Video: ಮನೆ, ಮಕ್ಕಳನ್ನು ನಿಭಾಯಿಸೋದ್ರಲ್ಲೇ ಅರ್ಧ ಜೀವನ ಕಳೆದು ಹೋಗ್ತದೆ ಎಂದ ಮಹಿಳೆ
ಮದ್ವೆಯಾದ ಮೇಲೆ ಹೆಣ್ಣು ಮಕ್ಕಳ ಜವಾಬ್ದಾರಿ ಹೆಚ್ಚಾಗುತ್ತದೆ. ಮಕ್ಕಳು ಆದ ಮೇಲಂತೂ ಕೇಳುವುದೇ ಬೇಡ. ಮನೆ, ಮಕ್ಕಳು ಸಂಸಾರ ಹೀಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವಷ್ಟರಲ್ಲಿ ಈ ಜೀವನವೇ ಸಾಕು ಎಂದೆನಿಸುತ್ತದೆ. ಇಲ್ಲೊಬ್ಬ ಮಹಿಳೆಯೂ ತನ್ನ ದೈನಂದಿನ ಕೆಲಸ ಹೇಗಿರುತ್ತದೆ, ತಾಯಿ ಜೀವನ ಎಷ್ಟು ಕಷ್ಟ ಎಂದು ವಿವರಿಸಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹೆಣ್ಣಾಗಿ ಹುಟ್ಟಿದ ಮೇಲೆ ಜೀವನ ಪ್ರತಿಯೊಂದು ಪಾತ್ರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಮದ್ವೆಯಾದ ಬಳಿಕ ಹೆಂಡ್ತಿಯಾಗಿ, ಸೊಸೆಯಾಗಿ ಹಾಗೂ ತಾಯಿಯನ್ನು (mother) ಸಂಸಾರವನ್ನು ನಿಭಾಯಿಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಆದರೆ ಕೆಲಸಕ್ಕೆ ಹೋಗುವ ಗಂಡಸರು ಮನೆಯಲ್ಲಿ ತಮ್ಮ ಮಡದಿಯೂ ಆರಾಮಾಗಿಯೇ ಇರ್ತಾಳೆ ಅಂದುಕೊಳ್ತಾರೆ. ಕೆಲ ಗಂಡಸರು ಜಗಳವಾದಾಗ ಇಂತಹ ಮಾತನ್ನು ಆಡುವುದನ್ನು ನೀವು ನೋಡಿರುತ್ತೀರಿ. ಮನೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳು (young woman) ಮನೆಯಲ್ಲಿನ ವಾಸ್ತವ ಸ್ಥಿತಿ, ತಾಯಂದಿರ ಜೀವನ ಹಾಗೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗೋದು ಸುಲಭವಲ್ಲ ಎಂದು ವಾಸ್ತವ ಸ್ಥಿತಿಯ ತೆರೆದಿಟ್ಟಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಬಹುತೇಕರು ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ.
ತಾಯಿಯ ಜೀವನ ಕಷ್ಟ ಎಂದು ವಿವರಿಸಿದ ಮಹಿಳೆ
ಪ್ರಾನ್ವಿ ಕಿ ಮಾ (pranvi ki maa) ಹೆಸರಿನ ಖಾತೆಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡುವ ತಾಯಿಯೊಬ್ಬಳು ತಮ್ಮ ದೈನಂದಿನ ಜೀವನದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಮಹಿಳೆ ಇಬ್ಬರು ಮಕ್ಕಳನ್ನು ನೋಡಕೊಳ್ಳಬೇಕು. ಇಲ್ಲಿ ತನ್ನ ಜ್ವರದಿಂದ ಬಳಲುತ್ತಿರುವ ಮಗುವನ್ನು ನೋಡಿಕೊಳ್ಳುತ್ತಾ ಅಡುಗೆ ಮಾಡುವುದನ್ನು ಕಾಣಬಹುದು. ಈ ಮಹಿಳೆ ತನ್ನ ಇನ್ನೊಂದು ಪುಟ್ಟ ಮಗುವು ಮಲಗುವ ಕೋಣೆಯಲ್ಲಿ ಒಂಟಿಯಾಗಿ ಆಟವಾಡುವುದನ್ನು ಸಹ ತೋರಿಸಿದ್ದಾಳೆ. ಇದು ತಾಯಂದಿರ ಜೀವನ, ಒಂದು ಮಗುವಿಗೆ ಅನಾರೋಗ್ಯ, ಇನ್ನೊಂದು ಕಡೆ ಅಡುಗೆ ಮಾಡಬೇಕು. ಇಬ್ಬರೂ ಮಕ್ಕಳನ್ನು ನೋಡಿಕೊಳ್ಳಬೇಕು. ಮನೆಯಿಂದಲೂ ಕೆಲಸ ಮಾಡಬೇಕು. ನಾನು ಕೆಲಸ ಮಾಡುವ ಮಹಿಳೆ. ಇದು ತಾಯಿಯ ಜೀವನ ಹೀಗಿದೆ ಎಂದು ವಿವರಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: ನಾನು ಅಮ್ಮ ಎಂದು ಪಿಸುಗುಟ್ಟುತ್ತಿದ್ದೇನೆ; ಅಗಲಿದ ತಾಯಿಯನ್ನು ನೆನೆದು ಕಣ್ಣೀರಿಟ್ಟ ಮಹಿಳೆ
ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಮದುವೆಯಾಗಬೇಡಿ ಎಂದು ನೆನಪಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ಇನ್ನೊಬ್ಬರು, ಈ ಹಂತದಲ್ಲಿ ಗಂಡಂದಿರು ಏಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಪರಿಸ್ಥಿತಿ ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯ ಎಂದು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Tue, 28 October 25








