Video: ಲಂಡನ್‌ನಲ್ಲಿ ಬಿಹಾರಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ, ದಿನದ ಗಳಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ
ಊರು, ದೇಶ ಯಾವುದಾದರೇನು, ಆತ್ಮವಿಶ್ವಾಸವಿದ್ದರೆ ಎಲ್ಲಾದ್ರೂ ಬದುಕಬಹುದು ಎನ್ನುವುದಕ್ಕೆ ಈ ವ್ಯಕ್ತಿಯೇ ನೈಜ ಉದಾಹರಣೆ. ಹೌದು, ಭಾರತೀಯನೊಬ್ಬನು ವಿದೇಶದಲ್ಲಿ ಸಮೋಸಾ ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದಾನೆ. ಈತನ ದಿನದ ಆದಾಯವು ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯ ವಾರ್ಷಿಕ ವರಮಾನವನ್ನೇ ಮೀರಿಸುವಂತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಲಂಡನ್, ಅಕ್ಟೋಬರ್ 30: ಬದುಕುವ ಛಲ, ಆತ್ಮವಿಶ್ವಾಸ ಹಾಗೂ ಬುದ್ಧಿವಂತಿಕೆಯಿದ್ರೆ ಎಲ್ಲಾದ್ರೂ ಬದುಕು ಕಟ್ಟಿಕೊಳ್ಳಬಹುದು. ನಮ್ಮಲ್ಲಿರುವ ಕೊರತೆಯೂ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಹೌದು ಸಾಮಾನ್ಯವಾಗಿ ಭಾರತೀಯ ಆಹಾರವನ್ನು ವಿದೇಶದಲ್ಲಿ ವಾಸಿಸುವ ನಮ್ಮವರು ಮಾತ್ರವಲ್ಲ ವಿದೇಶಿಗರು ಕೂಡ ಮಿಸ್ ಮಾಡಿಕೊಳ್ತಾರೆ. ಇದನ್ನೇ ಅರಿತುಕೊಂಡ ಬಿಹಾರಿ ವ್ಯಕ್ತಿಯೊಬ್ಬ (Bihari Man) ಲಂಡನ್‌ನಲ್ಲಿ (London) ಸಮೋಸಾ ಅಂಗಡಿ ತೆರೆದು ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾ ಇದ್ದಾನೆ. ಈ ವ್ಯಕ್ತಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಂಡನ್‌ನಲ್ಲಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ
biharisamosa.uk ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಬಿಹಾರಿ ವ್ಯಕ್ತಿಯೊಬ್ಬ ಸಮೋಸಾ ಮಾರಾಟ ಮಾಡುತ್ತಿದ್ದಾನೆ. ಘಂಟಾವಾಲಾ ಬಿಹಾರಿ ಸಮೋಸಾ ಹೆಸರಿಡಲಾಗಿದ್ದು, ಈ ವ್ಯಕ್ತಿಯೂ ಬಿಹಾರಿ ಸ್ಟೈಲ್ ನಲ್ಲಿ ಮಾತನಾಡುತ್ತಾ ಸಮೋಸಾ ಸೇಲ್ ಮಾಡುವ ಗ್ರಾಹಕರ ಮನಸ್ಸು ಗೆದ್ದಿದ್ದಾನೆ. ಬಿಹಾರಿ ಉಡುಪು, ಮಾತಾಡೋ ಸ್ಟೈಲ್, ಸಮೋಸಾ ತಯಾರಿಸುವ ರೀತಿಗೆ ಅಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ವಿದೇಶಿಗರು ಕೂಡ ಫಿದಾ ಆಗಿ ಹೋಗಿರುವುದನ್ನು ನೀವಿಲ್ಲಿ ನೋಡಬಹುದು. ಹೀಗಾಗಿ ಭಾರತೀಯರು ಸೇರಿದಂತೆ ವಿದೇಶಿಗರು ಸಮೋಸಾ ಖರೀದಿಸಿ ತಿನ್ನುವುದನ್ನು ಕಾಣಬಹುದು. ಕೆಲವರು ಸಮೋಸ ರುಚಿಗೆ ಕಳೆದು ಹೋಗಿ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವ್ಯಕ್ತಿಯ ದಿನದ ಗಳಿಕೆ ನೋಡಿ
ಇಂತಹ ರುಚಿಕರ ಸಮೋಸಾ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಅನ್ನೋದು ಈ ಸಮೋಸ ಸವಿದವರ ಮನಸ್ಸಿನ ಮಾತು. ಇದುವೇ ಈ ಬಿಹಾರಿ ವ್ಯಕ್ತಿಯ ಆದಾಯ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಲಂಡನ್‌ನಲ್ಲಿ ಸಮೋಸಾ ಮಾರಾಟ ಮಾರಾಟ ಮಾಡಿ ಪ್ರತಿ ದಿನ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾನೆ . ಹೌದು, ಎರಡು ಸಮೋಸಾವನ್ನು 5 ಡಾಲರ್‌ಗೆ ಮಾರಾಟ ಮಾಡಲಾಗುತ್ತಿದ್ದು, ದಿನಕ್ಕೆ 7500 ಡಾಲರ್‌ನಿಂದ 10,000 ಡಾಲರ್ ಆದಾಯ ಗಳಿಸುತ್ತಾನಂತೆ. ಅಂದರೆ ಭಾರತೀಯ ರೂಗಳಲ್ಲಿ ದಿನಕ್ಕೆ 9 -10 ಲಕ್ಷ ರೂ ಈ ವ್ಯಕ್ತಿಯ ಕೈ ಸೇರುತ್ತಿದೆ. ಅಚ್ಚರಿ ಎನಿಸಿದ್ರೂ ಈತನ ಸಮೋಸಾ ಮಾರಾಟದ ಟ್ರಿಕ್ಸ್‌ನ್ನು ನೀವು ಮೆಚ್ಚಲೇ ಬೇಕು.
ಇದನ್ನೂ ಓದಿ:ಕೋವಿಡ್ ಸಮಯದಲ್ಲಿ ವ್ಯವಹಾರದಲ್ಲಿ 2 ಕೋಟಿ ರೂ ನಷ್ಟ, ನಗುತಲೇ ಎಲ್ಲವನ್ನು ಜಯಿಸಿದ ಈ ವ್ಯಕ್ತಿ ಎಲ್ಲರಿಗೂ ಸ್ಫೂರ್ತಿ
ಈ ವಿಡಿಯೋ 1.8 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಅದ್ಭುತ ಸಹೋದರ, ನಿಮ್ಮ ವ್ಯಾಪಾರ ಹೀಗೆಯೇ ಮುಂದುವರೆಯಲಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ, ಹೀಗೆಯೇ ಮುಂದುವರೆಯಲಿ ಅಲ್ ದಿ ಬೆಸ್ಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಕೋಟ್ಯಾಧಿಪತಿ ಆದ ಬಳಿಕವೇ ಭಾರತಕ್ಕೆ ಬನ್ನಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








