Video: ನಾನು ಹೇಳಿದ್ದಷ್ಟೇ ತರ್ಬೇಕು; ಡಿಮಾರ್ಟ್‌ಗೆ ಹೋದ ಗಂಡನಿಗೆ ದಿನಸಿ ಚೀಟಿಯಲ್ಲೇ ಎಚ್ಚರಿಕೆ ಸಂದೇಶ ನೀಡಿದ ಹೆಂಡ್ತಿ
ಮದ್ವೆ ಆದ್ಮೇಲೆ ಗಂಡ್ಮಕ್ಕಳ ಜೀವನ ಎನಿಸಿಕೊಂಡ್ರೆ ಅಯ್ಯೋ ಅನಿಸುತ್ತೆ. ಹೆಂಡ್ತಿ ಹೇಳಿದ ಹಾಗೆ ಕೇಳದೇ ಹೋದರೆ ಮನೆಯಲ್ಲಿ ಯುದ್ಧಗಳು ಆಗೋದು ಗ್ಯಾರಂಟಿ. ಇದೀಗ ಇಲ್ಲೊಬ್ಬಳು ಮಹಿಳೆ ಡಿ ಮಾರ್ಟ್ ಶಾಪಿಂಗ್‌ಗೆ ಹೋದ ಗಂಡನಿಗೆ ದಿನಸಿ ಪಟ್ಟಿಯ ಜೊತೆಗೆ ಒಂದು ಎಚ್ಚರಿಕೆಯ ಸಂದೇಶವನ್ನು ಬರೆದು ಖಡಕ್ ವಾರ್ನಿಂಗ್ ನೀಡಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಗಂಡನ ಪರಿಸ್ಥಿತಿ ನೆನೆದು ಬಿದ್ದು ಬಿದ್ದು ನಕ್ಕಿದ್ದಾರೆ.

ಮನೆಯ ಹಣಕಾಸನ್ನು ನಿಭಾಯಿಸಿಕೊಂಡು ಹೋಗುವವರೇ ಮಹಿಳೆ (Woman). ಗಂಡು ಮಕ್ಕಳು ಎಷ್ಟೇ ದುಡಿದು ತಂದ್ರೂ, ಮನೆ ಖರ್ಚು, ಮಕ್ಕಳ ಶಾಲೆಯ ಫೀಸ್, ಉಳಿತಾಯ ಹೀಗೆ ಎಲ್ಲಾ ಖರ್ಚು ವೆಚ್ಚಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವುದನ್ನು ಹೆಣ್ಣು ಮಕ್ಕಳು ಒಂದು ಹೆಜ್ಜೆ ಮುಂದೇ ಇರುತ್ತಾರೆ. ತಿಂಗಳಿಗೆ ಬೇಕಾದ ಸಾಮಗ್ರಿಯ ಪಟ್ಟಿಯಲ್ಲೂ ಲೆಕ್ಕಾಚಾರ ಮಾಡಿಯೇ ಅಗತ್ಯವಿರುವ ವಸ್ತುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಾರೆ. ಆದರೆ ಪತಿಯೂ ಏನಾದ್ರೂ ಹೆಚ್ಚಿಗೆ ಖರ್ಚು ಮಾಡಿದ್ರೆ ಸಹಜವಾಗಿ ಪತ್ನಿ ಬೈಯುವುದನ್ನು ನೀವು ನೋಡಿರಬಹುದು. ಆದರೆ ಮಹಿಳೆಯೊಬ್ಬಳು ತನ್ನ ಪತ್ನಿಗೆ ಹೇಗೆ ಎಚ್ಚರಿಕೆ ನೀಡಿದ್ದಾಳೆ ಎನ್ನುವುದಕ್ಕೆ ಇದುವೇ ಸಾಕ್ಷಿ. ತಿಂಗಳ ದಿನಸಿ ಸಾಮಗ್ರಿಗಳನ್ನು (grocery items) ಕೊಂಡುಕೊಳ್ಳಲು ಡಿಮಾರ್ಟ್ ಗೆ ಹೋದ ಪತಿಗೆ ಪತ್ನಿ ದಿನಸಿ ಪಟ್ಟಿಯನ್ನು ನೀಡಿದ್ದಾಳೆ. ಆದರೆ ಜೊತೆಗೆ ಈಪಟ್ಟಿಯಲ್ಲಿ ಬರೆದ ಕೆಲವು ಸಾಲುಗಳನ್ನು ನೋಡಿ ಪತಿಗೆನೇ ಶಾಕ್ ಆಗಿದೆ. ಅಷ್ಟಕ್ಕೂ ಅಂತಹದ್ದು ಏನಿದೆ ಎಂದು ನಿಮಗೆ ಅನಿಸಬಹುದು. ಆದರೆ ಈ ಸ್ಟೋರಿ ಓದಿ.
ದಿನಸಿ ಚೀಟಿಯಲ್ಲೇ ಗಂಡನಿಗೆ ಖಡಕ್ ವಾರ್ನಿಂಗ್
ಟ್ರಾವೆಲ್ ವಿಥ್ ರಾಘವ್ (travel_with_raghava) ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಸ್ಟ್ರಿಕ್ಟ್ ವೈಫ್ ಶೀರ್ಷಿಕೆಯನ್ನು ಬರೆಯಲಾಗಿದೆ. ಇಲ್ಲಿ ರಾಘವೇಂದ್ರ ಎಂಬ ವ್ಯಕ್ತಿಯೊಬ್ಬರು ಡಿಮಾರ್ಟ್‌ನಲ್ಲಿ ವಸ್ತುಗಳನ್ನು ಖರೀದಿಸಲು ಬಂದಿದ್ದಾರೆ. ಈ ವೇಳೆಯಲ್ಲಿ ಪತ್ನಿ ಬರೆದುಕೊಟ್ಟ ಚೀಟಿಯನ್ನು ಗೆಳೆಯನಿಗೆ ತೋರಿಸುವುದನ್ನು ಕಾಣಬಹುದು. ಇದೇ ಸಂದರ್ಭ ತಾವು ಖರೀದಿಸಿರುವ ವಸ್ತುಗಳ ಬಾಸ್ಕೆಟ್ ತೋರಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ಚೀಟಿಯಲ್ಲಿ ಮನೆಗೆ ಬೇಕಾದ ದಿನಸಿ ವಸ್ತುಗಳ ದೊಡ್ಡ ಲಿಸ್ಟ್ ಯೇ ಇದೆ. ಆದರೆ ಈ ಚೀಟಿಯ ಹಿಂಭಾಗದಲ್ಲಿ ಬೇರೆ ಪ್ರೊಡಕ್ಟ್ ತೆಗೆದುಕೊಂಡು ಬಂದ್ರೆ ಮನೆಗೆ ಸೇರಿಸುವುದಿಲ್ಲ ಎಂದು ಬರೆದಿರುವುದನ್ನು ನೀವು ನೋಡಬಹುದು. ಪತ್ನಿ ಬರೆದ ಈ ಸಾಲುಗಳನ್ನು ತನ್ನ ಗೆಳೆಯ ಶೇಖರ್‌ಗೆ ತೋರಿಸುತ್ತಾ, ಇದು ತೇಜು ಬರೆದುಕೊಟ್ಟ ಪಟ್ಟಿ. ಹಿಂದೆ ಏನೋ ಬರೆದಿದೆ ಅಲ್ಲವಾ ಅಂತ ನೋಡಿದ್ರೆ ಈ ರೀತಿ ಬರೆದಿದ್ದಾಳೆ. ಡಿಮಾರ್ಟ್‌ಗೆ ಬಂದಾಗೆಲ್ಲಾ ಕೆಲವೊಮ್ಮೆ ಬೇಡವಾದ ವಸ್ತು ತೆಗೆದುಕೊಂಡು ಹೋಗುತ್ತೇನೆ. ಅದಕ್ಕೆ ಹೀಗೆ ಬರೆದಿದ್ದಾಳೆ. ಇಬ್ಬರೂ ಕೂಡ ಈ ಸಾಲುಗಳನ್ನು ಓದಿ ಜೋರಾಗಿ ನಕ್ಕಿದ್ದಾರೆ. ಆ ಬಳಿಕ ಬೇಗ ಇಲ್ಲಿಂದ ಹೋಗೋಣ ಎಂದು ಗೆಳೆಯನಿಗೆ ಹೇಳುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:ಮನೆ, ಮಕ್ಕಳನ್ನು ನಿಭಾಯಿಸೋದ್ರಲ್ಲೇ ಅರ್ಧ ಜೀವನ ಕಳೆದು ಹೋಗ್ತದೆ ಎಂದ ಮಹಿಳೆ
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹೆಂಗೆ ಹೆಂಡ್ತಿ ಪವರ್ ಎಂದು ತಮಾಷೆ ಮಾಡಿದ್ದಾರೆ. ನೀವೇ ಅದೃಷ್ಟವಂತರು, ನಿಮ್ಮ ವೈಫ್ ಕರ್ಕೊಂಡು ಬಂದಿದ್ರೆ ಡಬಲ್ ಬಿಲ್ ಆಗ್ತಿತ್ತು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಹೋಮ್ ಮಿನಿಸ್ಟರ್ ಆರ್ಡರ್ ಆಗಿದೆ. ಮೀರೋ ಆಗಿಲ್ಲ ಅಲ್ವಾ ಸರ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








