Optical Illusion: ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ನಿಂಬೆ ಹಣ್ಣು ಎಲ್ಲಿದೆ ಎಂದು ಹೇಳಿ ನೋಡೋಣ
ಮೆದುಳಿಗೆ ಕೆಲಸ ನೀಡುವ ಮ್ಯಾಥ್ಸ್ ಪಝಲ್ ಗೇಮ್‌ಗಳು, ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಒಗಟಿನ ಚಿತ್ರಗಳನ್ನು ಬಿಡಿಸುವತ್ತ ಹೆಚ್ಚಿನವರು ಆಸಕ್ತಿ ತೋರಿಸುತ್ತಾರೆ. ನೀವು ಕೂಡ ಇಂತಹ ಒಗಟಿನ ಚಿತ್ರಗಳತ್ತ ಆಸಕ್ತಿ ಹೊಂದಿದ್ದೀರಿ ಎಂದು ಭಾವಿಸುತ್ತೇವೆ. ಹಾಗಾದ್ರೆ ಈ ತರಕಾರಿ ಅಂಗಡಿಯಲ್ಲಿರುವ ನಿಂಬೆಹಣ್ಣನ್ನು ಗುರುತಿಸಬಲ್ಲಿರಾ. ಒಮ್ಮೆ ಪ್ರಯತ್ನಿಸಿ ನೋಡಿ.

ನಿಮ್ಮ ದೃಷ್ಟಿ ಅತ್ಯುತ್ತಮವಾಗಿದೆಯೇ, ನೀವು ಬುದ್ಧಿವಂತರೇ ತಿಳಿಯಲು, ಏಕಾಗ್ರತೆಯನ್ನು ಪರೀಕ್ಷಿಸಲು ಸಹಕಾರಿಯಾಗಿರುವುದೇ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು. ಸೋಷಿಯಲ್ ಮೀಡಿಯಾದಲ್ಲಿ ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಸಾಕಷ್ಟು ಚಿತ್ರಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ತುಂಬಾನೇ ಕುತೂಹಲಕಾರಿಯಾಗಿರುವ ಈ ಒಗಟಿನ ಆಟಗಳು ಮಜನೇ ಬೇರೆ. ನೀವು ಕೂಡಾ ಬುದ್ಧಿವಂತಿಕೆಗೆ ಸವಾಲೊಡ್ಡುವ ಇಂತಹ ಮನೋರಂಜನಾತ್ಮಕ ಆಪ್ಟಿಕಲ್ ಇಲ್ಯೂಷನ್ ಆಟಗಳನ್ನು ಆಡಿರುತ್ತೀರಿ ಅಲ್ವಾ. ಇದೀಗ ನಿಮಗೆ ಸವಾಲು ಹಾಕುವಂತಿರುವ ಚಿತ್ರವೊಂದು ವೈರಲ್ ಆಗಿದ್ದು ತರಕಾರಿ ಅಂಗಡಿಯಲ್ಲಿ ನಿಂಬೆ ಹಣ್ಣು ಎಲ್ಲಿದೆ ಎಂದು ಕಂಡುಹಿಡಿಯಬಹುದು. ಸುಲಭವಾಗಿರುವಂತೆ ಕಾಣುವ ಈ ಟ್ರಿಕ್ಕಿ ಒಗಟನ್ನು ಬಿಡಿಸಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ಏನಿದೆ ಎಂದು ನೋಡಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ತರಕಾರಿ ಅಂಗಡಿಯನ್ನು ಕಾಣಬಹುದು. ಈ ಅಂಗಡಿಯಲ್ಲಿ ವಿವಿಧ ತರಕಾರಿಗಳಿದ್ದು, ಆದರೆ ಇಲ್ಲಿ ಒಂದೇ ಒಂದು ನಿಂಬೆ ಹಣ್ಣು ಇದೆ. ನಿಮಗಿರುವ ಸವಾಲು ಆ ನಿಂಬೆ ಹಣ್ಣು ಎಲ್ಲಿದೆ ಎಂದು ಕಂಡುಹಿಡಿಯುವುದು. ನೀವು 5 ಸೆಕೆಂಡುಗಳಲ್ಲಿ ನಿಂಬೆಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನಾವು ಹ್ಯಾಟ್ಸ್ ಆಫ್ ಹೇಳುತ್ತೇವೆ.
ಈ ಸವಾಲನ್ನು ಸ್ವೀಕರಿಸಿದ್ದೀರಾ?
ತರಕಾರಿ ಅಂಗಡಿಯಲ್ಲಿರುವ ತರಕಾರಿಗಳನ್ನು ಗಮನಿಸಿದ್ದೀರಿ ಅಲ್ವಾ. ಇದೀಗ ಸೂಕ್ಷವಾಗಿ ಗಮನಿಸಿ, ಈ ಅಂಗಡಿಯಲ್ಲಿ ನಿಂಬೆ ಹಣ್ಣು ಎಲ್ಲಿದೆ ಎಂಬುದನ್ನು ಹೇಳಿ ಜಾಣರು ಎನಿಸಿಕೊಳ್ಳಿ.
ಇದನ್ನೂ ಓದಿ:ಈ ಚಿತ್ರದಲ್ಲಿರುವ ತಪ್ಪನ್ನು 6 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ?
ನಿಂಬೆ ಹಣ್ಣನ್ನು ಹುಡುಕಲು ಸಾಧ್ಯವಾಯಿತೇ?

ಕಣ್ಣು ಬಿಟ್ಟು ಈ ತರಕಾರಿ ಅಂಗಡಿಯ ಮೂಲೆ ಮೂಲೆ ನೋಡಿದ್ರೂ ನಿಂಬೆ ಹಣ್ಣು ಎಲ್ಲಿದೆ ಎಂದು ಇನ್ನು ಹುಡುಕುತ್ತಿದ್ದೀರಾ. ನೀವು ನಿಂಬೆಹಣ್ಣನ್ನು ಹುಡುಕಲು ಸಾಧ್ಯವಾಗಿದ್ರೆ ನಿಮಗೆ ಅಭಿನಂದನೆಗಳು. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬ್ಯಾಗ್ ಹಾಕಿಕೊಂಡು ನಿಂತುಕೊಂಡಿರುವ ಹುಡುಗಿಯ ಪಕ್ಕದಲ್ಲಿರುವ ಚೇಲದಲ್ಲಿ ನಿಂಬೆ ಹಣ್ಣಿದೆ. ಈ ನಿಂಬೆ ಹಣ್ಣು ಎಲ್ಲಿದೆ ಎಂದು ಈ ಮೇಲಿನ ಚಿತ್ರದಲ್ಲಿ ಗುರುತಿಸಿದ್ದೇವೆ. ನಿಮ್ಮ ಕಣ್ಣಿಗೆ ನಿಂಬೆ ಹಣ್ಣು ಕಾಣಿಸಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








