Video: ಭಾರತದ ಸ್ಪೈಸಿ ಫುಡ್ ತಿಂದು ಟೊಮೊಟೊದಂತಾಯ್ತು ವಿದೇಶಿಗನ ಮುಖ
ಭಾರತೀಯರು ಮಸಾಲೆ ಪ್ರಿಯರು, ಹೀಗಾಗಿ ಖಾರ ಖಾರವಾದ ಆಹಾರ ತಿನ್ನಲು ಇಷ್ಟ ಪಡುತ್ತಾರೆ. ಆದರೆ ವಿದೇಶಿಗರಿಗೆ ಈ ಸ್ಪೈಸಿ ಫುಡ್ ಅಷ್ಟಾಗಿ ರುಚಿಸುವುದಿಲ್ಲ. ಇದೀಗ ಐರಿಶ್ ವ್ಯಕ್ತಿಯೂ ಮಸಾಲೆಯುಕ್ತ ಆಹಾರವನ್ನು ಸೇವಿಸಿದ್ದಾನೆ. ಆದರೆ ಆ ಬಳಿಕ ಈ ವಿದೇಶಿಗ ನೀಡಿದ ರಿಯಾಕ್ಷನ್ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸಾಮಾನ್ಯವಾಗಿ ಭಾರತಕ್ಕೆ ಬರುವ ವಿದೇಶಿಗರು (Foreigner) ಇಲ್ಲಿನ ಪ್ರವಾಸಿ ತಾಣಗಳಿಂದ ಹಿಡಿದು ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ವಿದೇಶಿಗರು ಇಲ್ಲಿನ ಮಸಾಲೆಯುಕ್ತ ಆಹಾರಗಳು (spicy food) ಅಷ್ಟಾಗಿ ಇಷ್ಟ ಪಡಲ್ಲ. ಇಲ್ಲಿನ ಆಹಾರ ಪದಾರ್ಥಗಳನ್ನು ಸವಿದ ಬಳಿಕ ಈ ವಿದೇಶಿಗರು ಮುದ್ದಾಗಿ ರಿಯಾಕ್ಷನ್ ನೀಡುವುದನ್ನು ನೀವು ನೋಡಿರಬಹುದು. ಐರಿಶ್ ವ್ಯಕ್ತಿಯೊಬ್ಬ ಭಾರತಕ್ಕೆ ಬಂದ ವೇಳೆ ಭಾರತೀಯ ಆಹಾರವನ್ನು ಸವಿದಿದ್ದು, ಕೊನೆಗೆ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ವಿದೇಶಿ ವ್ಯಕ್ತಿಯ ಆಹಾರ ಸವಿಯುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇನ್ನೊಮ್ಮೆ ಈ ಆಹಾರ ಸೇವಿಸಬೇಡಿ ಎಂದು ಸಲಹೆ ನೀಡಿದ್ದಾರೆ.
ಸ್ಪೈಸಿ ಫುಡ್ ತಿಂದ ವಿದೇಶಿಗನ ರಿಯಾಕ್ಷನ್ ನೋಡಿ
@eamonjohn ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ನಾನು ಮಸಾಲೆಯನ್ನು ನಿಭಾಯಿಸಬಲ್ಲೆ ಎಂದು ನಾನು ಭಾವಿಸಿದೆ. ಮಸಾಲೆ ನನ್ನನ್ನು ನಿಭಾಯಿಸಿದೆ ಎಂದು ತಿಳಿದುಬಂದಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಐರಿಶ್ ವ್ಯಕ್ತಿ ಭಾರತೀಯ ಸ್ನೇಹಿತನೊಂದಿಗೆ ರೆಸ್ಟೋರೆಂಟ್‌ನಲ್ಲಿ ಮಸಾಲೆಯುಕ್ತ ಆಹಾರವನ್ನು ಸಂತೋಷದಿಂದ ಸವಿಯುತ್ತಿರುವುದನ್ನು ನೋಡಬಹುದು. ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಸ್ಪೈಸಿ ಫುಡ್ ಸವಿದ ಬಳಿಕ ಖಾರ ತಾಳಲಾರದೇ ತನ್ನ ತುಟಿಗಳಿಗೆ ಕೆಚಪ್ ಹಚ್ಚಿಕೊಳ್ಳುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಅಷ್ಟೇ ಅಲ್ಲದೇ ಖಾರವನ್ನು ಸಹಿಸಿಕೊಳ್ಳಲಾಗದೇ ಈ ವ್ಯಕ್ತಿಯ ಮುಖವು ಟೊಮೊಟೊದಂತೆ ಕೆಂಪಾಗಿದ್ದು, ಬೆವತು ಹೋಗಿದ್ದಾನೆ. ಜೋರಾಗಿ ಕಿರುಚಾಡಲು ಶುರು ಮಾಡಿದ್ದಾನೆ. ಕೊನೆಗೆ ರೆಸ್ಟೋರೆಂಟ್ ಪ್ರವೇಶದ್ವಾರದಲ್ಲಿ ಕುಳಿತು ಸಿಗರೇಟ್ ಸೇದಿದ್ದಾನೆ. ಈ ವಿದೇಶಿಗ ಮಸಾಲೆಯುಕ್ತ ರುಚಿಯಿಂದ ಅಸ್ವಸ್ಥನಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ:ಮೊದಲ ಬಾರಿಗೆ ಭಾರತೀಯ ರೈಲಿನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ
ಈ ವಿಡಿಯೋ ಇಪ್ಪತ್ತನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ವ್ಯಕ್ತಿ ಅಂತಹದ್ದು ಏನು ಆರ್ಡರ್ ಮಾಡಿದ್ದಾನೆ ಎಂದಿದ್ದಾರೆ. ಇನ್ನೊಬ್ಬರು ಈ ವ್ಯಕ್ತಿ ತಿನ್ನುವ ಮೂಲಕ ಕ್ಯಾಲೊರಿಗಳನ್ನು ಬರ್ನ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ವಿದೇಶಿಗ ಸ್ಪೈಸಿ ಆಹಾರವನ್ನು ಇಷ್ಟ ಪಡುತ್ತಾರೆ ಎಂದು ಕಾಣಿಸುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Wed, 29 October 25








