೋ ಡ್ರೈವರ್ ದರ್ಶನ್ ಸಹಾಯದಿಂದ ಸತತ ಒಂದುವರೆ ಗಂಟೆಗಳ ಹುಡುಕಾಟಗಳ ಬಳಿಕ ಆಕೆಗೆ ತನ್ನ ಏರ್‌ಪಾಡ್ ಸಿಕ್ಕಿದೆ.
ಮೊದಲು ಆಕೆ ತಾನು ಮೊದಲಿದ್ದ ಏರ್‌ಪಾಡ್‌ಗಳನ್ನು ಆಟೋ ಡ್ರೈವರ್ ತೆಗೆದುಕೊಂಡಿದ್ದಾನೆ ಎಂದು ಭಾವಿಸಿದ್ದಳು. ಆದರೆ ಅದು ಯಾರೋ ಇನ್ನೊಬ್ಬ ಪ್ರಯಾಣಿಕನ ಕೈ ಸೇರಿದ್ದು, ಚಾಲಕ ದರ್ಶನ್ ಸಹಾಯದಿಂದ ಆಕೆಗೆ ಹೇಗೋ ತನ್ನ ಇಯರ್‌ಫೋನ್ ವಾಪಾಸ್ ಸಿಕ್ಕಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
I lost my AirPods in an auto today…
Used ‘Find My’, booked a new ride, and told the driver (Darshan) :
“Sir, I’ve lost something in another auto… can you please just follow this location?”
— Palak Malhotra (@palak_malhotra8) September 10, 2025
ಈ ಹೃದಯಸ್ಪರ್ಶಿ ಕಥೆಯನ್ನು ಪಾಲಕ್ (Palak Malhotra) ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ, “ಬೆಂಗಳೂರಿನ ಆಟೋ ಚಾಲಕರು ಕನ್ನಡ ಬರದಿದ್ದರೆ ನಮ್ಮನ್ನು ಅಸಭ್ಯರು ಎಂದು ಹೇಳ್ತಾರೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ ಈ ಆಟೋ ಚಾಲಕ ಕನ್ನಡ ಬರದ ನನಗೆ ಏರ್‌ಪಾಡ್ ಹುಡುಕಲು ಸಹಾಯ ಮಾಡಿದ್ದಾರೆ. ಚಾಲಕ ದರ್ಶನ್ ನಿರರ್ಗಳವಾಗಿ ಇಂಗ್ಲಿಷ್ ಅಥವಾ ಹಿಂದಿ ಮಾತನಾಡಲು ಬಾರದ ಕಾರಣ ಅವರ ಜೊತೆ ಸಂವಹನವು ಒಂದು ಸವಾಲಾಗಿತ್ತು, ಆದರೆ, ಸನ್ನೆಗಳು ಮತ್ತು ಒಂದಷ್ಟು ಪದಗಳ ಮೂಲಕ ಸಂವಹನ ನಡೆಸಿ, ಒಂದುವರೆ ಹುಡುಕಾಟದ ಬಳಿಕ ಏರ್‌ಪಾಡ್ ಹುಡುಕಿದೆವು” ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: ತಾಯಿಗಿಂತ ದೇವರಿಲ್ಲ; ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಾತಾಯಿ
ಬಿ.ಕಾಂ ಪದವಿಯನ್ನು ಪಡೆದಿರುವ ದರ್ಶನ್ ತಾನು ಎಂಬಿಎ ಓದುವ ಸಲುವಾಗಿ ತಂದೆಯ ಆಟೋವನ್ನು ಓಡಿಸುತ್ತಿದ್ದಾರೆ. ಅವರ ದೃಢನಿಶ್ಚಯ ಮತ್ತು ಪ್ರಾಮಾಣಿಕತೆ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆ, ಎಲ್ಲಾ ಹೀರೋಗಳು ಕ್ಯಾಪ್ ಧರಿಸಲೇಬೇಕೆಂದಿಲ್ಲ ಎಂದು ಆಕೆ ಭಾವನಾತ್ಮಕ ನುಡಿಗಳನ್ನು ಬರೆದುಕೊಂಡಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








