Optical Illusion: ಈ ಚಿತ್ರದಲ್ಲಿರುವ ತಪ್ಪನ್ನು 6 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ?
ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಈ ಒಗಟುಗಳು ಮೆದುಳಿಗೆ ಕಸರತ್ತು ನೀಡುವುದರೊಂದಿಗೆ ಮನಸ್ಸನ್ನು ರಿಫ್ರೆಶ್ ಆಗಿಸುತ್ತವೆ. ಇದೀಗ ಇಂತಹದ್ದೇ ಆಪ್ಟಿಕಲ್ ಭ್ರಮೆಯ ಚಿತ್ರವೊಂದು ವೈರಲ್ ಆಗಿದೆ. ಇದು ನೋಡಲು ಟ್ರಿಕ್ಕಿ ಅನಿಸದಿದ್ದರೂ ಈ ಚಿತ್ರದಲ್ಲಿ ಏನೋ ತಪ್ಪಿದೆ. ಅದನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟನ್ನು ನೀವು ಬಿಡಿಸಲು ಸಿದ್ಧವಿದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.

ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್ ಇಲ್ಯೂಷನ್ ನಂತಹ (Optical Illusion) ಒಗಟಿನ ಆಟಗಳತ್ತ ಆಸಕ್ತಿ ತೋರಿಸುತ್ತಾರೆ. ಇದು ಟೈಮ್ ಪಾಸ್ ವೊಂದಿಗೆ ನಿಮ್ಮ ಬುದ್ಧಿ ಹಾಗೂ ಕಣ್ಣು ದೃಷ್ಟಿ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುವ ಮೋಜಿನ ಆಟವಾಗಿದೆ. ನೀವು ಅತೀ ಬುದ್ಧಿವಂತರಾಗಿದ್ರೂ ವೀಕ್ಷಣಾ ಕೌಶಲ್ಯವನ್ನು ಅತ್ಯುತ್ತಮವಾಗಿದ್ರೆ ಈ ಒಗಟನ್ನು ಬಿಡಿಸಲು ನಿಮಗೆ ಸಾಧ್ಯವಾಗುತ್ತದೆ. ಈಗಾಗಲೇ ನೀವು ಇಂತಹದ್ದೇ ಸಾಕಷ್ಟು ಒಗಟಿನ ಚಿತ್ರ ಬಿಡಿಸುವಲ್ಲಿ ವಿಫಲರಾಗಿದ್ದೀರಬಹುದು. ಆದರೆ ಇದೀಗ ಕಾಲವೇನು ಮಿಂಚಿ ಹೋಗಿಲ್ಲ, ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ. ಆದರೆ ಈ ಚಿತ್ರದಲ್ಲಿರುವ ಸವಾಲು ತಪ್ಪನ್ನು ಕಂಡುಹಿಡಿಯುವುದು. ನೀವು ಈ ಒಗಟು ಬಿಡಿಸಲು ಇರುವ ಸಮಯ ಆರು ಸೆಕೆಂಡುಗಳು ಮಾತ್ರ. ಈಗಲೇ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸಲು ಸಿದ್ಧರಾಗಿ.
ಈ ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವಂತಿದೆ. ಹೌದು, ಈ ಚಿತ್ರದಲ್ಲಿ ಮೂವರು ವ್ಯಕ್ತಿಗಳು ಊಟದ ಟೇಬಲ್ ಬಳಿ ಇದ್ದಾರೆ. ಇಬ್ಬರೂ ಕುಳಿತುಕೊಂಡಿದ್ದರೆ, ಒಬ್ಬಾಕೆ ಕಾಫಿಯನ್ನು ಲೋಟಕ್ಕೆ ಹಾಕುವುದನ್ನು ಕಾಣಬಹುದು. ಈ ಚಿತ್ರವನ್ನು ನೋಡಿದಾಗ ಎಲ್ಲವೂ ಸಾಮಾನ್ಯವಾಗಿರುವಂತೆ ಕಾಣುತ್ತದೆ. ಆದರೆ ಈ ಚಿತ್ರದಲ್ಲಿ ಏನೋ ತಪ್ಪಿದೆ. ಆ ತಪ್ಪೇನು ಎನ್ನುವುದನ್ನು ನೀವು 6 ಸೆಕೆಂಡುಗಳ ಒಳಗೆ ಕಂಡು ಹಿಡಿಯಬೇಕು. ನೀವು ನಿರ್ದಿಷ್ಟ ಸಮಯದೊಳಗೆ ಈ ಸೂಕ್ಷ್ಮ ವಿಚಾರವನ್ನು ಕಂಡುಹಿಡಿಯಲು ಸಾಧ್ಯವಾದ್ರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು.
ಇದನ್ನೂ ಓದಿ:ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡು ಹಿಡಿಯಿರಿ
ಈ ಚಿತ್ರದಲ್ಲಿನ ತಪ್ಪು ಏನೆಂದು ತಿಳಿಯಿತೇ?

ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವುದು ಅಷ್ಟು ಸುಲಭ. ಸರಳವಾಗಿ ಕಂಡರೂ ಅಷ್ಟೇ ಕಠಿಣವಾಗಿರುತ್ತದೆ. ಈ ಒಗಟಿನ ಚಿತ್ರ ಬಿಡಿಸಲು ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ಊಟದ ಟೇಬಲ್ ಮುಂದೆ ಕುಳಿತಿರುವ ವ್ಯಕ್ತಿಗಳನ್ನೊಳಗೊಂಡ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಅಡಗಿರುವ ತಪ್ಪೇನು ಎಂದು ಕಂಡುಹಿಡಿಯಲು ಪ್ರಯತ್ನ ಪಡಿ. ಒಂದು ವೇಳೆ ಈ ಚಿತ್ರದಲ್ಲಿ ತಪ್ಪನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಮಹಿಳೆ ಹ್ಯಾಂಡಲ್ ಇಲ್ಲದ ಟೀ ಕೆಟಲ್ ಹಿಡಿದುಕೊಂಡಿದ್ದಾಳೆ. ಈ ಚಿತ್ರದಲ್ಲಿರುವ ತಪ್ಪನ್ನು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








