Video: ನಿಮ್ಮ ಗಿಫ್ಟ್ ನೀವೇ ಇಟ್ಕೊಳ್ಳಿ; ದೀಪಾವಳಿಗೆ ಕೊಟ್ಟ ಸೋನ್‌ಪಾಪ್ಡಿ ಬಾಕ್ಸನ್ನು ಕಂಪನಿಯ ಗೇಟ್ ಮುಂದೆ ಎಸೆದ ಉದ್ಯೋಗಿಗಳು
ಸಾಮಾನ್ಯವಾಗಿ ಕಂಪನಿ ಅಥವಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ದೀಪಾವಳಿಗೆ ಏನ್ ಗಿಫ್ಟ್ ಕೊಡ್ತಾರೆ ಎನ್ನುವ ಕುತೂಹಲವಿರುತ್ತದೆ. ಬೋನಸ್ ಕೊಟ್ಟರೆ ಖುಷಿಯೇ ಎಲ್ಲೇ ಮೀರುತ್ತದೆ. ಆದರೆ ಇಲ್ಲೊಂದು ಕಡೆ ಮಾಲೀಕ ನೀಡಿದ ಗಿಫ್ಟ್ ನೋಡಿ ಸಿಬ್ಬಂದಿಗಳು ಶಾಕ್ ಆಗಿದ್ದಾರೆ. ಕೊನೆಗೆ ಅಸಮಾಧಾನದಿಂದ ದೀಪಾವಳಿ ಉಡುಗೊರೆಯನ್ನು ಕಂಪನಿಯ ಗೇಟ್ ಮುಂದೆಯೇ ಎಸೆದು ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಚಂಡೀಗಢ, ಅಕ್ಟೋಬರ್ 22: ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಮಾಲೀಕರು ತಮ್ಮ ಸಂಸ್ಥೆ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡ್ತಾರೆ. ಸಿಹಿತಿಂಡಿ, ಪಟಾಕಿ, ಬೋಸನ್ ಹೀಗೆ ವಿವಿಧ ಗಿಫ್ಟ್ ನೀಡಿ ಉದ್ಯೋಗಿಗಳನ್ನು ಖುಷಿ ಪಡಿಸುತ್ತಾರೆ. ಆದರೆ ಹರಿಯಾಣದ (Haryana) ಸೋನಿಪಪ್‌ನ ಗನ್ನೌರ್ ಕೈಗಾರಿಕಾ ಪ್ರದೇಶಲ್ಲಿನ ಕಾರ್ಖಾನೆಯೊಂದರ ಮಾಲೀಕ ನೀಡಿದ್ದ ಉಡುಗೊರೆಯನ್ನು ಉದ್ಯೋಗಿಗಳು ಸಂಸ್ಥೆಯ ಗೇಟ್ ಮುಂದೆ ಎಸೆದು ಹೋಗಿದ್ದಾರೆ. ಹೌದು, ಸೋನ್‌ಪಾಪ್ಡಿ ಬಾಕ್ಸ್‌ಗಳನ್ನು ನೀಡಿರುವುದೇ ಸಿಬ್ಬಂದಿಗಳು ಈ ರೀತಿ ವರ್ತಿಸಲು ಕಾರಣ ಎನ್ನಲಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಮಾಲೀಕ ಕೊಟ್ಟ ಗಿಫ್ಟ್ ನೋಡಿ ಉದ್ಯೋಗಿಗಳು ಮಾಡಿದ್ದೇನು?
WorkPandemic ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸೋನಿಪತ್‌ನ ಗನ್ನೌರ್‌ನಲ್ಲಿರುವ ಖಾಸಗಿ ಕಾರ್ಖಾನೆಯ ಮುಂದೆ ಸೋನ್‌ಪಾಪ್ಡಿ ಬಾಕ್ಸ್ ಗಳನ್ನು ಎಸೆದು ಹೋಗುತ್ತಿರುವ ದೃಶ್ಯವನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Diwali Kalesh
A company gave its employees the famous most hated alleged Mithai called Soan Papdi
The employees threw the Soan Papdi boxes at the gate of the company.
Soan Papdi deserves this insult 🙂
What is your opinion on alleged mithai called soan papdi? pic.twitter.com/HSRPDC322r
— Woke Eminent (@WokePandemic) October 21, 2025
ಇದನ್ನೂ ಓದಿ:ದೀಪಾವಳಿಯಂದು ದೆಹಲಿ ಜಗಮಗಿಸುತ್ತಿದೆ, ಬೆಂಗಳೂರು ಮಂಕಾಗಿದೆ, ಕಾರಣವೇನು?
ಅಕ್ಟೋಬರ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ 1.4 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರರೊಬ್ಬರು ಸೋನ್‌ಪಾಪ್ಡಿ ಅಗ್ಗವಾಗಿದೆ, ಅದಕ್ಕೆ ನೀಡಿರಬೇಕು ಎಂದಿದ್ದಾರೆ. ಇನ್ನೊಬ್ಬರು ಮಾಲೀಕ ನೀಡಿದ ಉಡುಗೊರೆಯನ್ನು ಪ್ರೀತಿಯನ್ನು ಸ್ವೀಕರಿಸಿ, ಈ ರೀತಿ ವರ್ತನೆ ಒಳ್ಳೆಯದಲ್ಲ ಎಂದು ಬುದ್ಧಿ ಮಾತು ಹೇಳಿದ್ದಾರೆ. ಮತ್ತೊಬ್ಬರು, ನಿಮಗೆ ಬೇಡವಾದರೆ ಬಡವರಿಗೆ ದಾನ ಮಾಡಿ. ಆಹಾರ ಪದಾರ್ಥಗಳನ್ನು ಎಸೆಯುವುದು ಆಹಾರಕ್ಕೆ ಮಾಡುವ ಅವಮಾನ. ದೇಶದಲ್ಲಿ ಲಕ್ಷಾಂತರ ಜನರು ಪ್ರತಿದಿನ ಹಸಿವಿನಿಂದ ಬಳಲುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:59 am, Wed, 22 October 25








