Video: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಬಿದ್ದ ವ್ಯಕ್ತಿ, ರಕ್ಷಣೆಗೆ ಧಾವಿಸಿದ ರೈಲ್ವೆ ಸಿಬ್ಬಂದಿಗಳು
ರೈಲು ಬರುವ ವೇಳೆ ಹಳಿ ದಾಟುವುದು ಅಥವಾ ರೈಲು ಚಲಿಸುತ್ತಿರುವ ವೇಳೆ ಓಡಿಕೊಂಡು ಹೋಗಿ ರೈಲನ್ನು ಹತ್ತುವ ಹುಚ್ಚು ಸಾಹಸ ಮಾಡ್ತಾರೆ. ಇದರಿಂದ ಅಪಾಯವೇ ಹೆಚ್ಚು. ಇಲ್ಲೊಬ್ಬ ವ್ಯಕ್ತಿ ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದು, ರೈಲ್ವೆ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಪ್ರಯಾಣಿಕನ ಜೀವ ಉಳಿಸಿದಿದೆ. ಈ ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಹೈದರಾಬಾದ್, ಅಕ್ಟೋಬರ್ 29: ರೈಲಿನಲ್ಲಿ (train) ಪ್ರಯಾಣವೇ ಎಷ್ಟು ಜಾಗರೂಕರಾಗಿದ್ರು ಸಾಲದು. ಕೆಲವರು ರೈಲಿನ ಫೂಟ್ ಬೋರ್ಡ್ ಬಳಿ ನಿಂತು ನೇತಾಡುವುದು, ಬಾಗಿಲ ಬಳಿ ಕುಳಿತುಕೊಳ್ಳುವಂತಹ ತಪ್ಪುಗಳನ್ನು ಮಾಡ್ತಾರೆ. ಇನ್ನು ಕೆಲವರು ಚಲಿಸುವ ರೈಲನ್ನು ಹತ್ತಲು ಹೋಗುವುದು ಇಲ್ಲದಿದ್ದರೆ ಇಳಿಯಲು ಹೋಗಿ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಹೌದು, ಹೈದರಾಬಾದ್ ನಗರದ ಕಾಚೆಗುಡ ರೈಲು ನಿಲ್ದಾಣದಲ್ಲಿ (Kacheguda railway station of Hyderabad) ಭಾನುವಾರ ರಾತ್ರಿ ಆಘಾತಕಾರಿ ಘಟನೆ ನಡೆದಿದೆ. ರೈಲು ಚಲಿಸುತ್ತಿರುವಾಗಲೇ ಇಳಿಯಲು ಮುಂದಾದ ವ್ಯಕ್ತಿಯೂ ಆಯತಪ್ಪಿ ಕೆಳಗೆ ಬಿದಿದ್ದಾರೆ. ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿಗಳು ದೇವರಂತೆ ಬಂದು ಕೆಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ
ವಾರಂಗಲ್‌ನ ಸಾದುಲಾ ಮಣಿದೀಪ್ (31) ಬೆಂಗಳೂರಿಗೆ ಹೋಗಲು ಕಾಚೆಗುಡ ರೈಲು ನಿಲ್ದಾಣಕ್ಕೆ ಬಂದಿದ್ದು ಈ ವೇಳೆ ಈ ಘಟನೆ ನಡೆದಿದೆ. ರೈಲು ಬಂದಾಗ ಗಡಿಬಿಡಿಯಲ್ಲಿದ್ದ ಅವರು ಸಾಮಾನ್ಯ ಟಿಕೆಟ್ ಖರೀದಿಸಿ ಎಸಿ ಪ್ರಥಮ ದರ್ಜೆ ಕೋಚ್ HA1 ಹತ್ತಿದ್ದಾರೆ. ತಾನು ಬೇರೆ ರೈಲ್ ಹತ್ತಿರುವ ಬಗ್ಗೆ ಅರಿವಿಗೆ ಬರುತ್ತಿದ್ದಂತೆ ಮಣಿದೀಪ್, ರೈಲು ಚಲಿಸುತ್ತಿರುವಾಗ ಇಳಿಯಲು ಮುಂದಾಗಿದ್ದು, ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಗೋವಿಂದ ರಾವ್ ಮತ್ತು ಆರ್ ಪಿಎಫ್ ಕಾನ್‌ಸ್ಟೆಬಲ್ ಸುಶ್ಮಿತಾ ಓಡೋಡಿ ಬಂದು ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಕಚೆಗುಡ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಪ್ರಕಾರ, ರೈಲ್ವೆ ಸಿಬ್ಬಂದಿಯ ಚಾಣಾಕ್ಷತನದಿಂದಲೇ ಮಣಿದೀಪ್ ಅವರ ಜೀವ ಉಳಿಯಿತು. ರೈಲು ಚಲಿಸುತ್ತಿರುವಾಗ ಹತ್ತುವುದು, ಇಳಿಯುವುದು ತುಂಬಾ ಅಪಾಯಕಾರಿಯಾಗಿರುವುದರಿಂದ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಅಜಾಗರೂಕ ಕೃತ್ಯಗಳಲ್ಲಿ ತೊಡಗದಂತೆ ಪ್ರಯಾಣಿಕರು ಎಚ್ಚರ ವಹಿಸಬೇಕು. ರೈಲ್ವೆ ಸಿಬ್ಬಂದಿ ಜಾಣತನದಿಂದ ವರ್ತಿಸದಿದ್ದರೆ, ಈ ಘಟನೆಯಲ್ಲಿ ಮಣಿದೀಪ್ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದಿದ್ದಾರೆ.
ಇದನ್ನೂ ಓದಿ:ರೈಲಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಯುವಕ, ನೀವು ದೇವರ ರೂಪ
ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಅಧಿಕಾರಿಗಳು ಆಗಾಗ್ಗೆ ಅಭಿಯಾನಗಳನ್ನು ನಡೆಸುತ್ತಿದ್ದರೂ, ಕೆಲವರು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ರೈಲು ಹತ್ತುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ ರೈಲು ಹತ್ತಬೇಕು. ರೈಲಿನಲ್ಲಿ ಪ್ರಯಾಣಿಸುವಾಗಲೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








