Optical Illusion: ಹದ್ದಿನ ಕಣ್ಣು ಇರುವವರು ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಗುರುತಿಸಿ
ಮೆದುಳಿಗೆ ಕೆಲಸ ನೀಡುವಂತಹ, ತಲೆ ಕೆರೆದುಕೊಳ್ಳುವಂತೆ ಮಾಡುವ ಅನೇಕ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಶ್ವಾನವೊಂದು ಅಡಗಿ ಕುಳಿತಿದೆ. ಈ ಒಗಟು ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ನಿಮ್ಮಿಂದ ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.

ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭದ ಕೆಲಸ. ಇನ್ನು ಕೆಲವರಿಗೆ ಇಂತಹ ಒಗಟುಗಳೆಂದರೆ ನನ್ನಿಂದ ಸಾಧ್ಯವಿಲ್ಲ ಇದರತ್ತ ತಿರುಗಿಯೂ ನೋಡುವುದಿಲ್ಲ. ಆದರೆ ಇಂತಹ ಒಗಟಿನ ಆಟಗಳು ಮೆದುಳಿಗೆ ಕೆಲಸ ನೀಡುತ್ತದೆ. ನೀವು ಎಷ್ಟೇ ಬುದ್ಧಿವಂತರಾಗಿದ್ರೂ ಈ ಒಗಟುಗಳು ಕಣ್ಣನ್ನು ಮೋಸಗೊಳಿಸುತ್ತದೆ. ಆದರೆ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ನಿಮ್ಮ ಮೆದುಳನ್ನು ಶಾರ್ಪ್ ಆಗಿಸುತ್ತದೆ. ಇದೀಗ ಇಂತಹದ್ದೇ ಟ್ರಿಕ್ಕಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಕೂಡಲೇ ನಿಮ್ಮ ಕಣ್ಣಿಗೆ ಗಡ್ಡ ಬಿಟ್ಟ ವೃದ್ಧ ವ್ಯಕ್ತಿಯೊಬ್ಬ ಕಾಣಿಸುತ್ತಾನೆ. ಆದರೆ ಈ ವ್ಯಕ್ತಿಯ ಮುಖದ ನಡುವೆ ಸಾಕು ಪ್ರಾಣಿಯಾದ ನಾಯಿಯನ್ನು (Dog) ಮರೆ ಮಾಡಲಾಗಿದೆ. ನೀವು ಈ ಪ್ರಾಣಿಯನ್ನು ಹತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಲು ಸಾಧ್ಯವಾದರೆ ನೀವು ತುಂಬಾನೇ ಶಾರ್ಪ್ ಇದ್ದೀರಾ ಎನ್ನುವುದು ಖಚಿತವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ ಎಂದು ನೋಡಿ
@fortbendmd ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವೂ ಸರಳವಾಗಿ ಕಂಡರೂ ಇದು ನಿಜಕ್ಕೂ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ಮೊದಲ ನೋಟದಲ್ಲೇ ನಿಮ್ಮ ಕಣ್ಣಿಗೆ ಗಡ್ಡ ಬಿಟ್ಟ ವ್ಯಕ್ತಿಯೂ ಕಾಣಿಸುತ್ತಾನೆ. ಆದರೆ ಈ ವ್ಯಕ್ತಿಯೂ ಬಹುಶಃ ಕಣ್ಣು ಮಿಟುಕಿಸುತ್ತಿರುವಂತೆ ಹಾಗೂ ಆಳವಾದ ಆಲೋಚನೆಯಲ್ಲಿರುವಂತೆ ಕಾಣಿಸುತ್ತಾನೆ. ಆದರೆ ಇಲ್ಲಿರುವ ಸವಾಲು ಈ ಗಡ್ಡ ಬಿಟ್ಟ ವ್ಯಕ್ತಿಯ ಮುಖದಲ್ಲಿ ಶ್ವಾನವೊಂದು ಅಡಗಿ ಕುಳಿತಿದೆ. ಹತ್ತು ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು ಗುರುತಿಸಬೇಕು. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಉತ್ತರ ಹೇಳಲು ಪ್ರಯತ್ನಿಸಿ.
ಇದನ್ನೂ ಓದಿ:ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಗುರುತಿಸಿ ನೋಡೋಣ
ನಿಖರ ಉತ್ತರ ಹೇಳಲು ನಿಮಗೆ ಸಾಧ್ಯವಾಯಿತೇ?

ಗಡ್ಡ ಬಿಟ್ಟ ವ್ಯಕ್ತಿಯ ಮುಖದ ನಡುವೆ ಅಡಗಿರುವ ಶ್ವಾನವನ್ನು ಗುರುತಿಸಲು ನಿಮ್ಮದೃಷ್ಟಿಕೋನವನ್ನು ಬದಲಾಗಿಸಬೇಕು. ಈ ಚಿತ್ರದ ಒಂದೊಂದೇ ಭಾಗವನ್ನು ಝೋಮ್ ಮಾಡಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ. ಸೂಕ್ಷ್ಮವಾಗಿ ಗಮನಿಸಿದರೂ ಶ್ವಾನ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಹಾಗಿದ್ರೆ ನಿಮ್ಮ ಮೊಬೈಲ್ ಫೋನ್ ನ್ನು ತಲೆಕೆಳಗಾಗಿ ತಿರುಗಿಸಿ, ಮೂಳೆಯೊಂದಿಗೆ ಇರುವ ಶ್ವಾನವೊಂದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








