AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನಾನು ಅಮ್ಮ ಎಂದು ಪಿಸುಗುಟ್ಟುತ್ತಿದ್ದೇನೆ; ಅಗಲಿದ ತಾಯಿಯನ್ನು ನೆನೆದು ಕಣ್ಣೀರಿಟ್ಟ ಮಹಿಳೆ

ಆತ್ಮೀಯರ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವುದು ಕಷ್ಟ. ದಿನನಿತ್ಯ ಅವರ ನೆನಪಿನಲ್ಲೇ ನರಳಾಬೇಕಾಗುತ್ತದೆ. ಹೌದು, ಇಲ್ಲೊಬ್ಬ ಮಹಿಳೆಯೂ ತನ್ನ ತಾಯಿಯ ಅಗಲುವಿಕೆಯ ಬಗ್ಗೆ ಮಾಡಿರುವ ಪೋಸ್ಟ್ ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿದೆ. ಮಗಳ ಸಂದೇಶವನ್ನು ತಾಯಿಯೂ ನೋಡಲೇ ಇಲ್ಲ ಎನ್ನುವುದು ನಿಜಕ್ಕೂ ಬೇಸರ ತರಿಸಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಮಹಿಳೆಗೆ ಧೈರ್ಯ ತುಂಬಿದ್ದಾರೆ.

Viral: ನಾನು ಅಮ್ಮ ಎಂದು ಪಿಸುಗುಟ್ಟುತ್ತಿದ್ದೇನೆ; ಅಗಲಿದ ತಾಯಿಯನ್ನು ನೆನೆದು ಕಣ್ಣೀರಿಟ್ಟ ಮಹಿಳೆ
ಸಾಂದರ್ಭಿಕ ಚಿತ್ರImage Credit source: Twitter/ Pinterest
ಸಾಯಿನಂದಾ
|

Updated on: Oct 17, 2025 | 12:37 PM

Share

ಸಾವು ಎಂದರೇನೇ ಹಾಗೆ, ಒಂದು ಕ್ಷಣ ಎಲ್ಲರನ್ನು ಭಯ ಪಡಿಸುತ್ತದೆ. ಈ ಸಾವು ಎಲ್ಲರಿಗೂ ನೋವೇ, ಅದು ಯಾರದರೂ ಸರಿಯೇ. ಆಪ್ತರ ಸಾವಿನ ನೋವಿನಿಂದ ಹೊರಬರಲು ವರ್ಷಗಳೇ ಬೇಕಾಗುತ್ತದೆ. ಇನ್ನು ಹೆತ್ತವರ (Parents) ಅಗಲುವಿಕೆಯನ್ನು ಒಪ್ಪಿಕೊಳ್ಳುವುದು ಹಾಗೂ ಅರಗಿಸಿಕೊಳ್ಳುವುದು ಬಹಳ ಕಷ್ಟಕರ. ಪ್ರತಿಯೊಂದು ಕ್ಷಣದಲ್ಲೂ ತಂದೆ ತಾಯಿಯ ಇರುವಿಕೆಯೂ ಎಷ್ಟು ಅಗತ್ಯ ಎನ್ನುವುದು ಅರಿವಿಗೆ ಬರುತ್ತದೆ. ಅಂಜಲಿ (Anjali) ಎನ್ನುವ ಮಹಿಳೆ ತನ್ನ ತಾಯಿಯ ಅಗಲುವಿಕೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಾನು ಆಕೆಯೊಂದಿಗೆ ಹೋಗಬೇಕು ಎನ್ನುವ ಮಾತು ಬಳಕೆದಾರರ ಕಣ್ಣನ್ನು ಒದ್ದೆಯಾಗಿಸಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಮಾಡಿ ಸಾಂತ್ವನ ತುಂಬಿದ್ದಾರೆ.

ಅಂಜಲಿ (MsAnjalliB) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನಲ್ಲಿ ತನ್ನ ತಾಯಿಗೆ ಕಳುಹಿಸಿದ ಸಂದೇಶದ ಸ್ಕ್ರೀನ್ ಶಾಟ್‌ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಮ್ಮನ ಕೈಗಳನ್ನು ತನ್ನ ಕೈಗಳಲ್ಲಿ ಇರಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್ ಶಾಟ್‌ ನಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಅಮ್ಮ ನೀವು ಹುಷಾರಾಗಿ ನನ್ನ ಬಳಿ ಬರುವಿರಿ, ನೀನು ಹುಷಾರಾದಾಗ ಈ ಮೆಸೇಜ್ ನೋಡುತ್ತಿಯಾ ಹಾಗೂ ನಾವಿಬ್ಬರು ನಗುತ್ತೇವೆ, ಎಲ್ಲವೂ ಸರಿ ಹೋಗಲಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನನ್ನ ಅಮ್ಮ ದೊಡ್ಡ ಫೈಟರ್ ಎಂದು ಅವರು ಕೊನೆಯದಾಗಿ ತಮ್ಮ ತಾಯಿಗೆ ಸಂದೇಶ ಕಳುಹಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ಡ್ಯಾನ್ಸ್ ಮಾಡಿ ಮುದ್ದಿನ ಅಪ್ಪನನ್ನು ಮನೆಯೊಳಗೆ ಸ್ವಾಗತಿಸಿದ ಹೆಣ್ಣು ಮಕ್ಕಳು
Image
ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ, ಮಗನ ಸಂಭ್ರಮ ಹೇಗಿತ್ತು ನೋಡಿ
Image
ಎದೆಯ ಮೇಲೆ ಮಲಗಿರುವ ಪುಟ್ಟ ಪ್ರಪಂಚ, ಜೀವನ ನಿರ್ವಹಣೆಗಾಗಿ ಈ ಆಟೋ
Image
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್‌ಗೆ ಹೀಗೆ ಶೀರ್ಷಿಕೆಯನ್ನು ಬರೆದುಕೊಂಡಿದ್ದು, ನನ್ನ ಸೊಗಸಾದ ಅಮ್ಮ ಹೊರಟು ಹೋದಳು. ಆಕೆ ನಮ್ಮನ್ನು ಸೋಮವಾರ ಬಿಟ್ಟು ಹೋದಳು ಮತ್ತು ಈಗ ಮಂಗಳವಾರ ಬಂದಿದೆ. ನಾನು ಆಕೆಯ ಕೈ ಹಿಡಿದುಕೊಂಡು ಆಕೆಯ ಜೊತೆ ಹೋಗಬೇಕಿತ್ತು ಎಂದು ನನಗನಿಸುತ್ತಿದೆ. ನಾನು ನಿನ್ನ ಪ್ರೀತಿಸುತ್ತಿದ್ದೇನೆ ಅಮ್ಮ ಎಂದು ಪಿಸುಗುಟ್ಟುತ್ತಿದ್ದೇನೆ. ನನ್ನ ಮಾತುಗಳು ಆಕೆಯನ್ನು ತಲುಪಬಹುದು ಹಾಗೂ ಅದು ಓದದೆಯೇ ಬಾಕಿಯಾಗದು. ಈಗ ನಾನು ಅನಾಥೆಯಾಗಿದ್ದೇನೆ. ಆಕೆ ಇಲ್ಲದೇ ಹೇಗೆ ಬದುಕಬೇಕೆಂದೇ ನನ್ನ ಗೊತ್ತಿಲ್ಲ ಎನ್ನುವ ಹೃದಯಸ್ಪರ್ಶಿ ಸಾಲುಗಳು ಮನಸ್ಸಿಗೆ ಮುಟ್ಟುವಂತೆ ಇದೆ.

ಅಕ್ಟೋಬರ್ 14 ರಂದು ಹಂಚಿಕೊಳ್ಳಲಾದ ಪೋಸ್ಟ್ ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ಜೀವನದ ಕಹಿ ಸತ್ಯ, ಸುಂದರವಾದ ಆತ್ಮಗಳು ನಮ್ಮ ಜೀವನದಲ್ಲಿ ಹೇಗೆ ಯಾಕೆ ಹಾಗೂ ಯಾವಾಗ ಬಂದು ಹೊರಟು ಹೋಗುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಆದರೆ ಆಕೆ ನಿಮ್ಮ ಜೊತೆಗೆ ಯಾವಾಗಲೂ ಇರುತ್ತಾಳೆ. ಹಾಗೂ ಆಕೆಯ ಒಳ್ಳೆಯ ನೆನಪುಗಳ ಜೊತೆ ಬದುಕುವುದಕ್ಕೆ ಹಾಗೂ ಆಕೆ ಬಯಸಿದಂತೆ ನೀವು ಬದುಕುವುದಕ್ಕೆ ಕೇಳುತ್ತೇನೆ ನಿಮ್ಮನ್ನು ಆಕೆ ಮೇಲಿನಿಂದಲೇ ನೋಡಿ ಖುಷಿಪಡುವಳು ಎಂದು ಹೇಳಿದ್ದಾರೆ.

ಇದನ್ನೂ ಓದಿ:Video: ಡ್ಯಾನ್ಸ್ ಮಾಡಿ ಮುದ್ದಿನ ಅಪ್ಪನನ್ನು ಮನೆಯೊಳಗೆ ಸ್ವಾಗತಿಸಿದ ಹೆಣ್ಣು ಮಕ್ಕಳು

ಮತ್ತೊಬ್ಬರು, ನಿಮ್ಮ ತಾಯಿಯ ಅಗಲುವಿಕೆಗೆ ನಾನು ನನ್ನ ಹೃದಯ ಆಳದಿಂದ ಸಂತಾಪ ಸಲ್ಲಿಸುತ್ತೇನೆ. ಕೆಲವು ವರ್ಷಗಳ ಹಿಂದೆ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಆ ನೋವು ಇವತ್ತಿಗೂ ಕಡಿಮೆಯಾಗಿಲ್ಲ. ನಾನು ಇನ್ನೂ ನನ್ನ ತಾಯಿಯ ಬಗ್ಗೆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುತ್ತೇನೆ. ಈ ನೋವಿಗೆ ಯಾವುದೇ ಪರ್ಯಾಯ ಅಥವಾ ಪರಿಹಾರಗಳಿಲ್ಲ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಪ್ರೀತಿಪಾತ್ರರ ಅಗಲಿಕೆಯ ನೋವು ಕಡಿಮೆಯಾಗಲ್ಲ. ಆ ನೋವು ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ