AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾಲೇಜು ಅರ್ಧಕ್ಕೆ ಬಿಟ್ಟೆ, ಆರ್ಥಿಕ ಸಂಕಷ್ಟ ಇದ್ರೂ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದೆ; ಕಷ್ಟದ ದಿನಗಳನ್ನು ನೆನಪಿಸಿಕೊಂಡ ಯುವತಿ

ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗಿರುತ್ತದೆ. ಆದರೆ ಶಿಕ್ಷಣದ ಸಮಯದಲ್ಲಿ ಸಾಕಷ್ಟು ಆರ್ಥಿಕ ಅಡೆತಡೆಗಳು ಎದುರಾಗುತ್ತದೆ. ಇಲ್ಲೊಬ್ಬ ಯುವತಿಯೂ ಕಾಲೇಜನ್ನು ಅರ್ಧಕ್ಕೆ ಬಿಟ್ಟರೂ ಕಷ್ಟ ಪಟ್ಟು ಓದಿ ಒಳ್ಳೆಯ ಅಂಕ ಗಳಿಸಿದ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Video: ಕಾಲೇಜು ಅರ್ಧಕ್ಕೆ ಬಿಟ್ಟೆ, ಆರ್ಥಿಕ ಸಂಕಷ್ಟ ಇದ್ರೂ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದೆ; ಕಷ್ಟದ ದಿನಗಳನ್ನು ನೆನಪಿಸಿಕೊಂಡ ಯುವತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Oct 15, 2025 | 7:11 PM

Share

ಬದುಕಿನಲ್ಲಿ ಎಷ್ಟೇ ಅಡೆತಡೆಗಳು ಎದುರಾಗಲಿ, ಸಾಧಿಸುವ ಛಲ ಮುಖ್ಯ. ಎಲ್ಲವನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ರೆ ಇಡೀ ಜಗತ್ತೇ ತಿರುಗಿ ನೋಡುತ್ತದೆ. ಇದಕ್ಕೆ ಉದಾಹರಣೆ ರೆಡಿಯೋ ಜಾಕಿಯಾಗಿ ಕರ್ತವ್ಯದಲ್ಲಿರುವ ಇನ್‌ಫ್ಲುಯೆನ್ಸರ್ ರಿಷಿಕಾ (Rishika). ಓದುವ ಸಮಯದಲ್ಲಿ ಅರ್ಧಕ್ಕೆ ಕಾಲೇಜು ಬಿಟ್ಟ ಇವರು, ಅಧಿಕ ಅಂಕ ಗಳಿಸಿದ್ರು. ಇನ್ನು ಗ್ರಾಜುಯೇಷನ್ ಡೇಯಲ್ಲಿ (graduation day) ಅತಿಥಿಯಾಗಿ ಭಾಗವಹಿಸಿದ್ರು ಎನ್ನುವ ಬಗ್ಗೆ ಹೇಳಿಕೊಳ್ಳುತ್ತಾ ಆರ್ಥಿಕ ಸಮಸ್ಯೆಯೂ ತನ್ನನ್ನು ಹೇಗೆಲ್ಲಾ ಹಿಂಡಿ ಹಿಪ್ಪೆ ಮಾಡಿತು ಎಂದಿದ್ದಾಳೆ. ಈ ವಿಡಿಯೋಗೆ ನೆಟ್ಟಿಗರು ಈ ಯುವತಿಗೆ ಧೈರ್ಯ ತುಂಬಿದ್ದು ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

rashikariri ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಯುವತಿಯೂ ತನ್ನ ಗ್ರಾಜುಯೇಷನ್ ಡೇ ಹಾಗೂ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಘಟಿಕೋತ್ಸವದ ಕ್ಷಣಗಳನ್ನು ಕಾಣಬಹುದು. ಈ ವಿಡಿಯೋದೊಂದಿಗೆ ಆರ್ಥಿಕವಾಗಿ ಹಣ ನೀಡಲು ಸಾಧ್ಯವಾಗಿಲ್ಲದ ಕಾರಣ ನಾನು ನನ್ನದೇ ಗ್ರಾಜುಯೇಷನ್ ಡೇಯಲ್ಲಿ ಅತಿಥಿಯಾಗಿ ಭಾಗವಹಿಸಿದೆ. ಒಂದು ದಿನ ವೇದಿಕೆಯ ಮೇಲೆ ನಡೆಯುವುದಕ್ಕಿಂತ ಆ ತಿಂಗಳನ್ನು ಬದುಕುವುದು ಮುಖ್ಯ ಎಂಬುದಾಗಿತ್ತು. ಆದರೆ ನಾನು ಆ ದಿನ ಭಾಗಿಯಾಗಬೇಕು ಎಂದು ಬಯಸಿದ್ದೆ. ನಾನು ಗ್ರಾಜುಯೇಷನ್‌ಗೆ ಮೊದಲಾಗಲಿ ಅಥವಾ ನಂತರವಾಗಲಿ ಯಾವತ್ತು ವಾಚ್‌ ಧರಿಸಿರಲಿಲ್ಲ ಎಂದು ಆ ದಿನದ ಬಗ್ಗೆ ಹೇಳಿದ್ದಾಳೆ.

ಇದನ್ನೂ ಓದಿ
Image
ನಾಸಾ ಪ್ರವಾಸಕ್ಕೆ ಆಯ್ಕೆಯಾದ ಹನ್ನೆರಡರ ಪೋರಿ
Image
ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಒಬ್ಬ ಇಂಗ್ಲಿಷ್ ಶಿಕ್ಷಕರಿದ್ದಾರೆ!
Image
ಸಿನಿಮಾದ ಹಾಡು ಹಾಡಿ ಫೇಮಸ್‌ ಆದ್ಲು ಈ ಹುಡುಗಿ
Image
ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಟ್ಯಾಂಕ್-ಟಾಪ್ ಎಫೆಕ್ಟ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ನಾನು ಬ್ಯಾಚುಲರ್ ಡಿಗ್ರಿ ಓದಲು ಮುಂದಾಗಿದ್ದೆ, ದುಡ್ಡಿ ಸಮಸ್ಯೆಯಿಂದ ಓದು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಕಾಲೇಜು ದಿನಗಳು ಕಹಿ ಸಿಹಿ ಎರಡರ ಮಿಶ್ರಣವಾಗಿತ್ತು. ಇನ್ನು ನಾನು ನನ್ನ ಗ್ರಾಜುಯೇಷನ್ ಡೇಯಲ್ಲಿ ಭಾಗವಹಿಸಲೇಬೇಕು ಎಂದು ಡಿಸೈಡ್ ಮಾಡಿದ್ದೆ. ಇದರ ಮೂಲ ಉದ್ದೇಶವೇ ನನ್ನ ಜೊತೆಗೆ ಕನಿಷ್ಠ ನೆನಪುಗಳಾದರೂ ಇರುತ್ತದೆ ಎನ್ನುವುದಾಗಿತ್ತು. ಈ ದಿನ ನನಗೆ ಪ್ರೋತ್ಸಾಹಿಸುವುದಕ್ಕೆ ನನ್ನ ಸಹದ್ಯೋಗಿಗಳು ಅಲ್ಲಿ ನನ್ನ ಜೊತೆಗಿದ್ದರು. ಅವರು ನನ್ನ ಜೀವನದ ಕಷ್ಟದ ದಿನಗಳಲ್ಲಿ ಜೊತೆಗೆ ಇದ್ದರು ಎಂದು ನೆನಪಿಸಿಕೊಂಡಿದ್ದಾಳೆ.

ಆದರೆ ಈಗ ನನ್ನ ಬಗ್ಗೆ ನನಗೇನೇ ಹೆಮ್ಮೆ ಇದೆ. ನಾನು ಮೆರಿಟ್‌ನೊಂದಿಗೆ ಪದವಿ ಪೂರ್ಣಗೊಳಿಸಿದ್ದೇನೆ. ನಾನು ನನ್ನ ಸಂಶೋಧನೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದು, ಮಾಸ್ಟರ್ ಡಿಗ್ರಿ ಪಡೆದಿದ್ದೇನೆ. ಆದರೆ ನಾನು ಒಂಟಿ ತಾಯಿಯಾಗಿ ಯಾರ ಬೆಂಬಲವಿಲ್ಲದೇ ಇಷ್ಟೆಲ್ಲಾ ಮಾಡಿದ್ದೇನೆ. ಜೀವನದಲ್ಲಿ ಹೇಗೆ ಕಠಿಣ ಕ್ಷಣವನ್ನು ಎದುರಿಸಬೇಕು ಎಂದು ಕಲಿಸಿದೆ. ಇಂತಹ ಸಂದರ್ಭದಲ್ಲಿ ನೀವು ಮತ್ತಷ್ಟು ಗಟ್ಟಿಯಾಗುವಿರಿ. ಆದರೆ ಜೀವನದಲ್ಲಿ ಕೊನೆಗೆ ಉಳಿಯುವುದು ನೆನಪುಗಳು ಮಾತ್ರ. ಭವಿಷ್ಯದ ಬಗ್ಗೆ ನಿಮಗೆ ತಿಳಿದಿರುವುದಿಲ್ಲ ಎಂದು ಹೇಳಿದ್ದಾಳೆ.

ಇದನ್ನೂ ಓದಿ:Kaliachak Village: ಇದು ಇಂಗ್ಲಿಷ್ ಟೀಚರ್​​ ವಿಲೇಜ್​​; ಇಲ್ಲಿ ಪ್ರತಿಯೊಂದು ಮನೆಯಲ್ಲೂ ಒಬ್ಬ ಆಂಗ್ಲ ಶಿಕ್ಷಕರಿದ್ದಾರೆ!

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಗ್ರಾಜುಯೇಷನ್ ಡೇಗೆ ನಿಮಗೆ ಎಷ್ಟು ಚಾರ್ಜ್ ಮಾಡಿದ್ದಾರೆ ಎಂದು ಕೇಳಿದ್ದಾರೆ. ಇನ್ನೊಬ್ಬರು, ನಿಮಗೆ ನನ್ನ ಬಗ್ಗೆ ತಿಳಿದಿಲ್ಲ, ಆದರೆ ನಿನ್ನ ಬಗ್ಗೆ ನನಗೆ ತುಂಬಾನೇ ಹೆಮ್ಮೆಯಿದೆ. ನೀನು ರಾಣಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆ ದಾರ ನಿಮ್ಮ ಸಾಧನೆಗೆ ಶುಭಾಶಯಗಳು. ಆದರೆ ನನಗೆ ಅಚ್ಚರಿಯೆನಿಸುವುದೆಂದರೆ ನಿಮ್ಮ ಸ್ನೇಹಿತರು ಹಾಗೂ ಸಹದ್ಯೋಗಿಗಳು ಯಾಕೆ ಸಹಾಯ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Wed, 15 October 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ