Video: ಮಾತಿಗೆ ತಪ್ಪದೇ ಮನೆಮಾಲಕಿಯ ಪರ್ಸ್‌ನ್ನು ಕಾಯ್ದ ಮುದ್ದಿನ ಶ್ವಾನ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳೇ ಹಾಗೆ, ಬಹುಬೇಗನೇ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು ಮನೆ ಮಾಲಕಿಯ ಪರ್ಸ್ ಯಾರು ಮುಟ್ಟದಂತೆ ಮನೆಯ ಮುದ್ದಿನ ಶ್ವಾನವು ಕಾವಲು ಕಾದಿದೆ. ಈ ಹೃದಯ ಸ್ಪರ್ಶಿ ದೃಶ್ಯವನ್ನು ನೋಡಿ ನೆಟ್ಟಿಗರು ಕಳೆದೇ ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಶ್ವಾನಗಳ (Dog) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಇವುಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಮನೆಯ ಸದಸ್ಯರಂತೆ ಇರುವ ಶ್ವಾನ ಮನೆಯ ಮಾಲೀಕರಿಗೆ (owner) ನಿಷ್ಠಾವಂತರಾಗಿರುತ್ತವೆ. ಮಾಲಕಿ ಹೇಳಿದ ಮಾತನ್ನು ಚಾಚು ತಪ್ಪದ್ದಂತೆ ಪಾಲಿಸಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ತನ್ನ ಪರ್ಸ್‌ನ್ನು ಯಾರು ಮುಟ್ಟದ್ದಂತೆ ನೋಡಿಕೋ ಎಂದಿದ್ದೇ ತಡ, ಅತ್ತ ಇತ್ತ ಹೋಗದೇ ಈ ಶ್ವಾನವು ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಶ್ವಾನವು ಕರ್ತವ್ಯ ನಿಭಾಯಿಸಿದ ರೀತಿಯನ್ನು ಮೆಚ್ಚಿಕೊಂಡಿದ್ದಾರೆ.
ಈ ಶ್ವಾನದ ಕಾಯಕ ನಿಷ್ಠೆ ನೋಡಿ
maxthe goldenretrieverr ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮನೆ ಮಾಲಕಿ ಶ್ವಾನದ ಬಳಿ ತನ್ನ ಪರ್ಸ್‌ನ್ನು ಯಾರು ಮುಟ್ಟದಂತೆ ನೋಡಿಕೋ, ಇದರಲ್ಲಿ ತುಂಬಾ ದುಡ್ಡಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ. ಶ್ವಾನವು ಮಾಲಕಿಯ ಪರ್ಸ್‌ನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ಸೋಫಾದ ಮೇಲೆ ಮಲಗಿಕೊಂಡು ಕುಳಿತುಕೊಂಡಿದೆ. ಮಹಿಳೆಯ ಮಕ್ಕಳು ಅಮ್ಮನ ಪರ್ಸ್, ಸಾವಿರ ರೂ ಕೊಡು ಎಂದಾಗ ಕೋಪದಲ್ಲಿ ಬೊಗಳಿ ಪರ್ಸ್‌ನ್ನು ಯಾರು ಮುಟ್ಟದಂತೆ ನೋಡಿಕೊಂಡದ್ದು ಮಾತ್ರವಲ್ಲ ತನ್ನ ಹತ್ರ ಯಾರು ಬರಬೇಡಿ ಎಂದು ಗದರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ನೀರಿನಲ್ಲಿ ಆಟ ಆಡುತ್ತಿದ್ದ ಕಂದಮ್ಮನಿಗೆ ಗದರಿ ಬಾಲವನ್ನು ಹಿಡಿದು ಮೇಲೆಕ್ಕೆ ಎಳೆದೊಯ್ದ ತಾಯಿ ಶ್ವಾನ
ಈ ವಿಡಿಯೋ 3 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇವನಿಗಿಂತ ನಿಷ್ಠಾವಂತ ಕಾವಲುಗಾರ ಇರಲು ಸಾಧ್ಯವಿಲ್ಲ. ಇನ್ನೊಬ್ಬರು ನಂಬಿಕೆಗೆ ಉದಾಹರಣೆಯೇ ಈ ಶ್ವಾನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆ ಮಹಿಳೆಗೆ ಮಕ್ಕಳಿಗಿಂತ ಈ ಶ್ವಾನದ ಮೇಲೆ ನಂಬಿಕೆ ಜಾಸ್ತಿ ಎಂದು ಕಾಣಿಸುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Fri, 31 October 25








