20 ನಿಮಿಷಗಳಲ್ಲಿ 14 ಕಿ.ಮೀ ತಲುಪಿದೆ, ದೀಪಾವಳಿಯಿಂದ ಬೆಂಗಳೂರು ಖಾಲಿ ಖಾಲಿ ಎಂದ ಟೆಕ್ಕಿ
ದೀಪಾವಳಿ ರಜೆ ಕಾರಣ ಬೆಂಗಳೂರು ಸಂಪೂರ್ಣ ಖಾಲಿಯಾಗಿದೆ, ಯಾವುದೇ ಟ್ರಾಫಿಕ್ ಇಲ್ಲ. ಇದರ ಬಗ್ಗೆ ಬೆಂಗಳೂರಿನ ಟೆಕ್ಕಿಯೊಬ್ಬರು ಆಟೋದಲ್ಲಿ ಪ್ರಯಾಣಿಸುತ್ತಾ ಮಾಡಿದ ವಿಡಿಯೋ ವೈರಲ್ ಆಗಿದೆ. 14 ಕಿ.ಮೀ ದೂರವನ್ನು ಕೇವಲ 20 ನಿಮಿಷಗಳಲ್ಲಿ ತಲುಪಿದ್ದಾಗಿ ಅವರು ಹಂಚಿಕೊಂಡಿದ್ದಾರೆ. ನಗರ ನಿವಾಸಿಗಳು ಈ ಶಾಂತ ವಾತಾವರಣಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ, ಕೆಲವರು ಸಂತಸಗೊಂಡರೆ, ಇನ್ನು ಕೆಲವರು ಹಳೆಯ ಬೆಂಗಳೂರನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರು, ಅ.20: ಬೆಂಗಳೂರು (Bengaluru) ಖಾಲಿ ಖಾಲಿ, ಟ್ರಾಫಿಕ್, ಜನ, ವಾಹನಗಳಿಂದ ತುಂಬಿದ್ದ ಬೆಂಗಳೂರು ಇಂದು ತುಂಬಾ ಶಾಂತವಾಗಿದೆ. ಇದಕ್ಕೆಲ್ಲ ಕಾರಣ ದೀಪಾವಳಿ, (Diwali Peace) ಎಲ್ಲರೂ ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿಗೆ ಹೋಗಿದ್ದಾರೆ. ಇನ್ನು ಸಾಲು ಸಾಲು ರಜೆ ಇರುವುದರಿಂದ ಮನೆಯಲ್ಲೇ ದೀಪಾವಳಿ ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರು ಪ್ರಶಾಂತವಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬೆಂಗಳೂರಿನ ಟೆಕ್ಕಿ ಒಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ಈ ವಿಡಿಯೋವನ್ನು ಮಾಡಿದ್ದಾರೆ. ದೀಪಾವಳಿಯ ಕಾರಣ ಇಡೀ ಬೆಂಗಳೂರು ಖಾಲಿ ಖಾಲಿಯಾಗಿದೆ. ಈ ಕಾರಣದಿಂದ ಕೇವಲ 20 ನಿಮಿಷಗಳಲ್ಲಿ 14 ಕಿ.ಮೀ ತಲುಪಿದ್ದೇನೆ ಎಂದು ಹಂಚಿಕೊಂಡಿದ್ದಾರೆ.
ಇನ್ನು ಈ ಕ್ಲಿಪ್ ನೋಡಿ ಹಲವು ನಗರ ವಾಸಿಗಳು ಖುಷಿ ಪಟ್ಟಿದ್ದಾರೆ. ಬೆಂಗಳೂರಿನ ಬೀದಿಗಳು ಎಷ್ಟು ಶಾಂತವಾಗಿದೆ. ಜನದಟ್ಟಣೆಯಿಂದ ಕೂಡಿದ ರಸ್ತೆಗಳನ್ನು ಖಾಲಿ ಇರುವುದನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಬೆಂಗಳೂರು ಪ್ರತಿದಿನ ಹೀಗೆಯೇ ಇದ್ದರೆ ಎಷ್ಟು ಚಂದ ಎಂದು ಹೇಳಿದ್ದಾರೆ. ಈ ವಿಡಿಯೋ 53 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಬೆಂಗಳೂರಿನಲ್ಲಿ ಕೊರೋನಾ ನಂತರ ಇದೇ ಮೊದಲು ಅನ್ನಿಸುತ್ತದೆ, ಬೆಂಗಳೂರು ಇಷ್ಟ ಶಾಂತಾವಗಿರುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೀಪಾವಳಿ ಸಂಭ್ರಮ: ಹೂವು, ಹಣ್ಣು ಖರೀದಿಗೆ ಕೆ.ಆರ್. ಮಾರ್ಕೆಟ್ನಲ್ಲಿ ಮುಗಿಬಿದ್ದ ಜನ; ಟ್ರಾಫಿಕ್ ಜಾಮ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋ ನೋಡಿ ಹಲವು ಸೋಶಿಯಲ್ ಮೀಡಿಯಾ ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ನಮ ಬೆಂಗಳೂರು ಎಂದರೆ ಇದೇ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಇಲ್ಲ, ನಾನು ಈಗಲ್ಲೂ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದೇನೆ, ನಾವು ಏನಾದರೂ ಇನ್ನೊಂದು ಬೆಂಗಳೂರಿನಲ್ಲಿ ಇದ್ದೇವೆ ಎಂದು ಅನ್ನಿಸುತ್ತಿದೆ. ಇನ್ನೊಬ್ಬ ಬಳಕೆದಾರ ಮೆಟ್ರೋದಲ್ಲೂ ಜನ ಇಲ್ಲ, ತುಂಬಾ ನಿರಾಳವಾಗಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಇದು ನಿಜವಾದ ಬೆಂಗಳೂರು ಅಲ್ಲ, ನಮಗೆ ಮೊದಲು ಬೆಂಗಳೂರು ಬೇಕು ಎಂದು ಹೇಳಿದ್ದಾರೆ. ಬೇರೆ ಬೇರೆ ರಾಜ್ಯದಿಂದ ಬೆಂಗಳೂರಿಗೆ ಬಂದವರು ಊರಿಗೆ ಹೋಗಿದ್ದಾರೆ. ಅವರು ಶ್ವಾಶತವಾಗಿ ಅಲ್ಲೇ ಇರಲಿ, ಈ ಬೆಂಗಳೂರು ತುಂಬಾ ಶಾಂತವಾಗಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




