AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನೆರೆಹೊರೆಯ ಮಕ್ಕಳಿಗಾಗಿ ಪಟಾಕಿ ಖರೀದಿಸಿ, ದೀಪಾವಳಿ ಹಬ್ಬದ ಸಂಭ್ರಮ ಹಂಚಿದ ವ್ಯಕ್ತಿ

ಹಬ್ಬವೆಂದರೆ ಎಲ್ಲರಿಗೂ ಕೂಡ ಒಂದೇ ರೀತಿ ಇರಲ್ಲ. ಕೆಲವರು ನೀರಿನಂತೆ ದುಡ್ಡು ಖರ್ಚು ಅದ್ದೂರಿಯಾಗಿ ದೀಪಾವಳಿ ಹಬ್ಬ ಮಾಡ್ತಾರೆ, ಇನ್ನು ಕೆಲವರು ಬೇರೆಯವರು ಹಬ್ಬವನ್ನು ಸಂಭ್ರಮಿಸುವುದನ್ನೇ ನೋಡಿ ಖುಷಿ ಪಡುತ್ತಾರೆ. ಆದರೆ ಇಲ್ಲೊಬ್ಬ ಹೃದಯ ಶ್ರೀಮಂತ ವ್ಯಕ್ತಿಯೂ ದೀಪಾವಳಿ ಹಬ್ಬದ ದಿನ ತಮ್ಮ ಪಾಡಿಗೆ ಆಟವಾಡುತ್ತಿದ್ದ ಬಡ ಮಕ್ಕಳಿಗೆ ಪಟಾಕಿ ಕೊಡಿಸಿ ಅವರ ಮೊಗದಲ್ಲಿ ನಗು ಮೂಡಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

Video: ನೆರೆಹೊರೆಯ ಮಕ್ಕಳಿಗಾಗಿ ಪಟಾಕಿ ಖರೀದಿಸಿ, ದೀಪಾವಳಿ ಹಬ್ಬದ ಸಂಭ್ರಮ ಹಂಚಿದ ವ್ಯಕ್ತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Oct 22, 2025 | 1:59 PM

Share

ದೀಪಾವಳಿ (Deepavali) ಎಂದರೆ ಮೊದಲು ನೆನಪಾಗುವುದೇ ಪಟಾಕಿಗಳ ಸೌಂಡ್. ಮಕ್ಕಳಂತೂ ಖುಷಿಯಿಂದಲೇ ಪಟಾಕಿ ಹೊಡೆಯುತ್ತಾ ಹಬ್ಬವನ್ನು ಸಂಭ್ರಮಿಸುತ್ತಾರೆ. ಆದರೆ ತನ್ನ ಮನೆಯ ಪಕ್ಕ ಪಟಾಕಿ ಹೊಡೆಯದೇ ತಮ್ಮ ಪಾಡಿಗೆ ಆಟ ಆಡುತ್ತಿದ್ದ ಮಕ್ಕಳನ್ನು ವ್ಯಕ್ತಿಯೊಬ್ಬರು ನೋಡಿದ್ದಾರೆ. ತಮಗೂ ಕೂಡ ಈ ಬಾರಿ ದೀಪಾವಳಿಗೆ ಒಂಟಿ ಎಂಬ ಭಾವನೆ ಮೂಡಿದೆ. ಹೀಗಾಗಿ ಮಕ್ಕಳೊಂದಿಗೆ ಹಬ್ಬ ಆಚರಿಸಲು ಮುಂದಾಗಿದ್ದು, ಆಟ ಆಡುತ್ತಿದ್ದ ಬಡ ಮಕ್ಕಳಿಗಾಗಿ ತಾನೇ ಪಟಾಕಿಯನ್ನು (crackers) ಖರೀದಿಸಿ ಅವರ ಕೈಯಲ್ಲಿಟ್ಟು ಖುಷಿ ಪಡಿಸಿದ್ದಾರೆ. ಈ ಸುಂದರ ಕ್ಷಣವನ್ನು ಸೆರೆ ಹಿಡಿದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ವ್ಯಕ್ತಿಯ ಒಳ್ಳೆಯ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ.

ಈ ವ್ಯಕ್ತಿಯ ಒಳ್ಳೆಯ ಮನಸ್ಸನ್ನು ನೋಡಿ

ಆಕಾಶ್ ದಿಲ್ಲಿವಾರ್ (@aakashrebuilds) ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕೆಲವೊಮ್ಮೆ ಸಂತೋಷವು ನಿಮಗಾಗಿ ಆಚರಿಸುವುದರಲ್ಲಿಲ್ಲ – ಅದು ನಿಮ್ಮ ಸುತ್ತಲೂ ನಗುವನ್ನು ಹರಡುವುದರಲ್ಲಿದೆ. ಈ ದೀಪಾವಳಿ ವಿಭಿನ್ನವಾಗಿತ್ತು. ನನ್ನ ನೆರೆಹೊರೆಯ ಕೆಲವು ಮಕ್ಕಳು ಪಟಾಕಿ ಹೊಡೆಯದೇ ಸಂತೋಷದಿಂದ ತಮ್ಮ ಪಾಡಿಗೆ ತಾವು ಆಟವಾಡುವುದನ್ನು ನಾನು ನೋಡಿದೆ. ಅವರು ಬಡವರು ಎಂದು ಅಲ್ಲ, ಆದರೆ ನಾನು ಒಬ್ಬಂಟಿಯಾಗಿದ್ದೇನೆ, ಹೀಗಾಗಿ ಅವರೊಂದಿಗೆ ದೀಪಾವಳಿಯನ್ನು ಆನಂದಿಸಬಹುದು ಎಂದು ನನಗೆ ಅನಿಸಿತು. ಹಾಗಾಗಿ ನಾನು ಹೊರಗೆ ಹೋಗಿ ಅವರಿಗೆ ಪಟಾಕಿ ಖರೀದಿಸಿ ಅವರಿಗೆ ಕೊಟ್ಟೆ.

ಇದನ್ನೂ ಓದಿ
Image
ದೀಪಾವಳಿಗೆ ಕೊಟ್ಟ ಉಡುಗೊರೆ ನೋಡಿ ಈ ಉದ್ಯೋಗಿಗಳು ಮಾಡಿದ್ದೇನು ನೋಡಿ
Image
ಡೆಲಿವರಿ ಬಾಯ್ಸ್‌ಗೆ ಗಿಫ್ಟ್ ನೀಡಿ ನಗು ಮೂಡಿಸಿದ ವ್ಯಕ್ತಿ
Image
ದೀಪಾವಳಿಯಂದು ದೆಹಲಿ ಜಗಮಗಿಸುತ್ತಿದೆ, ಬೆಂಗಳೂರು ಮಂಕಾಗಿದೆ
Image
ದೀಪಾವಳಿಯಿಂದ ಬೆಂಗಳೂರು ಖಾಲಿ ಖಾಲಿ ಎಂದ ಟೆಕ್ಕಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಪುಟಾಣಿ ಮಕ್ಕಳ ಮುಖಗಳು ಹೇಗೆ ಬೆಳಗಿದವು. ಆ ಕ್ಷಣ ನನ್ನ ದೀಪಾವಳಿಯನ್ನು ಪ್ರಕಾಶಮಾನಗೊಳಿಸಿತು. ಅವರು ಬಡವರು ಅಥವಾ ಇನ್ಯಾವುದೋ ಕಾರಣಕ್ಕಾಗಿ ನಾನು ಅವರಿಗೆ ಸಹಾಯ ಮಾಡಿದ್ದೇನೆ ಎಂದು ನಾನು ಹೇಳುತ್ತಿಲ್ಲ. ಆ ಮುದ್ದಾದ ಮಕ್ಕಳ ಮುಖಗಳಲ್ಲಿನ ನಗುವನ್ನು ನೋಡಲು ನಾನು ನಿಜವಾಗಿಯೂ ಬಯಸಿದ್ದೆ. ಈ ದೀಪಾವಳಿಯಲ್ಲಿ ನಾನು ಒಂಟಿಯಾಗಿದ್ದೆ, ಆದರೆ ಆ ಕೆಲವು ನಿಮಿಷಗಳು ನನ್ನ ಹೃದಯವನ್ನು ಸಂಪೂರ್ಣವಾಗಿ ಖುಷಿಪಡಿಸಿದವು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಬೇರೆಯವರ ಪ್ರಪಂಚವನ್ನೂ ಸ್ವಲ್ಪ ಬೆಳಗಿಸೋಣ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ದೀಪಾವಳಿಯಂದು ನೆರೆ ಹೊರೆಯ ಮಕ್ಕಳು ರಸ್ತೆಬದಿಯಲ್ಲಿ ಪಟಾಕಿಯನ್ನು ಹೊಡೆಯದೆ ತಮ್ಮ ಪಾಡಿಗೆ ಆಟ ಆಡುತ್ತಿರುವುದನ್ನು ಕಾಣಬಹುದು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಬೇಸರಗೊಂಡು ಈ ಮಕ್ಕಳಿಗೆ ಪಟಾಕಿಗಳನ್ನು ಖರೀದಿಸಲು ಹೋದರು. ಆ ಬಳಿಕ ಮಕ್ಕಳಿರುವಲ್ಲಿಗೆ ಹೋಗಿ ಖರೀದಿಸಿದ ಪಟಾಕಿಗಳನ್ನು ಆ ಮಕ್ಕಳಿಗೆ ನೀಡುವುದನ್ನು ನೋಡಬಹುದು. ಈ ಪುಟಾಣಿಗಳು ಪಟಾಕಿ ಸಿಡಿಸಿ ಖುಷಿ ಖುಷಿಯಿಂದಲೇ ಹಬ್ಬವನ್ನು ಸಂಭ್ರಮಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ:ನಿಮ್ಮ ಗಿಫ್ಟ್ ನೀವೇ ಇಟ್ಕೊಳ್ಳಿ; ದೀಪಾವಳಿಗೆ ಕೊಟ್ಟ ಸೋನ್‌ಪಾಪ್ಡಿ ಬಾಕ್ಸನ್ನು ಕಂಪನಿಯ ಗೇಟ್ ಮುಂದೆ ಎಸೆದ ಉದ್ಯೋಗಿಗಳು

ಈ ವಿಡಿಯೋ ಇಪ್ಪತ್ತೊಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಿಜವಾದ ದೀಪಾವಳಿ ಎಂದಿದ್ದಾರೆ. ಇನ್ನೊಬ್ಬರು ನೀವು ಬೇರೊಬ್ಬ ಮನೆಯ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಕಾರಣವಾಗಿದ್ದೀರಿ, ಖುಷಿಯ ಸಂಗತಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತಿದೆ, ಅರ್ಥಪೂರ್ಣ ದೀಪಾವಳಿ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ