AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯಂದು ದೆಹಲಿ ಜಗಮಗಿಸುತ್ತಿದೆ, ಬೆಂಗಳೂರು ಮಂಕಾಗಿದೆ, ಕಾರಣವೇನು?

ಈ ದೀಪಾವಳಿ ಹಬ್ಬಕ್ಕೆ ದೆಹಲಿ ಮತ್ತು ಬೆಂಗಳೂರಿನ ರಾತ್ರಿ ನೋಟದ ವೈರಲ್ ವಿಡಿಯೋ ಹಲವು ಚರ್ಚೆ ಹುಟ್ಟುಹಾಕಿದೆ. ವಿಮಾನದಿಂದ ಚಿತ್ರೀಕರಿಸಿದ ಈ ವಿಡಿಯೋದಲ್ಲಿ ದೆಹಲಿ ಪ್ರಕಾಶಮಾನವಾಗಿ ಬೆಳಗಿದರೆ, ಬೆಂಗಳೂರು ಮಂಕಾಗಿದೆ. ವಿಮಾನ ನಿಲ್ದಾಣಗಳ ಭೌಗೋಳಿಕ ಸ್ಥಳ ಮತ್ತು ನಗರಗಳ ಹಬ್ಬದ ಸಂಭ್ರಮದ ವ್ಯತ್ಯಾಸಗಳು ಇದಕ್ಕೆ ಕಾರಣವೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ದೀಪಾವಳಿಯಂದು ದೆಹಲಿ ಜಗಮಗಿಸುತ್ತಿದೆ, ಬೆಂಗಳೂರು ಮಂಕಾಗಿದೆ, ಕಾರಣವೇನು?
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Oct 20, 2025 | 2:55 PM

Share

ದೇಶದಲ್ಲಿ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಎಲ್ಲ ಕಡೆ ದೀಪ ಹಾಗೂ ಲೈಟಿಂಗ್​​ಗಳು ಜಗಮಗಿಸುತ್ತಿದೆ. ಆದರೆ ಇದರಲ್ಲಿ ಬೆಂಗಳೂರು ಯಾಕೋ ಮಂಕಾಗಿದೆ. ಹೇಗೆ ಎಂಬುದನ್ನು ಈ ವೈರಲ್​ ಪೋಸ್ಟ್​​​​ ನೋಡಿದ್ರೆ ಗೊತ್ತಾಗುತ್ತದೆ. ದೀಪಾವಳಿ ಸಮಯದಲ್ಲಿ ದೆಹಲಿ (Delhi ) ಹಾಗೂ ಬೆಂಗಳೂರಿಗೂ (Bengaluru ) ಇರುವ ವ್ಯತ್ಯಾಸವನ್ನು ಇಲ್ಲಿ ಹೇಳಿದ್ದಾರೆ. ದೆಹಲಿ ದೀಪಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಹೊಳೆಯುತ್ತಿದೆ. ಆದರೆ ಬೆಂಗಳೂರು ಯಾಕೆ ಇಷ್ಟೊಂದು ಮಂಕಾಗಿದೆ. ಈ ಎರಡು ವ್ಯತ್ಯಾಸವನ್ನು ವಿಮಾನದಲ್ಲಿ ಪ್ರಯಾಣಿಸುವಾಗ ಚಿತ್ರೀಕರಿಸಲಾಗಿದೆ. ದೆಹಲಿ ಮತ್ತು ಬೆಂಗಳೂರಿನ ರಾತ್ರಿಯ ನೋಟ ಹೇಗಿದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ದೆಹಲಿ ತುಂಬಾ ಹೊಳೆಯುತ್ತಿದೆ. ಅಲಂಕಾರಿಕ ಬೆಳಕಿನಿಂದ ಪ್ರಕಾಶಮಾನವಾಗಿ ಬೆಳಗುತ್ತಿದೆ. ಆದರೆ ಬೆಂಗಳೂರು ಶಾಂತವಾಗಿರುವಂತೆ ತೋರುತ್ತಿದೆ. ಯಾವುದೇ ಬೆಳಕಿನಿಂದ ಹೊಳೆಯುತ್ತಿಲ್ಲ, ಎಲ್ಲವೂ ನೀರವ ಮೌನವಾಗಿದೆ. ಇದೀಗ ಈ ಪೋಸ್ಟ್​ ಹಲವು ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರ ಹಬ್ಬದ ಸಮಯದಲ್ಲೂ ಇಷ್ಟೊಂದು ಶಾಂತವಾಗಿದೆ ಎಂಬ ಪ್ರಶ್ನೆಗೆ ಸೋಶಿಯಲ್​ ಮೀಡಿಯಾ ಬಳಕೆದಾರರು ಉತ್ತರಿಸಿದ್ದಾರೆ.

ಇದನ್ನೂ ಓದಿ: 20 ನಿಮಿಷಗಳಲ್ಲಿ 14 ಕಿ.ಮೀ ತಲುಪಿದೆ, ದೀಪಾವಳಿಯಿಂದ ಬೆಂಗಳೂರು ಖಾಲಿ ಖಾಲಿ ಎಂದ ಟೆಕ್ಕಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ದೆಹಲಿ ನನ್ನ ಹೃದಯ ಗೆದ್ದಿದೆ ಎಂಬ ಶೀರ್ಷಿಕೆಯನ್ನು ಈ ಪೋಸ್ಟ್​​​ನಲ್ಲಿ ಹೇಳಲಾಗಿದೆ. ಈ ವಿಡಿಯೋ 3.1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ಹಲವು ಜನ ಈ ಪೋಸ್ಟ್​​ಗೆ ಕಮೆಂಟ್​​ ಮಾಡಿದ್ದಾರೆ. ಅನೇಕ ಬಳಕೆದಾರರು ಈ ವ್ಯತ್ಯಾಸಕ್ಕೆ ಭೌಗೋಳಿಕ ಕಾರಣ ಎಂದು ಹೇಳಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣವು ಮುಖ್ಯ ನಗರದಿಂದ ದೂರದಲ್ಲಿದೆ, ಆದರೆ ದೆಹಲಿಯ ವಿಮಾನ ನಿಲ್ದಾಣವು ಜನನಿಬಿಡ ಪ್ರದೇಶಗಳ ಪಕ್ಕದಲ್ಲಿದೆ. ದು ನೈಸರ್ಗಿಕವಾಗಿ ಪ್ರಕಾಶಮಾನವಾದ ವೈಮಾನಿಕ ನೋಟವನ್ನು ನೀಡುತ್ತದೆ ಎಂದು ಹಲವು ಜನ ಹೇಳಿದ್ದಾರೆ. ದೆಹಲಿಗೆ ಹಬ್ಬಗಳನ್ನು ಹೇಗೆ ಆಚರಣೆ ಮಾಡಬೇಕು ಎಂಬುದು ತಿಳಿದಿದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ದೀಪಾವಳಿಯಂದು ಸಹ ಬೆಂಗಳೂರು ಶಾಂತವಾಗಿರುತ್ತದೆ, ಅದು ನಮಗೆ ಇಷ್ಟ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಆಕಾಶದಿಂದ ದೆಹಲಿಯ ನೋಟವು ಮಾಂತ್ರಿಕವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 20 October 25

Follow Us
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?